ಸಾಪ್ತಾಹಿಕಪ್ರಭ

ಘ್ನಾನಪೀಠ

Published On :

ಬಿಗ್‌ಬಾಸ್‌ನಲ್ಲಿ ರೇಣುಕಾಚಾರ್ಯ ಏಕಿಲ್ಲ?
 -ಅಂದಾನಯ್ಯ ತಿಗರಿಮಠ್, ಅಳವಂಡಿ


ವೈನ್‌ಶಾಪ್‌ಗಳ ದೇವರ ಹೆಸರು ತೆಗೆಸಿದರೆ ಅಂಗಡಿ ಕಂಡುಹಿಡಿಯುವುದಾದರೂ ಹೇಗೆ?
 -'ದೇವರು' ಮೈಮೇಲೆ ಬಂದಿರುವ ಭಕ್ತರನ್ನು ಕೇಳಿದರೆ ಗೊತ್ತಾಗುತ್ತೆ!

-ಪಿ.ಜಿ. ರಾಘವೇಂದ್ರ, ಮೈಸೂರು.
ಬಿಗ್‌ಬಾಸ್‌ನಲ್ಲಿ ರೇಣುಕಾಚಾರ್ಯ ಏಕಿಲ್ಲ?
-ಅವರು 'ಪೆಗ್ ಬಾಸ್‌' ಆಗಿಯೇ ಬಹಳ ಬ್ಯುಸಿ ಇದ್ರಲ್ಲ!
 
-ವಿಶ್ವಸುಹೃದಯ, ದಾವಣಗೆರೆ
ಅಂದಿನ ಸ್ವಾಮೀಜಿಯವರು ಪವಾಡಗಳನ್ನು ಮಾಡುತ್ತಿದ್ದರು, ಇಂದಿನ ಸ್ವಾಮೀಜಿಯವರು? -ಇಂದಿನವರು ಹೆಸರನ್ನು ಕೆಡಿಸಿಕೊಳ್ಳದಿರುವುದೇ ಒಂದು ಪವಾಡ!

-ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ.
ಪಾಪಿಗಳಿಗೂ ಪಾಪ ಪ್ರಜ್ಞೆ ಕಾಡುತ್ತಿದೆಯ?
- ಆ ರೀತಿಯ ಪ್ರಜ್ಞೆ ಇದೆಯೆಂಬುದೇ ಪಾಪಿಗಳಿಗೆ ಗೊತ್ತಿಲ್ಲ!

-ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಂದೊಮ್ಮೆ ಮಾನವನಿಗೆ ನಿದ್ದೆಯೇ ಇಲ್ಲದಿದ್ರೆ?
- 'ಬೇಗ ಚಿರನಿದ್ರೆ'ಗೆ ಜಾರುತ್ತಿದ್ದ!

-ವಿ. ಹೇಮಂತ್‌ಕುಮಾರ್, ಬೆಂಗಳೂರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಗಂಡೊಂದು ಕಲಿತರೆ?
-ದುರಭ್ಯಾಸ ಕಲಿತರೆ ಹಲವಾರು ಬಾರ್‌ಗಳು ತೆರೆಯುತ್ತವೆ!

-ಹೆಡತಲೆ ಮಾದನಾಯಕ, ಮೂಡಲಪಾಳ್ಯ.
ರಾಹುಲ್ ಪ್ರಧಾನಿಯಾದರೆ ಈ ದೇಶ ಹೇಗಿರುತ್ತದೆ?
- ರಾ'ಹುಲ್ಲುಗಾವಲು' ಆಗಬಹುದು!

ಕೋಲ್ಯ ಗರ್ಲ್‌ಫ್ರೆಂಡನ್ನು ಕರ್ಕೊಂಡು ಸಿನಿಮಾಕ್ಕೆ ಹೋದ. ಟಿಕೆಟ್ ಕೌಂಟರ್‌ನಲ್ಲಿದ್ದೋನಿಗೆ ಹೀಗೆ ಹೇಳಿದ, 'ಎರಡು ಕಾರ್ನರ್ ಟಿಕೆಟ್ ಕೊಡಿ'.
ಅವನು ಎರಡು ಟಿಕೆಟ್ ಕೊಟ್ಟ. ಸೀಟ್ ನಂಬರ್ ಹೀಗಿತ್ತು, ಆ1, ಆ25.

