ಸಾಪ್ತಾಹಿಕಪ್ರಭ

ರಾಜಕಾರಣದ ವಿಶ್ವದರ್ಶನಬುಕ್ ಶಾಪ್

Published On :

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಅತ್ಯಂತ ಮಹತ್ವದ ಘಟ್ಟ. ಅಲ್ಲಿಯ ಮತದಾನ ಎಂಬ ಒಂದು ಸುಂದರ, ಬೌದ್ಧಿಕ ವ್ಯವಸ್ಥೆ ಮಣ್ಣಾಗುತ್ತಿರುವುದನು ವಿಷಾದದಿಂದ ಗಮನಿಸುತ್ತಿರುವ ನಮ್ಮ ನಡುವಿನ ರಾಜಕೀಯ ಚಿಂತಕ ಸಂಸದ ಎಚ್. ವಿಶ್ವನಾಥ ಅವರ 'ಮತಸಂತೆ' ಕೃತಿ ರಾಜಕೀಯದ ಹಲವು ಒಳಮರ್ಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಮತ ಮಾರಾಟ ಮತ್ತು ಮತ ಖರೀದಿಯ ಕಾರಣದಿಂದಾಗಿ ಇದೊಂದು ಮತಸಂತೆಯಾಗಿದೆ ಎಂದು ಅವರು ಹೇಳಿದ್ದಾರೆ. ರಾಜಕಾರಣಿಗೆ ಈಗ ಜನ, ಪ್ರಜೆಗಳು ಕಾಣುತ್ತಿಲ್ಲ. ಪ್ರಜಾಹಿತ ಅವನ ಆದ್ಯತೆಯೂ ಅಲ್ಲ. ಗೆಲುವೆಂಬ ಮಾಯೆಯ ಜಾಲದಲ್ಲಿ ಆತ ಸಿಲುಕಿದ್ದಾನೆ. ಗೆಲುವಿಗೆ ಬೇಕಾದ ಉದ್ಯಮವನೇ ಆತ ಮಾಡುತ್ತಾನೆ ಮತ್ತು ಗೆಲ್ಲುತ್ತಾನೆ... ಎಂಬ ಮಾತನು ವಿಶ್ವನಾಥ್ ಇಲ್ಲಿ ಒಂದೆಡೆ ಹೇಳಿದ್ದಾರೆ. ಈಗಾಗಲೆ ಈ ಕೃತಿ ಮೂರು ಬಾರಿ ಮುದ್ರಣಗೊಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿ.
 ಇವರದೇ ಇನೊಂದು ಕೃತಿ 'ಆಪತ್ ಸ್ಥಿತಿಯ ಆಲಾಪಗಳು'. ತುರ್ತುಪರಿಸ್ಥಿತಿಯ ಮರು ಅವಲೋಕನ ಈ ಕೃತಿ. ಇಲ್ಲಿಯ ಒಂದು ಅಧ್ಯಾಯ 'ಕಾಂಗ್ರೆಸ್ಸಿಗನ ಕಣ್ಣಲ್ಲಿ ಆಪತ್ ಸ್ಥಿತಿ'. ಇದರಲ್ಲಿ ಅವರು, 'ಎಮರ್ಜೆನ್ಸಿ ಬೇಕಿತ್ತೋ, ಬೇಡವೋ? ಸರಿಯೋ ತಪ್ಪೋ? ದೌರ್ಜನ್ಯ ದುರಾಚಾರಗಳಾದವೆ? ಇವನೆಲ್ಲ ನಾನು ಚರ್ಚಿಸುವುದು ಸರಿಯಾಗಲಾರದು. ಆದರೆ ಈ 30-32 ವರ್ಷಗಳ ತಿರುಗಾಟದಲ್ಲಿ, ಜನರ ಒಡನಾಟದಲ್ಲಿ ಅಲ್ಲಲ್ಲಿ ಈ ಕುರಿತು ನನ ಕಿವಿಗೆ ಬಿದ್ದ ಆಲಾಪಗಳನು ಜನ ಗುನುಗಿದ ರಾಗಗಳನೂ ನಿಮಗೆ ಕೇಳಿಸುವುದು ತಪ್ಪಾಗದು...' ಎಂದು ಹೇಳಿದ್ದಾರೆ. ದೇವರಾಜ ಅರಸು ಬಗ್ಗೆ, 'ಎಮರ್ಜೆನ್ಸಿಯನು ಸಾಮಾಜಿಕ ಪರಿವರ್ತನೆಯ ಹಾದಿ ಹಿಡಿಸಿದ ಗಾರುಡಿಗನಾಗಿ ಅವರು ನನಗೆ ಕಂಡರು..' ಎಂದ ಹೇಳಿದ್ದಾರೆ. ಒಬ್ಬ ಶೂದ್ರ, ಜನಸಾಮಾನ್ಯ, ಮನೋವಿಜ್ಞಾನಿ, ಗೃಹಿಣಿ, ವೈದ್ಯ, ಸಂಪಾದಕ ಹೀಗೆ ವಿವಿಧ ವರ್ಗದ ಜನರು ಎಮರ್ಜೆನ್ಸಿಯನು ಪರಿಭಾವಿಸಿದ್ದನು ಅವರು ದಾಖಲಿಸಿದ್ದಾರೆ. ಇದೊಂದು ಇತಿಹಾಸದ ತುಣುಕು.
ಕೃತಿ: 1.ಮತಸಂತೆ 2.ಆಪತ್ ಸ್ಥಿತಿಯ ಆಲಾಪಗಳು
ಪ್ರಕಾರ: ರಾಜಕೀಯ ಅನುಭವ ಕಥನ
ಏಕೆ ಓದಬೇಕು?: ರಾಜಕಾರಣಿಯ ತಳಮಳ ಅರಿಯಲು, ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 72, ಬೆಲೆ ರು.  70/ ಪುಟಗಳು 96 ಬೆಲೆ ರು.  80

