ಸಾಪ್ತಾಹಿಕಪ್ರಭ

ಮಾತುಕತೆ

Published On :

ತಕ್ಕೋ ಎಂದು ನೀನು ಎಸೆದ
ಪ್ರೀತಿ ಗಳಿಗೆಗೆ ಎಷ್ಟೊಂದು ಕಾದು ಕುಂತಿದ್ದೇನೆ ಗೊತ್ತಾ?
ತೊಡೆಯವರೆಗಿನ ಪೈರು ಬೆಳೆದಿದೆ
ಉನ್ಮತ್ತ ನೋಡು ಕಡಿಯುವವರೆಗೂ
ಗಂಟಿಕ್ಕಿ ನೆಲದ ಮೇಲೆ ಬೀಳುವವರೆಗೂ

ತಕ್ಕೋ ಎಂದು ನೀ ಎಸೆ ಪ್ರೇಮ
ಬಯಲು ಉಂಟು ಇಲ್ಲಿ ಬರೆವ ಖಾಲಿ ಸ್ಲೇಟು
ನೀರಲ್ಲಿ ಅದ್ದಿ ಬರೆಯಲು ಬಳಪ
ಮೂಗುತಿಯಲ್ಲಿ ಹೊಳಪು
ಒದ್ದೆಯಾದರೂ ಹೊಳೆಯದಿರಲಾರದು ಮನಸು
ಬಳೆ ಒಡೆದು ಗೆರೆಮೂಡಿ ನೆರೆದರೆ
ಆಗಸದಲಿ ಹಕ್ಕಿ ನುಲಿ ಕಾಮನಬಿಲ್ಲು

ತಕ್ಕೋ, ಎಸೆ ಪ್ರೇಮ
ಹರಿವ ನದಿ ತೊರೆಯನ್ನು ಅಪ್ಪಿಕೊಳ್ಳುವ ಹಾಗೆ?
ನೆರೆಯಬೇಕು ತೊರೆದು ನೆರೆಬೇಕು
ಹರಿವ ನದಿ ತುರೀಯ ಅಪ್ಪಬೇಕು ಹೊರೆಯ
ಮೆತ್ತಗೆ ಕಲ್ಲು ಬಂಡೆ ನೀರ ಹಾರಿ ಸದಾ ಆರ್ದ್ರ
ಪ್ರೀತಿ ಸಹಜ ಬೇಕು ನಾರೀಶ್ವರ ಅರ್ಧ

ತಕ್ಕೋ ಎಂದೆ ಪ್ರೀತಿ ಎಸೆದು ಪರಿಮಳದ ಹಾದಿ ಹಿಡಿದು
ಹಾದಿ ದಾಟಬೇಕು ಆಲಯದಿಂದ ಬಯಲವರೆಗೆ
ಅಜ್ಞಾತದಿಂದ ಹೆಸರು ಕಾಡದ ಸುಪ್ತ ಕಟ್ಟೆಯವರೆಗೆ
ತೊರೆಬಳ್ಳಿ ತೊರೆದು ಹಂಗ ಮರೆತು
ಬಾರೆ ನನ್ನೊಡನೆ ಬೆಳದಿಂಗಳು ಕರೆವ ಮುಂಚೆ
ಹಾದಿ ಮರೆವ ಬಾ, ನನ್ನೊಡನೆ ಬೆಳದಿಂಗಳು ಕಳೆವ ಮುಂಚೆ
ಬೆಳಗಾಗುವ ಮುಂಚೆ

ಪ್ರೀತಿ ಬೇಡದು ಪರ್ಯಾಯ ವಿವರಣೆ ಬೇಕು ಏಕೆ?
ಮುಗುಳು ನಕ್ಕ ದಿನಗಳಲಿ ಪ್ರೀತಿಗೆ ಮಾತು ಕಾಡಲಿಲ್ಲ
ಕನಸು ಯಾಕೆ ಹೇಳು ಕನವರಿಕೆಯ ಖುಷಿ ಗಳಿಗೆಗಳಲ್ಲಿ
ಮೌನವೇ ಮಾತು ಕಣಿ ಹೇಳುವ ಅಜ್ಞಾತ ನಗರಿಗೆ
ನನ್ನ ಪಯಣದ ಮುಂಚೆ
ನನ್ನೆದೆಗೆ ಹಂಚೆ ಅಂಚೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.