ಬೈಟುಕಾಫಿ

ಮೂಡ್ ಬರಲು ಬೇಕಾದ ಆಹಾರಗಳು

ಮೂಡ್ ಬರಲು ಬೇಕಾದ ಆಹಾರಗಳು
Published On :

ಮೂಡ್ ಹಾಳುವ ಮಾಡುವ ಆಹಾರದ ಕುರಿತಾಗಿ ಜಾಗ್ರತೆ ವಹಿಸುವುದು ಉತ್ತಮ. ಯಾವುದೋ ಒಳ್ಳೆಯ ಕಾರ್ಯಕ್ರಮಕ್ಕೆ ಹೋಗಿರುತ್ತೀರಿ ಆದರೆ ಬೆಳಗ್ಗೆ ಅಸಂಬದ್ಧವಾದ ಆಹಾರ ಸೇವಿಸಿರುತ್ತೀರಿ. ಅನಾಯಾಯವಾಗಿ ಅಂದಿನ ದಿನವನ್ನು ಹ್ಯಾಪಮೋರೆ ಹಾಕಿಕೊಂಡು ಕಳೆದುಬಿಡುತ್ತೀರಿ. ಕಾರಣ ನಿಮ್ಮ ಮೂಡ್ ಕೈ ಕೊಟ್ಟಿರುತ್ತದೆ. ಉತ್ತಮ ಮನಸ್ಥಿತಿ ಒದಗಿಸುವ ಆಹಾರ ತಿನ್ನುವ ಪರಿಪಾಠ ಅನುಸರಿಸುವುದು ಉತ್ತಮ.
ಚಾಕೋಲೇಟ್ ತಿನ್ನುವ ಅಭ್ಯಾಸ ರೂಡಿಸಿಕೊಳ್ಳಿ. ಉತ್ತಮ ಮೂಡ್ ತರಿಸಿಕೊಳ್ಳಲು ಚಾಕೋಲೆಟ್ ಸವಿಯುವುದು ಸೂಕ್ತ. ಒತ್ತಡ, ಕೆಲಸದ ತೀವ್ರತೆ, ಆಯಾಸವಾದಂತೆಲ್ಲ ಚಾಕೋಲೇಟ್‌ನ ಒಂದು ಬಾರನ್ನು ಹಲ್ಲಲ್ಲಿ ಕಚ್ಚಿತಿನ್ನುವುದು ಒಳ್ಳೆಯ ಅಭ್ಯಾಸ. ಚಾಕೋಲೇಟ್‌ನಲ್ಲಿ ಅಧಿಕ ಕಾಬ್ರೋಹೈಡ್ರೇಟ್ ಇದ್ದು ಮೆದುಳಿಗೆ ಬೇಕಾದ ಟ್ರಿಪ್ಟೋಫೋನ್‌ಅನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆ ಮೂಲಕ ಒತ್ತಡ ನಿರ್ಮೂಲನೆಯಾಗಿ ಶಾಂತ ಮನಸ್ಥಿತಿಗೆ ಹಿಂದಿರುಗಲು ಸಾಧ್ಯ. ಚಾಕೋಲೆಟ್ ಅನಾಡಮೈಡ್ ಒದಗಿಸುವುದರಿಂದ ಮೆದುಳಿನ ಒತ್ತಡ, ಆಯಾಸ ತರುವಂತ ಭಾವನೆ ತಾತ್ಕಾಲಿಕವಾಗಿ ಬ್ಲಾಕ್ ಆಗಿಬಿಡುತ್ತವೆ. ಆದ್ದರಿಂದ 'ಫೀಲ್ ಗುಡ್‌' ಅನುಭವವಾಗುತ್ತದೆ. ಸೈಕೋಫಾರ್ಮಾಪೋಕೋಲಜಿ ಸಂಶೋಧಿಸಿರುವಂತೆ ದಿನನಿತ್ಯ ಒಂದು ಗ್ಲಾಸ್ ಚಾಕೋಲೆಟ್ ಜ್ಯೂಸ್ ಸೇವನೆ ಉತ್ತಮ ಮೂಡ್ ಒದಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಪ್ರೊಟಿನ್‌ಯುಕ್ತ ಆಹಾರ ಸೇವನೆ ಇರಲಿ. ಮೊಟ್ಟೆ, ಬೆಣ್ಣೆ, ಬಾದಾಮಿ ಇತ್ಯಾದಿ ಅಧಿಕ ಪ್ರೊಟಿನ್ ಇರುವ ಆಹರ ಸೇವನೆ ಗುಡ್ ಮೂಡ್‌ಗೆ ರಹದಾರಿಯಾಗಿದೆ. ರಕ್ತದೊತ್ತಡವನ್ನು ಸರಿಯಾದ ಪ್ರಮಾಣದಲ್ಲಿ ಕಾಯ್ದಿರುಸುವಲ್ಲಿ ಪ್ರೊಟಿನ್ ಇರುವ ಆಹಾರ ಪದಾರ್ಥಗಳು ಸಹಕರಿಸುತ್ತವೆ.
ಬಾಳೆಹಣ್ಣು ಸೇವನೆ ಫೀಲ್ ಗುಡ್‌ಗೆ ಸಹಕರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಡೊಪಮೈನ್ ಅಂಶವಿದ್ದು ಮೆದುಳಿನ ಸಂತುಷ್ಟಿಯನ್ನು ಪ್ರೇರೇಪಿಸುತ್ತದೆ. ಬಿ ವಿಟಮಿನ್‌ನಲ್ಲೂ ಬಾಳೆಹಣ್ಣು ಶ್ರೀಮಂತಿಕೆಯಿಂದ ಕೂಡಿದ್ದು ನರಗಳಿಗೆ ಶಕ್ತಿ ತುಂಬವ ಕೆಲಸ ನಿರ್ವಹಿಸುತ್ತದೆ. ಇನ್ಸೂಲಿನ್ ನಿರೋಧಕತೆ (ರೆಸಿಸ್ಟೆನ್ಸ್) ಇದ್ದಲ್ಲಿ ಬಾಳೆಹಣ್ಣುಗಳನ್ನು ಹೆಚ್ಚು ಸೇವಿಸಬಾರದು.
ಮೂಡ್‌ಗೆ ಸಂಬಂಧಿಸಿ ಕಾಫಿಯಲ್ಲಿ ಅಧಿಕ ಪ್ರಮಾಣದ ನಂಟಿದ್ದು ಪರಿಮಾಮಕಾರಿಯಾಗಬಲ್ಲುದು. ಬೆಳಗ್ಗಿನ ಒಂದು ಕಪ್ ಕಾಫಿ ದಿನಪೂರ್ತಿ ನವ ಚೈತನ್ಯದಲ್ಲಿರುವಂತೆ ಮಾಡುತ್ತದೆ. ಅರಿಶಿಣವೂ ಮನಸ್ಥಿತಿಯ ಆರೋಗ್ಯಕ್ಕೆ ನವ ಚೇತನವನ್ನೊದಗಿಸುತ್ತದೆ. ನ್ಯೂರೋಪ್ರೊಟೆಕ್ಟಿವ್ ಗುಣಗಳಿದ್ದು ಮೂಡ್‌ಅನ್ನು ಎಚ್ಚರಿಸುತ್ತದೆ. ನೇರಳೆಹಣ್ಣುಗಳಲ್ಲೂ ಮೆದುಳಿಗೆ ಫ್ರೆಶ್‌ನೆಸ್ ನೀಡುವ ರಾಸಾಯನಿಕಗಳಿವೆ. ಇದರಲ್ಲಿರುವ ಡೊಪಮೈನ್ ನೆನಪಿನ ಶಕ್ತಿ ಮತ್ತು ಮನಸ್ಥಿತಿಯ ಚೇತರಿಕೆಗೆ ಉತ್ತಮ ಮದ್ದಾಗಿದೆ. ಮಾಂಸಾಹಾರದಿಂದ ಸಿಗುವ ಒಮೆಗಾ 3 ಕೊಬ್ಬಿನಂಶವೂ ಈ ದೃಷ್ಟಿಯಲ್ಲಿ ಸಕಾರಾತ್ಮಕವಾಗಿದೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.