ವಿವೇಕ ವೀಣೆ
ಜನಪ್ರಿಯ ಕಾದಂಬರಿಕಾರ ವಿವೇಕಾನಂದ ಕಾಮತ್ ಅವರ ಹೊಸ ಕಾದಂಬರಿ 'ರುದ್ರವೀಣೆ' ಕೇರಳದ ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ದೇವಾಲಯದಲ್ಲಿ ಅಪಾರವಾದ ನಿಧಿ ಇದೆ ಎಂಬುದು ಪತ್ತೆಯಾದ ವಾಸ್ತವ ಘಟನೆಯ ಎಳೆಯನು ಇಟ್ಟುಕೊಂಡು ಹೆಣೆದ ಥ್ರಿಲ್ಲರ್. ಪಾವನಾ ಉರ್ಫ್ ಪಾರಿಜಾತ ಎಂಬವಳು ಮಾನಸಿಕ ಅಸ್ವಸ್ಥಳ ಸ್ಥಿತಿಯಲ್ಲಿ ಸಿಗುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಆಸ್ಪತ್ರೆಯಿಂದ ಅವಳು ಮಹಿಳಾ ಕಲ್ಯಾಣ ಕೇಂದ್ರಕ್ಕೆ ಹೋಗುವುದು, ಇನ್ಸ್‌ಪೆಕ್ಟರ್ ಸಿದ್ಧಾರ್ಥ ಅವಳನು ಮದುವೆಯಾಗುವುದು, ಅದಕ್ಕೂ ಮೊದಲು ಅವಳು ವಿಚಿತ್ರ ಸನಿವೇಶವೊಂದರಲ್ಲಿ ಕೇರಳ ದೇಗುಲದ ತಂತ್ರಿಯ ಮಗ ಮದನ ಎಂಬವನನು ಕೊಲೆ ಮಾಡುವುದು, ಕೋರ್ಟ್‌ನಿಂದ ನಿರಪರಾಧಿ ಎಂದು ಬಿಡುಗಡೆಯಾಗುವುದು ದೇಗುಲವೊಂದರ ನಿಧಿಗೆ ಸಂಬಂಧಿಸಿದ ದಾಖಲೆ ಅವಳ ಮನೆಯಲ್ಲಿರುವುದು, ಬ್ಲ್ಯಾಕ್‌ಮೇಲ್‌ಗೆ ಒಳಗಾದ ಅವಳ ತಂದೆ ಆತ್ಮಹತ್ಯೆ ಮಾಡಿಕೊಳ್ಳುವುದು, ತಾಯಿಯ ಅಪಹರಣ, ಕೊನೆಗೆ ಪಾವನಾಳ ಅಪಹರಣ... ಅಂತ್ಯ ನೀವೇ ಓದಿ.
ಕೃತಿ: ರುದ್ರವೀಣೆ, ಪ್ರಕಾರ: ಕಾದಂಬರಿ
ಏಕೆ ಓದಬೇಕು?: ಥ್ರಿಲ್ಲರ್ ಅನುಭವಿಸಲು
ಪ್ರ: ಆನಂದ ನಿಲಯ ಪ್ರಕಾಶನ, ಬೆಂಗಳೂರು, ಪುಟಗಳು 208, ಬೆಲೆ ರು.  110

