ಕೋಲ್ಯ ಹುಟ್ಟಿದ್ದೇ ಆಫ್ರಿಕದಲ್ಲಿ. ಅವನಿಗೊಬ್ಬಳು ಗರ್ಲ್‌ಫ್ರೆಂಡ್ ಇದ್ದಳು. ದಿನಾ ರಾತ್ರಿ 8 ಗಂಟೆಗೆ ಅವರು ಕೇಪ್ ಆಫ್ ಗುಡ್ ಹೋಪ್‌ನ ಆ ಬೀಚ್‌ನಲ್ಲಿ ಭೇಟಿಯಾಗುತ್ತಿದ್ದರು. ಪ್ರತಿ ಬಾರಿಯೂ ಅವರ ಭೇಟಿಯ ದೃಶ್ಯ ಹೀಗಿರುತ್ತದೆ...
ಗರ್ಲ್‌ಫ್ರೆಂಡ್ ಅಲ್ಲೇ ಕಾಯುತ್ತಿರುತ್ತಾಳೆ. ಕೋಲ್ಯ ಅವಳ ಬಳಿಗೆ ಹೋಗಿ ಹೇಳುತ್ತಾನೆ. 'ವಾತಾವರಣ ಎಷ್ಟೊಂದು ರೋಮ್ಯಾಂಟಿಕ್ ಆಗಿದೆ. ಸಾಗರ ಹೊತ್ತು ತರುವ ಗಾಳಿ ಎಷ್ಟು ಬೆಚ್ಚಗಿದೆ. ನಕ್ಷತ್ರಗಳು ಹೃದಯವನ್ನು ದೋಚಲೆಂದೇ ಮೋಹಕವಾಗಿ ಮಿನುಗುತ್ತಿವೆ. ಪ್ರಿಯೆ, ಈ ಮಧುರ ರಾತ್ರಿಯಲ್ಲಿ ನೀನೆಲ್ಲಿದ್ದೀಯಾ? ಒಮ್ಮೆ ಮಾತಾಡು... ಇಲ್ಲಾಂದ್ರೆ ಹಲ್ಲಾದರು ಬಿಡು ಮಾರಾಯ್ತಿ, ಎಲ್ಲಿದ್ದೀಯ ಅಂತ ಗೊತ್ತಾಗ್ಲಿ'!