ಸಾಪ್ತಾಹಿಕಪ್ರಭ

ಕ್ಲಾಸ್ ಪರಿಷೆ

Published On :

ಇತ್ತೀಚಿನ ದಿನಗಳಲ್ಲಿ ಕಲೆಗೆ ವಿಶೇಷ ಗೌರವಾದರ. ದಿನೇದಿನೇ ಬೆಳೆಯುತ್ತಿರುವ ಚಿತ್ರಕಲಾ ಮಾಧ್ಯಮವಂತೂ ಕಲಾಕೃತಿಗಳ ಮಾರುಕಟ್ಟೆಯನೂ ವಿಸ್ತರಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಕಲಾವಿದರು ಹಾಗೂ ಕಲಾರಸಿಕರ ನಡುವೆ ನೇರ ಸಂಪರ್ಕ ಏರ್ಪಡಿಸುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ಚೊಚ್ಚಲ ಪ್ರಯತ 'ಚಿತ್ರ ಪರಿಷೆ'. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 16 ರಿಂದ 20 ರವರೆಗೆ ನಡೆದ 'ಜಾತ್ರೆ'ಯಲ್ಲಿ ವೈವಿಧ್ಯಮಯ ಕಲಾಕೃತಿಗಳ ದರ್ಬಾರು. ಕಲಾವಿದ, ಕಲಾರಸಿಕ ಇಬ್ಬರ ಮೊಗದಲ್ಲಿಯೂ ಮಂದಹಾಸದ ಮಿನುಗು.
ಅಕಾಡೆಮಿ ಇಂಥಹದೊಂದು ಕಾರ್ಯಕ್ರಮ ಹಮ್ಮಿಕೊಂಡಿದೆ ಎನುವ ಸಮಾಚಾರ ಗೊತ್ತಾದಾಗ ಕಲಾವಿದರಿಂದ ಬಂದ ಪ್ರತಿಕ್ರಿಯೆ ಅದ್ಭುತ. ಹಿರಿ-ಕಿರಿಯ 500 ಕಲಾವಿದರು ಮಳಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಅವಕಾಶ ಸಿಕ್ಕಿದ್ದು 150 ಕಲಾವಿದರಿಗೆ ಮಾತ್ರ.
'ಕಲಾವಿದರು ತಮ್ಮ ಕಲಾಕೃತಿ ಮಾರಲು ಗ್ಯಾಲರಿಗಳಿಗೆ ಅಲೆದಾಡುವ ಮತ್ತು ಅವರಿಗೆ ಕೃತಿಯ ಮಾರಾಟದಲ್ಲಿ ಕಮೀಷನ್ ಕೊಡುವ ಸಂಸ್ಕೃತಿಯಿಂದ ಹೊರಬರಲು ನೆರವಾಗುವುದು ನಮ್ಮ ಉದ್ದೇಶ. ಕಲಾವಿದನ ಪರಿಶ್ರಮಕ್ಕೆ ಸರಿಯಾದ ಬೆಲೆ ಸಿಗಲಿ ಎಂಬ ಆಶಯವೂ ಇದೆ' ಎನುತ್ತಾರೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣ ಸೆಟ್ಟಿ.
ಹಿರಿಯ ಕಲಾವಿದರಾದ ಪ.ಸ.ಕುಮಾರ್, ಸುದೇಶ್ ಮಹಾನ್, ಜಾನ್ ದೇವರಾಜ್, ಯಶವಂತ ಹಿಬಾರೆಯವರಲ್ಲದೇ ಚಿ.ಸು.ಕೃಷ್ಣಸೆಟ್ಟಿ ಅವರ ಕೃತಿಗಳು ಕಲಾಸಕ್ತರಿಗೆ ಸ್ವಾಗತ ಕೋರುತ್ತಿದ್ದವು. ಕಿರಿಯ ಕಲಾವಿದರು ತಮ್ಮ ಕೃತಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಿದ್ದರು.
ರು. 2000 ಸಂದಾಯ ಮಾಡಿ ಮಳಿಗೆ ಪಡೆದ ಕಲಾವಿದರಿಗೆ ಅಕಾಡೆಮಿಯ ಈ ಪ್ರಯತ ಖುಷಿ ಕೊಟ್ಟಿದೆ. ಈ ಬಾರಿ ಪ್ರತಿಕ್ರಿಯೆ ನಿರಾಶಾದಾಯಕವಾಗಿಲ್ಲದಿದ್ದರೂ ಮುಂಬರುವ ವರ್ಷಗಳಲ್ಲಿ ಕಲಾಕೃತಿಗಳನು ಕೊಳ್ಳುವವರ ಸಂಖ್ಯೆ ಹೆಚ್ಚುತ್ತದೆ ಎಂಬ ಆಶಾಭಾವ ಅವರದ್ದು. ಅಚ್ಚುಕಟ್ಟಾದ ವ್ಯವಸ್ಥೆಯ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಇಲ್ಲಿನ ಪರಿಸರ ಆಹ್ಲಾದಕರವಾಗಿದ್ದು ಮುದನೀಡಿ ಕೃತಿ ಕೊಳ್ಳಲು ಪ್ರಚೋದಿಸುವಂತಿತ್ತು.
ಇದಲ್ಲದೇ ಅಕಾಡೆಮಿಯು ರಾಜ್ಯದ 35 ಕಲಾವಿದರುಗಳನು ಬರಮಾಡಿಕೊಂಡು ಮೂರು ದಿನ ಸ್ಥಳದಲ್ಲೇ ಕಲಾಕೃತಿ ರಚಿಸುವ ಪ್ರಾತ್ಯಕ್ಷತೆಯನು ನಡೆಸಿತು. ಈ ಆಹ್ವಾನಿತ ಕಲಾವಿದರು ತಮ್ಮದೇ ಶೈಲಿಯಲ್ಲಿ ಕೃತಿಗಳನು ರಚಿಸುತ್ತಿರುವಾಗ ಕಲಾರಸಿಕರಿಗೆ ಕೃತಿ ರಚನೆಯ ಹಂತಗಳನು ವಿವರಿಸುತ್ತಿದ್ದರು. ಇದು ಕೂಡ ಕಲಾ ಮಾರುಕಟ್ಟೆ ವಿಸ್ತರಣೆಗೆ ನೆರವಾಗುವ ಉಪಕ್ರಮವೇ.

