ಸಾಪ್ತಾಹಿಕಪ್ರಭ

ಘ್ನಾನ ಪೀಠ

Published On :

ರವಿಕುಮಾರ್ ಜಿ.ಬಿ. ಬೆಂಗಳೂರು.
    ಬಿಗ್‌ಬಾಸ್‌ನಲ್ಲಿ ನಿತ್ಯಾನಂದ ಕಾಣಿಸಿಕೊಂಡರೆ ಏನಾಗುತ್ತೆ?
    -ಆಗ ಚಂದ್ರಿಕಾಗೆ ಖುಷಿಯಾಗಿ, ರಂಜಿತಾಗೆ
    ಬೇಜಾರಾಗಬಹುದು!

    ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
    ಜಯದ ಗುರಿಯ ಮುಂದೆ ಬಂಧು ಬಾಂಧವರು ಗೌಣವೇ?
    -ಜಯ ಬಂದಾಗ ಹಿಂದೆ ಅವರೆಲ್ಲ ಇದ್ದೇ ಇರ್ತಾರಲ್ಲ!
    
    ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
    ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಶಾಲೆಗಳಂತೆ ಸರ್ಕಾರಿ ಹೋಟೆಲ್‌ಗಳೇಕಿರುವುದಿಲ್ಲ ಸಾರ್?
    -ಎಲ್ಲಾ ಗಲೀಜೂ ಒಂದೇ ಕಡೆ ಇರಬಾರದೂಂತ!

    ಲಕ್ಷ್ಮೀ ಬರ್ಕ್‌ಲಿ ರಮೇಶ, ಮಂಡ್ಯ.
    ಚುನಾವಣೆಗೆ ನಿಲ್ಲಬೇಕೆಂದಿದ್ದೇನೆ, ತಮ್ಮ
    ಅಭಿಪ್ರಾಯವೇನು?
    -ಮೊದಲು ಅಂಬರೀಷ್‌ರ ಒಪ್ಪಿಗೆ ಪಡೆಯಿರಿ!

    ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
    ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡ್ಡಿಗೆ 40 ವರ್ಷ ಬೇಕಾಯ್ತು. ಇನ್ನು ಕೆಜೆಪಿಯನ್ನು ಅಧಿಕಾರಕ್ಕೆ ತರಲು ಎಷ್ಟು ವರ್ಷ ಬೇಕು?
    -ವರ್ಷ ಯಾಕೆ ನಾಡಿದ್ದು ಮೇ 8ಕ್ಕೆ ನೋಡಿ!

    ಪಿ.ಜೆ. ರಾಘವೇಂದ್ರ, ಮೈಸೂರು.
    ಜಯಲಕ್ಷ್ಮಿ ಸಿಎಂ ಆದರೆ, ರೇಣುಕಾಚಾರ್ಯ?
    -ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ!

    ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
    ಎಲ್ಲಾ ದೇವರುಗಳು ನಿಂತಿದ್ದರೆ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಮಲಗಿರುವ ಗುಟ್ಟೇನು?
    -ವರ ಕೊಡಲಿಕ್ಕೆ ತಲೆ ಮತ್ತು ಕೈ ನೇರವಾಗಿದ್ರೆ ಸಾಕು ಅಂತ ಇರಬಹುದು!

    ಉಜ್ಜನಿ ಜಲೇಂದ್ರ, ಚನ್ನಪಟ್ಟಣ.
    ಮತದಾನಕ್ಕೆ ಮದ್ಯಪಾನ ನಂಟು ಶುರುವಾಗಿದ್ದು ಯಾವಾಗ?
    -ಯಾರಿಗೆ ಮತ ಹಾಕಬೇಕು ಅಂತ ತಲೆ ಕೆಡಿಸ್ಕೊಂಡಾಗ!

    ಸ್ವಾಮಿ ನಿರ್ಮಲಾ, ಉಡಿಗಾಲ.
-ಮದುವೆಯಾದರೆ ಜಗತ್ತಿನ ಸಂತೋಷವೆಲ್ಲ ಸಿಗುತ್ತದಂತೆ ನಂಬಬಹುದೇ ಸಾರ್:
    -ಅದರ ಜೊತೆ ದುಃಖ ಫ್ರೀ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.