ಎಲೆಕ್ಷನ್ ಟೈಮಿನಲ್ಲಿ ಬಾಬಾನ ಕಾಲಿಗೆ ಬಿದ್ದವರೆಲ್ಲಾ ಗೆದ್ದರೆ, ಸೋಲು ಯಾರಿಗೆ ?
ಪೇಂಟರ್ ಪಾಪು, ಸಂತೇಮರಹಳ್ಳಿ
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುತ್ತಾರೆ ಯಾಕೆ ?
- ಕೆಲವು ಡಾಕ್ಟ್ರೇ ಹಾಗೆ, ತಲೆ ನೋವು ಅಂದ್ರೆ ಹೊಟ್ಟೆ ಕುಯ್ತಾರೆ !
ವಿ.ಹೇಮಂತಕುಮಾರ್, ಬೆಂಗಳೂರು
ಕದ್ದಿರೋ ಹೃದಯ ಕೊಡು ಅಂತ ಕೇಳ್ತಿದ್ದಾಳಲ್ಲ ?
- ಸಂಡೇ ಬಜಾರಲ್ಲಿ ಮಾರಿದೆ ಅಂತ ಒಪ್ಪಿಕೊಂಡು ಬಿಡಿ !
ಬಿ.ಎಂ.ಪರಶಿವಮೂರ್ತಿ, ಬೆಂಗಳೂರು
ಜ್ವರ ನೋಡೋಕೆ ಥರ್ಮಾಮೀಟರ್ ಇದೆ, ಹಾಗೇ ನಮ್ಮ ಗೌರವ ಎಷ್ಟಿದೆ ಅಂತ ನೋಡೋಕೆ ?
- ಯಾರಾದರೂ 'ಮೀಟರ್' ಇದ್ದವರನ್ನು ಕೇಳಬೇಕು !
ಓಂ ಚನ್ನೇಶ್ ಅರಬಿಳಕ್ಯಾಂಪ್, ಭದ್ರಾವತಿ
ಸುಂಟರಗಾಳಿ ಮತ್ತು ಮಳೆ ಫ್ಯಾನ್ ಜೊತೆ ಸೇರಿದರೂ ಬಳ್ಳಾರಿ ಮಾತ್ರ ತಂಪಾಗಲಿಲ್ಲ ?
- ಫ್ಯಾನ್ ಬುಡದಲ್ಲಿ ಮತ್ತಷ್ಟು ಕೆಸರಾಯ್ತು ಅಷ್ಟೇ !
ಬರ್ಕ್ಲಿ ರಮೇಶ್, ಕಿರಗಂದೂರು, ಮಂಡ್ಯ
ತಲೆಬುಡವಿಲ್ಲದ ಪ್ರಶ್ನೆಗಳಿಗೂ ನಿಮ್ಮಲ್ಲಿ ಉತ್ತರವಿದೆಯಾ ?
- ಮದ್ಯದಲ್ಲಿ 'ಸಾರ' ಇದ್ರೆ ಸಾಕು !
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಪ್ರೀತಿ ಮಾಡುವುದಕ್ಕೂ ಅದನ್ನು ನೋಡುವುದಕ್ಕೂ ಏನು ವ್ಯತ್ಯಾಸ ?
- ಊಟ ಮಾಡುವುದಕ್ಕೂ, ಅದನ್ನು ಎದುರು ಕುಳಿತು ನೋಡುವುದಕ್ಕೂ ಇರುವಷ್ಟೇ ವ್ಯತ್ಯಾಸ !
ಜೆ.ಆರ್.ಆದಿನಾರಾಯಣ ಮುನಿ, ಶ್ರೀಕೊಡಿಹಳ್ಳಿ ಮಠ
ಏನು, ಮುದ್ದೆ ಮುರಿಯುವುದೆಂದರೆ ಅಷ್ಟೊಂದು ಕೀಳಾ ?