ಕಲಾವಿದರು ತಮ್ಮ ಕೃತಿಯನು ತಾವೇ ಉತ್ತಮ ಬೆಲೆಗೆ ಮಾರಲು ಅನುವು ಮಾಡಿಕೊಟ್ಟಿದ್ದೇವೆ. ಪ್ರತಿವರ್ಷವೂ ಪರಿಷೆ ನಡೆಸುವುದು ನಮ್ಮ ಇರಾದೆ.
- ಚಿ.ಸು.ಕೃಷ್ಣ ಸೆಟ್ಟಿ, ಅಧ್ಯಕ್ಷ, ಕರ್ನಾಟಕ ಲಲಿತ ಕಲಾ ಅಕಾಡೆಮಿ

ಇದೊಂದು ಕ್ಲಾಸ್ ಕಲಾ ಮಾರುಕಟ್ಟೆ. ಹೆಚ್ಚು ಕಮೀಷನ್‌ಗೆ ಒತ್ತಾಯಿಸುವ ದಲ್ಲಾಳಿಗಳ ಹಾವಳಿ ಇಲ್ಲದಂಥ ಈ ಪರಿಷೆಯ ಕಲ್ಪನೆಯೇ ಒಂದು ಉತ್ತಮ ಪ್ರಯೋಗ.
-ಪರಿಷೆಯಲ್ಲಿ ಪಾಲ್ಗೊಂಡಿದ್ದ ಕಲಾವಿದರು.

-ಸಂಕೇತ್ ಗುರುದತ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.