ನುಡಿದದ್ದೇ ವೇದ ನಡೆದದ್ದೇ ದಾರಿ
ಈ ರಾಜ್ಯದ ರಾಜ ಅಕಾಲ ಮರಣಕ್ಕೀಡಾಗಿದ್ದಾನೆ
ಆನೆಯ ಸೊಂಡಿಲಿಗೆ ಹಾರ ಸಿಕ್ಕಿಸಿ ಬೀದಿಗೆ ಬಿಡುವುದಿಲ್ಲ
ಅಲ್ಲೆ ನಿಮ್ಮೊಳಗೆ ಬಡಿದಾಡಿಕೊಂಡು ಯಾರಾದರೊಬ್ಬರು ಈ ರಾಜ್ಯವನ್ನಾಳಬಹುದು
ಇನ್ನು ಮುಂದೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗುವುದಿಲ್ಲ
ಎಲ್ಲವನ್ನೂ ಪ್ರದರ್ಶನಕ್ಕಿಡಲಾಗಿದೆ
ಬೇಕಿದ್ದರೆ ಸೂಕ್ತ ಬೆಲೆ ತೆತ್ತು ನೀವೂ ಕೊಂಡುಕೊಳ್ಳಬಹುದು
ಆ ಉರಿಗದ್ದಿಗೆಯ ಮೇಲೆ ಈಗ ಎಳ್ಳು ಸಿಡಿಯುವುದಿಲ್ಲ
ಕುತ್ತಿಗೆಗೆ ಕಟ್ಟಿದ ಬದನೆಕಾಯಿ ಲಿಂಗವಾಗದಿದ್ದರೂ
ಜಂಗಮನಾಗಿ ನೀವೂ ಗದ್ದುಗೆ ಏರಬಹುದು
ಉರಿಗೈಯನ್ನು ಎಷ್ಟು ಬಾರಿ ತಲೆ ಮೇಲಿಟ್ಟರೂ ಬೂದಿಯಾಗುವುದಿಲ್ಲ
ನೀವು ಭಸ್ಮಾಸುರರೆಂದು ತಿಳಿಯುವ ತನಕ
ನಿರ್ಭಯರಾಗಿ ಯಾರ ತಲೆಯ ಮೇಲೆ ಬೇಕಾದರೂ ಕೈಯಿಡಬಹುದು
ಇಂದು ಅಂದಿನಂತೆ ಪಾಪ ಪುಣ್ಯ ಸ್ವರ್ಗ ನರಕಗಳ ಭಯವಿಲ್ಲ
ಶಿಕ್ಷಿಸುವ ಕೈ ಬಂಧೀಖಾನೆಯಲ್ಲಿ ಸೆರೆಯಾಳಾಗಿದೆ
ಇನ್ನೇನಿದ್ದರೂ ನೀನು ಆಡಿದ್ದೇ ವೇದ ನಡೆದಿದ್ದೇ ದಾರಿ.
- ಸ್ವಾಮಿ ಪೊನ್ನಾಚಿ, ಕೊಳ್ಳೆಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