- ಅದು ಮೈ ಮುರಿಯದೇ ಕುಳಿತು ತಿನ್ನುವವರ ಮಾತು !
ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:'ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರೂ ನಾನು ಸಾಯಲಿಲ್ಲ ಕಣೆ!'
'ಯಾವುದ್ರೀ ಅದು ಭಾರಿ ವಾಹನ?' ಹೆಂಡತಿ ಕೇಳಿದಳು.
'ಏರೋಪ್ಲೇನ್ ಕಣೆ!'
'ನಮ್ಮ ಬೀದಿಯಲ್ಲಿ ಬಿಎ ಆಗಿರುವ ಒಬ್ಬ ಕೆಲಸಕ್ಕಾಗಿ ಮೂರು ವರ್ಷಗಳಿಂದ ಅಲೆಯುತ್ತಿದ್ದಾನೆ'
'ಅಯ್ಯೋ, ನಮ್ಮ ಬೀದೀಲಿ ಎಸ್ಎಸ್ಎಲ್ಸಿ ಆಗಿರುವವನಿಗೇ ಕೆಲಸ ಇನ್ನೂ ಸಿಕ್ಕಿಲ್ಲ. ಬಿಎಗೆ ಎರಡೇ ಅಕ್ಷರ, ಎಸ್ಎಸ್ಎಲ್ಸಿಗೆ ನಾಲ್ಕು- ಅದೇ ದೊಡ್ಡದು ತಾನೆ?' <
ಶಿಂಗ್ರಿ: ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾ ಇದೆ ಸ್ವಾಮಿ. ಇದರಲ್ಲಿ ಬರೀ ಪಾತ್ರಗಳ ಹೆಸರುಗಳಷ್ಟೇ ಇವೆ'
ಲೈಬ್ರೇರಿಯನ್: ಬಾರೋ... ಬಾ. ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋದ ಮಹಾನುಭಾವ ನೀನೇನಾ?
'ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ?'
'ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ'
'ಅಯ್ಯೋ ಪೆದ್ದ... ಪತ್ರ ಸಿಗದಿದ್ರೂ ಬಾ ಅಂತ ಬರೆದಿದ್ನಲ್ಲೋ ಮಾರಾಯ?'
ಸ್ನೇಹಿತ: ಬ್ರಾಂಡಿ ಕುಡಿದ್ರೆ ಕೆಮ್ಮು ಹೋಗುತ್ತಾ?
ಗುಂಡ: ನನ್ನ ಹೊಲ, ಮನೆನೇ ಹೋಗಿರುವಾಗ ನಿನ್ನ ಕೆಮ್ಮು ಯಾಕೆ ಹೋಗಲ್ಲ? <
'ರೀ, ಪಕ್ಕದ್ಮನೆ ಪದ್ಮ ಹೇಳ್ತಾ ಇದ್ಲು... ಸ್ವರ್ಗದಲ್ಲಿ ಗಂಡ ಹೆಂಡತೀನ ಒಟ್ಟಿಗೆ ಇರಲು ಬಿಡಲ್ವಂತೆ...'
'ಅದಕ್ಕೇ ಅದನ್ನ ಸ್ವರ್ಗ ಅಂತಾ ಕರೀತಾರೆ!'
'ಲವ್ ಸಬ್ಜೆಕ್ಟ್ ಆಗಿ ಬರುತ್ತಿದ್ದ ಧಾರಾವಾಹಿಯನ್ನು ಏಕೆ ಪ್ರೇತದ ಕಥೆಯಾಗಿ ಬದಲಾಯಿಸಿದಿರಿ?'
'ಇನ್ನು ಮುಂದೆ ಮೇಕಪ್ ಇಲ್ಲದೆ ನಟಿಸುವುದಾಗಿ ಹೀರೋಯಿನ್ ತೀರ್ಮಾನಿಸಿದರು. ಆದ್ದರಿಂದ.'
- ಘಾಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

