ಕೊನೆಯ ಆಟದ ಆರಂಭ ಎಂ. ಕರುಣಾನಿಧಿ
ಚುನಾವಣೆಯಲ್ಲಿ ಅವರ ಪಕ್ಷ ಸೋಲಲಿ- ಗೆಲ್ಲಲಿ, ದ್ರಾವಿಡ ಮುನೇಟ್ರ ಕಳಗಂನ ನಾಯಕ ಮುತ್ತುವೇಲು ಕರುಣಾನಿಧಿ ತಮಿಳು ಸಮುದಾಯಗಳ ಮಹಾನಾಯಕರಾಗಿಯೇ ಉಳಿಯುತ್ತಾರೆ. ಈಗಲೂ ಅದೇ ಸ್ಥಿತಿ.
ಈ ಕರುಣಾನಿಧಿ ಅವರಿಗೆ ಸುಮಾರು ಎಂಬತ್ತೊಂಬತ್ತು ವರ್ಷ. ಅವರು ರಾಜಕೀಯ ಚಟುವಟಿಕೆಯನು ಹದಿನಾಲ್ಕರ ಹರೆಯದಲ್ಲೇ ಆರಂಭಿಸಿದ್ದರು. ಅಂದರೆ ಸುಮಾರು ಎಪ್ಪತ್ತೈದು ವರ್ಷಗಳ ದೀರ್ಘ ರಾಜಕೀಯದಲ್ಲಿ, ಹನೆರಡು ಚುನಾವಣೆಗಳನು ಎದುರಿಸಿದ್ದರೂ ಒಮ್ಮೆಯೂ ಸೋತಿಲ್ಲ.
ಅದು ಅವರ ಹಲವಾರು ಹೆಗ್ಗಳಿಕೆಗಳಲ್ಲಿ ಒಂದು ಅಷ್ಟೇ. ಅರ್ಧ ಶತಮಾನದ ಹೋರಾಟದ ರಾಜಕೀಯದಲ್ಲಿ ಅವರು ಪ್ರದರ್ಶಿಸಿದ ಸಮಯ ಪ್ರಜ್ಞೆ ಅಸಾಮಾನ್ಯವಾದದ್ದು. ಅವರ ಪ್ರತಿಯೊಂದು ಪ್ರಮುಖ ರಾಜಕೀಯ ಹೆಜ್ಜೆಯೂ ದೊಡ್ಡ ರೀತಿಯ ಪರಿಣಾಮವನೇ ಉಂಟುಮಾಡಿದೆ.
ತೊಂಬತ್ತರ ಅಂಚಿನಲ್ಲಿ, ಸ್ವಂತವಾಗಿ ನಡೆಯುವುದು ಕಷ್ಟವಾಗಿದೆ. ಕುರ್ಚಿಯಲ್ಲಿ ಕೂತೇ ಎಲ್ಲ ದರ್ಬಾರೂ ಆಗಬೇಕು. ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಕಣ್ಣು ಮಂಜಾಗಿದೆ. ಮಾತು ತೊದಲುತ್ತದೆ. ಆದರೆ ಅವರ ಚಿಂತೆಯಲ್ಲಿನ ಹರಿತವಾದ ಗುಣ ಮುಪ್ಪಾಗಿಲ್ಲ. ಅವರ ಸಮಯ ಪ್ರಜ್ಞೆಯೂ ಹಾಗೆಯೇ ಇದೆ.
ಕಳೆದ ಸುಮಾರು ಒಂಬತ್ತು ವರ್ಷ ಕಾಲ ಸೋನಿಯಾಗಾಂಧಿ ಪ್ರಣೀತ, ಮನಮೋಹನ ಸಿಂಗ್ ಪ್ರಧಾನಿಯಾಗಿರುವ ಸಂಯುಕ್ತ ಪ್ರಗತಿಪರ ಕೂಟದಲ್ಲಿ ಡಿಎಂಕೆ ಪಾಲು ಬಲು ದೊಡ್ಡದು. ತಮಿಳುನಾಡಿನ ಮಂತ್ರಿಮಂಡದಲ್ಲಿ ಕಾಂಗ್ರೆಸ್ ಬೆಂಬಲವಿಲ್ಲದೇ ಇದ್ದರೆ ಬಹುಮತವಿಲ್ಲದಿದ್ದ ಸಮಯದಲ್ಲಿ ಡಿಎಂಕೆ ಸರ್ಕಾರ ರಚಿಸಿ, ಕಾಂಗ್ರೆಸ್ಸಿಗೆ ಮಂತ್ರಿಮಂಡಲದಲ್ಲಿ ಒಂದು ಸ್ಥಾನವನು ಕೊಡದ ಕರುಣಾನಿಧಿ ಕೇವಲ ಹದಿನೆಂಟು ಲೋಕಸಭೆ ಸದಸ್ಯರಷ್ಟೇ ಇದ್ದರೂ ಕೇಂದ್ರದಲ್ಲಿ ಎಂಟು ಮಂತ್ರಿ ಸ್ಥಾನಗಳನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು.
