ಸಾಪ್ತಾಹಿಕಪ್ರಭ

ಕೆಜೆಪಿಯವರು ತೆಂಗಿನಕಾಯಿ ಕೊಟ್ರೆ ಕಾಂಗ್ರೆಸ್‌ನೋರು ಏನು ಕೊಡ್ತಾರೆ?

Published On :

    ಓಂ. ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
= ಪೂಜಾಗಾಂಧಿ ತ್ರಿಭಾಷಾ ನಟಿಯಾಗೋದು ಬಿಟ್ಟು 'ತ್ರಿಪಕ್ಷ' ರಾಜಕಾರಣಿಯಾಗಿದ್ದಾಳಲ್ಲ?
    -ಅದಕ್ಕೆ ಈಗ 'ತ್ರಿಶಂಕು' ಸ್ಥಿತಿಯಲ್ಲಿರೋದು!

    ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
= ಹೆಣ್ಣು ಸತ್ತರೆ ಮೋಹಿನಿ, ಗಂಡು ಸತ್ತರೆ?
    -ಕೆಲವರು ಬಿಳಿ ಬಟ್ಟೆ ಹಾಕ್ಕೊಂಡಿರೋ ಪುಢಾರಿಗಳಾಗ್ತಾರಂತೆ!

    ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
= ಚುನಾವಣಾ ಪ್ರಚಾರಕ್ಕೆ ಐಷಾರಾಮಿ ವಾಹನಗಳೇಕೆ?
    -ಕೊಳ್ಳೆ ಹೊಡೆಯಲು ಹಿಂದೆಲ್ಲ 'ರಥ'ಗಳಲ್ಲೇ ಬರುತ್ತಿದ್ದರಲ್ಲ!

    ಬರ್ಕ್‌ಲಿ ರಮೇಶ್ ಕಿರಗಂದೂರು, ಮಂಡ್ಯ
= ಮಹಾತ್ಮಗಾಂಧಿಗೂ, ಸೋನಿಯಾಗಾಂಧಿಗೂ ವ್ಯತ್ಯಾಸವೇನು?
    -ಅಜ್ಜ ಮನೆ ಕಟ್ಟಿದ, ಸೊಸೆ 'ದರ್ಬಾರ್‌' ನಡೆಸ್ತಿದ್ದಾಳೆ!

    ಜೆ.ಆರ್. ಆದಿನಾರಾಯಣಮುನಿ, ಶ್ರೀ ಕೋಡಿಹಳ್ಳಿಮಠ
    ಸದ್ದಿಲ್ಲದೆ ಬದುಕುವುದು ಸಾಧ್ಯವೇ?
    -ಬದುಕಿಗೆ 'ಸೈಲೆನ್ಸರ್‌' ಅಳವಡಿಸಿಕೊಂಡು ನೋಡಬೇಕು!

    ದೀಪಾ. ಕೆ. ವಿಭೂತಿ, ಹರಿಹರ
    ಕಲಿಯುಗದಲ್ಲಿ ಮಾನವೀಯ ಧರ್ಮ ಎಷ್ಟು ಕಾಲಿನ ಮೇಲೆ ನಿಂತಿದೆ?
    -ಅದರ ಕಾಲ ಮೇಲೆ ಅದು ನಿಲ್ಲೋದೇ ಕಷ್ಟ!

    ಪಿ.ಜೆ. ರಾಘವೇಂದ್ರ, ಮೈಸೂರು
= ಕೆಜೆಪಿಯವರು ತೆಂಗಿನಕಾಯಿ ಕೊಟ್ರೆ ಕಾಂಗ್ರೆಸ್‌ನೋರು ಏನು ಕೊಡ್ತಾರೆ?
    -'ತೆಂಗಿನಕಾಯಿ' ಕೀಳಲು 'ಕೈ' ಕೊಡ್ತಾರೆ!
    ವಿ. ಹೇಮಂತ್‌ಕುಮಾರ್, ಬೆಂಗಳೂರು
= ಅಗ್ನಿ ಸಾಕ್ಷಿಗೂ ಪ್ರೇಮಸಾಕ್ಷಿಗೂ ವ್ಯತ್ಯಾಸವೇನು?
    -ಅಗ್ನಿ ಸಾಕ್ಷಿಗೆ ಕಲ್ಯಾಣಮಂಟಪ ಬೇಕು, ಪ್ರೇಮಸಾಕ್ಷಿಗೆ ಪಾರ್ಕ್ ಸಾಕು!

    ವಿಷ್ಣುಶಂಕರ್, ಶಿವಮೊಗ್ಗ
= ಈ ಪ್ರಪಂಚದಲ್ಲಿ ಜಗಳವಾಡದೆ ಸಂಸಾರ ನಡೆಸುವ ದಂಪತಿಗಳು ಇದ್ದಾರ ಘ್ನಾನಣ್ಣ?
    -ಇದ್ದಾರೆ, ಹೆಂಡತಿ ಬೆಂಗಳೂರಿನಲ್ಲಿ, ಗಂಡ ಅಮೇರಿಕದಲ್ಲಿ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.