ವಸಂತಬಂಧ
'ಪ್ರಬಂಧ'ಗಳು ಸಾಹಿತ್ಯದ ಒಂದು ಪ್ರಕಾರವಾಗಿ ಬೆಳೆದು ಬಂದಿವೆ. ಆಧುನಿಕ ಕನಡದಲ್ಲಿ ಕಾಣುತ್ತಿರುವ ಪ್ರಬಂಧದ ಪ್ರೇರಣೆ ಎಲ್ಲಿಯದು? ಪಂಪ ತನ ಆದಿಪುರಾಣ ಕಾವ್ಯವನು ಪ್ರಬಂಧ ಎಂದೇ ಕರೆದಿದ್ದಾನೆ. ಮಹಾಕಾವ್ಯಗಳನು ಪ್ರಬಂಧ ಎಂದು ಕರೆಯುವ ಪರಂಪರೆ ನಮ್ಮಲ್ಲಿತ್ತು. ಆದರೆ ಇಂದಿನ ಪ್ರಬಂಧ ಇಂಗ್ಲಿಷ್‌ನ 'ಎಸ್ಸೆ'ಗೆ ಸಂವಾದಿಯಾಗಿ ಬಳಕೆಯಾಗುತ್ತದೆ. ಹಿಂದಿಯಲ್ಲಿ ಇದಕ್ಕೆ ಸಂವಾದಿ ಪದ ನಿಬಂಧ. ಪ್ರಬಂಧ, ಶಿಥಿಲಬಂಧ, ಲಲಿತಪ್ರಬಂಧ, ಲಘುಪ್ರಬಂಧ, ಭಾವಪ್ರಬಂಧ, ಆತ್ಮೀಯ ಪ್ರಬಂಧ, ನಿಬಂಧ, ಬಂಧ, ಹರಟೆ, ಗದ್ಯಚಿತ್ರ, ಭಾವನಾಚಿತ್ರ, ಪ್ರಸಂಗ, ನ್ಯಾಸ ಎಂದೆಲ್ಲ ಪ್ರಕಾರಗಳನು ಪ್ರಾಜ್ಞರು ಗುರುತಿಸಲು ಯತಿಸಿದ್ದಾರೆ. ಪ್ರಬಂಧದ ಬಗ್ಗೆ ಪುಟ್ಟ ಸಂಶೋಧನ ಕೃತಿ 'ಪ್ರಬಂಧ ಸಾಹಿತ್ಯ'ದಲ್ಲಿ ಡಾ. ಮಳಲಿ ವಸಂತಕುಮಾರ್ ಅವರು, ನಾವು ಎಸ್ಸೆಗೆ ಪ್ರತಿಯಾಗಿ ಲಲಿತಪ್ರಬಂಧ ಎಂಬ ಹೆಸರನು ಒಪ್ಪಿಕೊಂಡು ಸೌಲಭ್ಯದ ದೃಷ್ಟಿಯಿಂದ ಪ್ರಬಂಧ ಎಂದೇ ಕರೆಯಬಹುದು ಎನುತ್ತಾರೆ. ಕೃತಿಯಲ್ಲಿ ಪ್ರಬಂಧ ಸಾಹಿತ್ಯದ ಬಗ್ಗೆ ವಿವರವಾದ ಚರ್ಚೆ ಇದೆ.
ಕೃತಿ: ಪ್ರಬಂಧ ಸಾಹಿತ್ಯ, ಪ್ರಕಾರ: ಸಂಶೋಧನೆ
ಏಕೆ ಓದಬೇಕು?: ಪ್ರಬಂಧದ ಬಂಧ ಅರಿಯಲು, ಪ್ರ: ಪ್ರಸಾರಾಂಗ, ಮೈಸೂರು ವಿವಿ, ಪುಟಗಳು 150, ಬೆಲೆ ರು.  80