ಅದಕ್ಕೆ ಕಾರಣ ಅವರ ಸಮಯ ಪ್ರಜ್ಞೆ. ಕಾಲ ಪಕ್ವವಾಗಿದ್ದಾಗಲೇ ಅವರು ಮಾತಾಡುವುದು. ಆ ಸಮಯ ಪ್ರಜ್ಞೆ ಅವರನು ಇನೂ ಕಾಪಾಡುತ್ತಿದೆ.
ಭ್ರಷ್ಟಾಚಾರದ ಆರೋಪಗಳನು ಹೊತ್ತು ಅವರ ಮಮತೆಯ ಹುಡುಗ ಎ. ರಾಜಾ, ಮುದ್ದು ಮಗಳು ಕನಿಮೋಳಿ ಜೈಲು ಸೇರುವಂತಾಗಿ, ಸೋದರಳಿಯ ದಯಾನಿಧಿ ಮಾರನ್ ಮಂತ್ರಿ ಕೆಲಸ ಕಳೆದುಕೊಂಡಾಗಲೂ ಒಂದು ಮಾತನೂ ಆಡದೇ ಇದ್ದ ಕರುಣಾನಿಧಿ ಈಗ ಶ್ರೀಲಂಕಾ ತಮಿಳರ ವಿವಾದದ ಸಮಯದಲ್ಲಿ ಕೇಂದ್ರ ಸರ್ಕಾರವನೇ ಬಿಟ್ಟು ಬಂದಿದ್ದು ಅಸಾಧಾರಣವಾದ ಸಮಯ ಪ್ರಜ್ಞೆಯೇ ಸರಿ.
ಡಿಎಂಕೆ ನಿರ್ಗಮನದಿಂದ ದಿಢೀರನೆ ಸರ್ಕಾರ ಬೀಳದೇ ಇರಬಹುದು. ಆದರೆ ಮನಮೋಹನ ಸಿಂಗ್ ಸರ್ಕಾರ ಇನು ಮುಂದೆ ಹೆಳವತನದಿಂದಲೇ, ಹೆದರಿಕೊಂಡೇ ಆಡಳಿತ ನಡೆಸಬೇಕಾದ ದೈನ್ಯಾವಸ್ಥೆಗೆ ಇಳಿದಿದೆ. ತಮಿಳುನಾಡಿನ ಮಟ್ಟಿಗೆ ಹೇಳಬೇಕಾದರೆ ಈ ಹೆಜ್ಜೆಯಿಂದ ಕರುಣಾನಿಧಿ, ಕಳೆದು ಹೋಗಿರುವ ತಮ್ಮ ಪಕ್ಷದ ವರ್ಚಸ್ಸನು ಮರಳಿ ಪಡೆಯುವ ಮಹಾಯಾತ್ರೆಯನು ಆರಂಭಿಸಿದ್ದಾರೆ.
ಒಮ್ಮೆ ತಮಿಳುನಾಡು ವಿಧಾನಸಭೆಯಲ್ಲಿ ಆಗಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರು ಕರುಣಾನಿಧಿ ಕೇಳಿದ ಪ್ರಶೆಗೆ ಉತ್ತರ ಕೊಡಲು ತಡಬಡಾಯಿಸಿದ್ದರು. ಆಗ ಕರುಣಾನಿಧಿ ದಿಢೀರ್ ಪ್ರತಿಕ್ರಿಯೆ:
ನಿಮಗೆ ಎಲ್ಲ ಸಿನಿಮಾಗಳಲ್ಲೂ ನಾನೇ ಡೈಲಾಗ್ ಬರೆದುಕೊಟ್ಟಿದ್ದು. ನಿಮಗೆ ಅದನು ಬಿಟ್ಟು ಬೇರೆ ಏನನೂ ಹೇಳಲಿಕ್ಕೆ ಬರುವುದಿಲ್ಲವೆಂದು ಸಾಬೀತು ಮಾಡಬೇಕಾಗಿಲ್ಲ.
