ವರ ವರದಾನ

'ಗಾನ ಗಾರುಡಿಗ' ಪಿಬಿಶ್ರೀ ಅವರ ಕೊನೆಯ ಕವನ ಇದು. ಅವರು ಸೊಗಸಾಗಿ ಹಾಡುವಂತೆ, ಅಷ್ಟೇ ಸೊಗಸಾಗಿ ಸಾಲುಗಳನ್ನೂ ಗೀಚುತ್ತಿದ್ದರು. ಅವರು ಇಹಲೋಕ ತ್ಯಜಿಸುವ ಹಿಂದಿನ ದಿನ, ಏ.13ರ ಸಂಜೆ ಈ ಕವನ ಬರೆದರು. ಶ್ರೀ ಅವರ ಕೊನೆಯ ದಿನಗಳ ಭಾವಗಳೆಲ್ಲ ಇಲ್ಲಿ ಮಿಳಿತವಾಗಿವೆ. ಈ ಎಕ್ಸ್ಕ್ಲ್ಯೂಸಿವ್ ಕವಿತೆಯನ್ನು 'ಸಾಪ್ತಾಹಿಕ ಪ್ರಭ'ಕ್ಕಾಗಿ ಕಳುಹಿಸಿಕೊಟ್ಟವರು ಪಿಬಿಶ್ರೀ ಮಿತ್ರರೂ ಆದ ಚಾರ್ಟೆಡ್ ಅಕೌಂಟೆಂಟ್ ಶ್ರೀಪಾದ್.
ಕಾಲವು ಬದಲಾದಾಗ
ಎಲ್ಲರೂ ಬದಲಾಗುವರು!
ಬಾಳಿನ ಪ್ರಶ್ನೆಗೆ ತಕ್ಕಂತೆ ಬದಲಾಗುವರು
ಯಾವುದು ಬದಲಾಗುವುದಿಲ್ಲ
ಜೀವನ ಪಯಣದ ಅವಸಾನ!
ಹೆಜ್ಜೆ ಹೆಜ್ಜೆಯಲ್ಲಿ ಅವಸಾನವಿದೆ
ಎಚ್ಚರ ಎಚ್ಚರ! ಜೋಪಾನ! ಜೋಪಾನ! ಸದಾ ಜೋಪಾನ!
ಎಂಥ ಕ್ಲಿಷ್ಟ ಪರಿಸ್ಥಿತಿಯಲ್ಲೂ ಈಶ್ವರನ ಪೂರ್ಣ ಸಹಕಾರವಿದೆ
ಚಿಂತೆಯೇ ಬೇಡ ಬಾಡುವ ಮನವೇ!
ಶಾಂತಿಯ ಕಾಂತಿಯ ನಿಧಿಯನು ಪಡೆವೆ!
ಶಾಶ್ವತವಲ್ಲ ಕತ್ತಲ ತೆರೆ
ಸಂತಸ ತರುವುದು ಆತ್ಮನಿರ್ಭರತೆ
ಆತ್ಮನಿರ್ಭರತೆ ದೇವರ ವರದಾನ
ಆನಂದ ಪ್ರದ ನಾಮ ಗಾನಪಾನ
- ಪಿ.ಬಿ. ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


