ರಗಳೆ: ಕವಿ ಬರೆದದ್ದು ಅಥವಾ ಕವಿ ಬರೆದದ್ದನ್ನು ಓದುವುದು.
ಸೀಮೆಎಣ್ಣೆ: ಗಡಿಯಲ್ಲಿ ಮಾರುತ್ತಿದ್ದ ಸಾರಾಯಿ.
ಸುಳ್ಳು: ನಾಲಗೆಯ ತುದಿಯಲ್ಲಿ ಸ್ಟಾಕ್ ಇರುವಂಥದ್ದು.
ಭಾಷಣ: ಅನಾಸಿನ್ನ ದಾಖಲೆಯ ಮಾರಾಟಕ್ಕೆ ಕಾರಣ ಇದೇ.
ಆಸ್ಪತ್ರೆ: ರೋಗಿಗಳ ಲಾಡ್ಜ್.
ಟೀ: 'ಕಾಫಿ ಸರಿಯಿಲ್ಲ' ಎಂದು ಟೀಕಿಸುವವರು ಕುಡಿಯುವ ಪೇಯ.
ಮೀಸೆ: ಗಂಡಸರ ಬಾಯಿಯಿಂದ ಮೇಲೆ, ಮೂಗಿನಿಂದ ಕೆಳಗೆ ಹಬ್ಬಿರುವ ಕಪ್ಪು ಹುಲ್ಲುಗಾವಲು ಪ್ರದೇಶ.