ಡಿಎಂಕೆ, ಕೇಂದ್ರದಲ್ಲಿನ ಆಳುವ ಕೂಟದಿಂದ ಹೊರಬಿದ್ದು, ಅದನು ವಿರೋಧಿಸಲು ಪ್ರಧಾನ ಕಾರಣಪುರುಷ ಅವರ ಪುತ್ರ, ರಾಜಕೀಯ ಉತ್ತರಾಧಿಕಾರಿ ಎಂ.ಕೆ. ಸ್ಟಾಲಿನ್. ಶ್ರೀಲಂಕಾ ತಮಿಳರ ವಿಷಯದಲ್ಲಿ ಕೇಂದ್ರದ ಈಗಿನ ನಿಲವನು ಪ್ರತಿಭಟಿಸಿ, ಹೊರಗೆ ಬರದಿದ್ದರೆ ಜಯಲಲಿತಾ ನಮ್ಮೆಲ್ಲರನೂ ಬಗ್ಗು ಬಡಿಯುತ್ತಾರೆಂದು ಅವರು ಎಚ್ಚರಿಕೆ ನೀಡಿದ್ದರಂತೆ.
ತಮ್ಮ ಏಳು ದಶಕಗಳಿಗೂ ಹೆಚ್ಚಿನ ಅವಧಿಯ ರಾಜಕೀಯದಲ್ಲಿ ಮೊಟ್ಟಮೊದಲ ಬಾರಿಗೆ ಕರುಣಾನಿಧಿ ಬೇರೆಯವರು (ಸ್ವಂತ ಮಗನೇ ಆಗಿದ್ದರೂ) ಆರಿಸಿದ ಸಮಯ ಹಾಗೂ ಅವರು ಬರೆದ 'ಡೈಲಾಗ್' ಮೇಲೆ ಅವಲಂಬಿತವಾಗಿದ್ದೇ ಈಗಿನ ಅತಿ ದೊಡ್ಡ ಬದಲಾವಣೆ.
ಬಹಿರಂಗವಾಗಿ ಸ್ಟಾಲಿನ್ ಅವರನು ಕರುಣಾನಿಧಿ 'ಸ್ಟಾಲಿನ್ ಅವರುಗಳೇ' ಎಂದು ಸಂಬೋಧಿಸುವುದು ವಿಚಿತ್ರವಾಗಿ ಕಂಡು ಬಂದರೂ ಪಕ್ಷದ ಶಾಸಕಾಂಗ ವಿಭಾಗದ ನಾಯಕನಿಗೆ ಸಲ್ಲಿಸಿದ ಗೌರವ ಅದು.
ಕರುಣಾನಿಧಿ ಐದು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಮೂರು ಬಾರಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅಕ್ಷರಶಃ ಮತ್ತು ವಸ್ತುಶಃ ಸಿ.ಎನ್. ಅಣ್ಣಾದೊರೆ ನಿಧನದ ಅನಂತರ 43 ವರ್ಷಗಳ ಕಾಲ ಪಕ್ಷದ ಏಕೈಕ ನಾಯಕರಾಗಿ ಮಾರ್ಗದರ್ಶನ ಮಾಡಿದ್ದಾರೆ.