ಕೋಲ್ಯನಿಗೆ ಸಿಕ್ಕಾಪಟ್ಟೆ ಮರೆವು. ಹೀಗಾಗಿ ಅವನು ಮಧ್ಯರಸ್ತೇಲಿ ಲಂಚ್ ಬಾಕ್ಸ್ ಓಪನ್ ಮಾಡಿ ನೋಡ್ತಿದ್ದ. ಯಾಕೆ ಗೊತ್ತಾ? ಆಫೀಸ್‌ಗೆ ಹೋಗ್ತಿದ್ದೀನೋ, ಬರ್ತಿದ್ದೀನೋ ಅಂತ ಗೊತ್ತಾಗೋದಿಕ್ಕೆ! ಟೀಚರ್: ಕಿತ್ತಳೆ ಮತ್ತು ಸೇಬುಗಿರುವ ವ್ಯತ್ಯಾಸವೇನು?
ಕೋಲ್ಯ: ಕಿತ್ತಳೆ, ಕಿತ್ತಳೆ ಬಣ್ಣದ್ದು. ಆದರೆ ಸೇಬು, ಸೇಬು ಬಣ್ಣದ್ದಲ್ಲ.

ಟೀಚರ್: ಎದುರಿಗಿರುವ ವ್ಯಕ್ತಿಗೆ ಆಸಕ್ತಿ ಇಲ್ಲದಿದ್ದರೂ ಗಂಟೆಗಟ್ಟಲೆ ಮಾತನಾಡಿ, ತಲೆನೋವು ತರುವ ವ್ಯಕ್ತಿಗೆ ಏನಂತ ಕರೀತಾರೆ?
ಕೋಲ್ಯ: ಟೀಚರ್!

ಟೀಚರ್: ಯಾಕೆ ಲೇಟಾಗಿ ಬಂದೆ?
ಕೋಲ್ಯ: ನಮ್ಮ ಸ್ಕೂಲ್ ಹತ್ತಿರ 'ಶಾಲಾವಲಯ ನಿಧಾನವಾಗಿ ಚಲಿಸಿ' ಅಂತ ಬೋರ್ಡಿತ್ತು. ಅದಕ್ಕೆ 2 ನಿಮಿಷ ಲೇಟಾಯ್ತು.
ಕೋಲ್ಯ ಅಮೆರಿಕ ವಾಸಿ. ಅವನಿಗೊಬ್ಬಳು ಮಗಳಿದ್ದಳು. ಒಂದೊಮ್ಮೆ...
ಮರಿಕೋಲ್ಯಿಣಿ: ಸಾರಿ, ಡ್ಯಾಡ್ ನಾನು ನಿನ್ನೆ ಮದ್ವೆಯಾದೆ. ಆ ಅಜೆಂಟಲ್ಲಿ ನಿನ್ನ ಕರೆಯೋದೇ ಮರೆತುಬಿಟ್ಟೆ.
ಕೋಲ್ಯ: ಯು ನಾಟಿ, ಇಟ್ಸ್ ಓಕೆ. ಆದ್ರೆ, ನೆಕ್ಸ್ಟ್ ಟೈಮ್ ನನ್ನ ಮರೆಯದೇ ಕರೀಬೇಕು. <
ಇನ್ಸ್‌ಪೆಕ್ಟರ್: ಕಳ್ಳನನ್ನು ಹಿಡಿದ್ಯಾ?
ಕಾನ್ಸ್‌ಟೇಬಲ್: ಇಲ್ಲಾ, ಆದರೆ ಅವನ ಗುರುತು ಪತ್ತೆಹಚ್ಚಿದೆ.
ಇನ್ಸ್‌ಪೆಕ್ಟರ್: ಏನು ಗುರುತು?
ಕಾನ್ಸ್‌ಟೇಬಲ್: ಕಪಾಳಕ್ಕೆ ಬಾರಿಸಿದ. ಫಿಂಗರ್‌ಪ್ರಿಂಟ್ ಸಿಕ್ಕಿದೆ.

-ಘಾಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.