ಆಟ: ಸೋಲುವವರು ಮತ್ತು ಗೆಲ್ಲುವವರ ನಡುವಿನ ಸ್ಪರ್ಧೆ.
ಕಾಮ: ಸನ್ಯಾಸಿಗಳೂ ವಾಕ್ಯದ ನಡುವೆ ಇದನ್ನು ಬಳಸುತ್ತಾರೆ.
ಬ್ಯೂಟಿಪಾರ್ಲರ್: ಹುಡುಗಿಯರ
ವ್ಯಾನಿಟಿ ಬ್ಯಾಗ್.
ಟೈ: ಬಟ್ಟೆ, ಟೈಲರ್ ಇಲ್ಲದೆಯೂ
ಆಟಗಾರರು ಟೈ ಮಾಡಿಕೊಳ್ಳುತ್ತಾರೆ.
ಸ್ನಾನ: ವಿನಾಕಾರಣ ನೀರು ಪೋಲು ಮಾಡುವ ಕ್ರಿಯೆ.
ವಾಕಿಂಗ್: ಬೊಜ್ಜು ಬಂದಾಗ ನೆನಪಾಗುವ ವ್ಯಾಯಾಮ.
ಬಾಡಿಗೆ: ವೇಶ್ಯೆ ತನ್ನ 'ಬಾಡಿ'ಯನ್ನು ಸಮಾಜಕ್ಕೆ ತೆರೆದಿಟ್ಟ ಪರಿ.
ಅಂಡರ್ವೇರ್: ಒಂಥರ ಎಲೆಮರೆಕಾಯಿ.
ಕೋಲ್ಯ ಅಂದು ಸಿಕ್ಕಾಪಟ್ಟೆ ಕುಡಿದು ಮನೆಗೆ ಹೋಗಿದ್ದ. ಹೆಂಡ್ತಿ ಕಂಡಾಗ ಅವನಿಗೆ ಪ್ರೀತಿ ಉಕ್ಕಿತು. ಆಕೆಯ ತುಟಿ ಚುಂಬಿಸಲು ಹೋದ.
ಹೆಂಡ್ತಿ: ನಿಮ್ಮ ತುಟಿ ವೈನನ್ನು ಟಚ್ ಮಾಡಿದ್ರೆ, ನನ್ನ ತುಟಿ ಟಚ್ ಮಾಡುವ ಅಗತ್ಯವಿಲ್ಲ.
ಕೋಲ್ಯ: ಓಹೋ.....!
ಹೆಂಡ್ತಿ: ಏನು ಯೋಚಿಸ್ತಿದ್ದೀರಿ?
ಕೋಲ್ಯ: ಏನಿಲ್ಲ... 18 ವರ್ಷ ಹಳೆಯ ವೈನ್ ಬೆಸ್ಟಾ, 42 ವರ್ಷದ ಹೆಂಡ್ತಿ ಬೆಸ್ಟಾ ಅಂತ ಡಿಸೈಡ್ ಮಾಡ್ತಾ ಇದ್ದೀನಿ.