ಸಾಮಾಜಿಕ ನ್ಯಾಯ ವಿತರಣೆ ಅವರ ಜೀವನದ ಮಹಾನ್ ಧ್ಯೇಯ. ತಮಿಳುನಾಡಿನಲ್ಲಿ ಜಸ್ಟಿಸ್ ಪಾರ್ಟಿಯ ಮೂಲಕ ಆರಂಭವಾದ ಈ ಸ್ವಮರ್ಯಾದಾ ಆಂದೋಲನಕ್ಕೆ ಈಗ ನೂರೊಂದು ವರ್ಷ. ಅದರಲ್ಲಿ ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲೇ ಸಕ್ರಿಯವಾಗಿ ಪಾಲುಗೊಂಡಿದ್ದ ಕರುಣಾನಿಧಿ ಆ ವಿಚಾರದಲ್ಲಿ ಈಗ ಒಂದು ವಿಶ್ವಕೋಶದಂತೆಯೇ ಬೆಳೆದಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳ ಸಮಾಜಗಳ ಹೋರಾಟಗಳೂ ಅವರಿಗೆ ಗೊತ್ತು. ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ಭಾಷಣ, ಬರವಣಿಗೆಯಲ್ಲಿ ಸರ್ವಜ್ಞನ ಪದಗಳನು ಬಳಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅದೂ ಶೋಷಿತರ ಪರವಾದ 'ಕಾವ್ಯವೇ.'
ಕರುಣಾನಿಧಿ ಅವರದ್ದು ವೈವಿಧ್ಯದ ವರ್ಣಮಯ ಜೀವನ. ಅಪ್ಪ-ಅಮ್ಮ ತಿರುಕುವಲಾಯ್. ತಿರುವಾಯೂರಿನ ಸಮೀಪದ ಹಳ್ಳಿಯಲ್ಲಿ ಹುಟ್ಟಿದ ಮಗುವಿಗೆ ಇಟ್ಟ ಹೆಸರು ದಕ್ಷಿಣಾಮೂರ್ತಿ. ಇಸ್ಯೆವಲಿಯಾರ್ ಸಮಾಜಕ್ಕೆ ಸೇರಿದವರು ಅವರು. ನಾಸ್ತಿಕವಾದವನು ಒಪ್ಪಿದ ಕರುಣಾನಿಧಿ ತಮ್ಮ ಹೆಸರನು ಬದಲಾಯಿಸಿಕೊಂಡರು.
ಎಳೆತನದಲ್ಲೇ ಕವಿತೆಗಳನು ಬರೆದರು. ಅದಕ್ಕಾಗಿ ಒಂದು ಕೈ ಬರಹದ ಪತ್ರಿಕೆಯನೂ ರೂಪಿಸಿದರು. ಅನಂತರ ಸಿನಿಮಾ ಪ್ರವೇಶ. ತಿರುವಳ್ಳುವರ್ ಚಿಂತನೆಯ ಪ್ರಭಾವ. ನೂರಾರು ಚಿತ್ರಗಳಿಗೆ ಡೈಲಾಗ್ ಬರೆದಿದ್ದಾರೆ. ಸುಮಾರು ನೂರು ಪುಸ್ತಕಗಳನು ಬರೆದಿರಬಹುದೆಂದು ಅಂದಾಜು.
ಪ್ರಚಂಡ ಪತ್ರಕರ್ತ. ಬಿಡುವೇ ಇಲ್ಲದ ಬರವಣಿಗೆ ಒಂದು ಅಂದಾಜಿನಂತೆ ಅವರು ಬರೆದ ಸಂಪಾದಕೀಯ ಪತ್ರಗಳು (ಓದುಗರಿಗಿಂತ ಹೆಚ್ಚಾಗಿ ಪಕ್ಷದ ಕಾರ್ಯಕರ್ತರ ಅರಿವಿನ ಮಟ್ಟ ಹೆಚ್ಚಿಸುವ ಪ್ರಯತ) ಸುಮಾರು ಹತ್ತು ಸಾವಿರ. ಮುರಸೋಳಿ ಪತ್ರಿಕೆಯನು ಅವರು ತುಂಬಾ ಪ್ರೀತಿಸುತ್ತಾರೆ. ಅವರೇ ಸ್ಥಾಪಿಸಿದ ಮಾಸಿಕ ಮುರಸೋಳಿ. ಅನಂತರ ಸಾಪ್ತಾಹಿಕವಾಗಿ ಈಗ ದಿನಪತ್ರಿಕೆ, ಪಕ್ಷದ ಮುಖವಾಣಿ.
ಪೆರಿಯಾರ್ ರಾಮಸ್ವಾಮಿ, ಸಿ.ಎನ್. ಅಣ್ಣಾದೊರೆ ಸಂಪರ್ಕದಲ್ಲಿ ಪಕ್ವವಾದ ಪ್ರಬುದ್ಧ ಚಿಂತಕ. ಕೌಲಾಲಂಪುರದಲ್ಲಿ ನಡೆದ ವಿಶ್ವ ತಮಿಳು ಸಮ್ಮೇಳನದಲ್ಲಿ ಕರುಣಾನಿಧಿ ಮಾಡಿದ ಭಾಷಣವನು ಇಂದಿಗೂ ತಮಿಳರು ನಾಸ್ತಿಕವಾದವನು ಒಪ್ಪದೇ ಪೂಜಿಸುವುದೂ ಉಂಟಂತೆ. ಅದು ದಂತಕತೆಯೇ ಆಗಿರಬಹುದು. ಆದರೆ ತಮಿಳು ಭಾಷೆಯ ಹಿರಿಮೆ, ಸಾಂಸ್ಕೃತಿಕ ಸಂಪತ್ತು, ಇತಿಹಾಸ ಅವರಿಗೆ ಕರತಲಾಮಲಕ ಎನುವುದು ನಿಜ. ತಮಗೆ ಅನುಕೂಲವಾದ ರೀತಿಯಲ್ಲಿ ಅದನೆಲ್ಲ ಬಳಸಿಕೊಳ್ಳಬಲ್ಲ ಪ್ರತಿಭೆ ಇದೆ.
ರಾಜಕೀಯದಲ್ಲೇ ಮುಳುಗಿ-ಏಳುವ ವೃತ್ತಿಪರ ಈ ರಾಜಕಾರಣಿಯ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗೇನೂ ಕಡಿಮೆ ಇಲ್ಲ. ಹಿಂದೆ ಸಕ್ಕರೆ ಮಾರಾಟದ ಗುತ್ತಿಗೆ, ಟೆಂಡರ್ ವ್ಯವಹಾರ ಆರೋಪದ ತನಿಖೆಯಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸರ್ಕಾರ್ ತನಿಖಾ ಆಯೋಗ ಕರುಣಾನಿಧಿ ಮುಖ್ಯಮಂತ್ರಿಯಾಗಿ, ಈ ಪ್ರಕರಣದಲ್ಲಿ ವರ್ತಿಸಿದ ರೀತಿ ಅಕ್ರಮವಾದದ್ದು ಎಂದೇ ವರದಿ ನೀಡಿದೆ.
ಆ ವರದಿ ಪ್ರಕಟವಾಗಿದ್ದು ತುರ್ತು ಪರಿಸ್ಥಿತಿಯ ಸಮಯದಲ್ಲಿ. ಅನಂತರ ಏನೂ ಆಗಲಿಲ್ಲ. ಕರುಣಾನಿಧಿ ಅವರ ಕುಟುಂಬ ಪ್ರೇಮ (ಅವರಿಗೆ ಮೂವರು ಪತಿಯರು. ಈಗ ಉಳಿದಿರುವುದು ಇಬ್ಬರೇ) ಅವರನು ತಪ್ಪುದಾರಿಗೆ ಎಳೆದಿರುವುದೂ ನಿಜ. ಪುತ್ರರಾದ ಅಳಗಿರಿ, ಸ್ಟಾಲಿನ್, ಸೋದರಳಿಯನ ಮಗ ದಯಾನಿಧಿ ಮಾರನ್, ಪುತ್ರಿ ಕನಿಮೋಳಿ ಎಲ್ಲರೂ ಅಧಿಕಾರದ ಅಥವಾ ಜನಪ್ರಾತಿನಿಧಿಕ ಸ್ಥಾನಗಳಲ್ಲಿದ್ದಾರೆ.
ಸದ್ಯದಲ್ಲಿ ಕರುಣಾನಿಧಿ ಕುಟುಂಬ 2-ಜಿ ತರಂಗಾಂತರ ಗುಚ್ಚದ ಹಗರಣದಲ್ಲಿ ಮುಳುಗಿದೆ. ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ ಕನಿಮೋಳಿ, ರಾಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವ ಸಮಯವಿದು.
ಕರುಣಾನಿಧಿ ಅವರಿಗೆ ಇನು ಹೆಚ್ಚು ಭವಿಷ್ಯ ಇಲ್ಲದೇ ಇರಬಹುದು. ಆದರೆ ಅವರ ಮಕ್ಕಳಿಗೆ ಇದೆ. ಅದರ ರಕ್ಷಣೆಯ ಹೊಣೆ ಯಾರದ್ದು?
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