ಅದ್ಭುತ ಭಾರತ
ಎ.ಎಲ್. ಬಾಶಮ್ ಭಾರತೀಯಶಾಸ್ತ್ರದಲ್ಲಿ ಪ್ರಖ್ಯಾತ ವಿದ್ವಾಂಸರು. ಅವರು 'ದಿ ವಂಡರ್ ದಟ್ ವಾಸ್ ಇಂಡಿಯಾ' ಎಂಬ ಕೃತಿಯನು ಬರೆದಿದ್ದು ಅದನು ಡಿ.ಆರ್. ಮಿರ್ಜಿ 'ಪ್ರಾಚೀನ ಭಾರತವೆಂಬ ಅದ್ಭುತ' ಹೆಸರಿನಲ್ಲಿ ಕನಡಕ್ಕೆ ತಂದಿದ್ದಾರೆ. ಇಂಗ್ಲೆಂಡಿನಲ್ಲಿ ಮೂಲ ಕೃತಿ 1954ರಲ್ಲಿ ಪ್ರಕಟವಾಗಿತ್ತು. ಪಂಡಿತ ಪಾಮರರನು ಸಮಾನವಾಗಿ ಆಕರ್ಷಿಸಿದ್ದ ಇದು ನಂತರ ಹಲವಾರು ಆವೃತ್ತಿಗಳನು ಕಂಡಿತ್ತು. ಜಗತ್ತಿನ ಎಲ್ಲ ಪ್ರಮುಖ ಭಾಷೆಗಳಿಗೂ ಇದು ಅನುವಾದಗೊಂಡಿದೆ. ಸಂಸ್ಕೃತದಲ್ಲಿ ಬಿ.ಎ. ಪದವಿಯನು ಪಡೆದಿದ್ದ ಬಾಶಮ್ ಭಾರತಶಾಸ್ತ್ರವನು ಆಳವಾಗಿ ಅಧ್ಯಯನ ಮಾಡಿದವರು. ಭಾರತದ ಧಾರ್ಮಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಯ ಬಗ್ಗೆ, ಸಂಗೀತ ಸಾಹಿತ್ಯ, ಶಿಲ್ಪಕಲೆ, ಚಿತ್ರಕಲೆ ಮೊದಲಾದವುಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರು ಅವರು. ಮದುವೆ, ಮುಂಜಿ, ಅಪರಕರ್ಮ ಮೊದಲಾದವುಗಳ ವಿವರಣೆಯಲ್ಲಿ ಭಾರತೀಯರಾದವರಿಗೂ ಗೊತ್ತಿರದ ಹಲವು ಸೂಕ್ಷ್ಮ ವಿಚಾರಗಳ ಪರಿಚಯ ಇದರಲ್ಲಿ ಸಿಗುತ್ತದೆ.
ಕೃತಿ: ಪ್ರಾಚೀನ ಭಾರತವೆಂಬ ಅದ್ಭುತ
ಪ್ರಕಾರ: ಅನುವಾದ
ಏಕೆ ಓದಬೇಕು?: ವಿದೇಶಿಯನ ದೃಷ್ಟಿಯಲ್ಲಿ ಭಾರತ ಅರಿಯಲು
ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು, ಪುಟಗಳು 904, ಬೆಲೆ ರು.  700

ತ್ರಿಭಂಗಿ
ಕಮಲಾ ಹೆಮ್ಮಿಗೆಯವರು ತುಂಬಾ ಹಿಂದೆ ಬರೆದ ಎರಡು ನೀಳ್ಗತೆಗಳು ಮತ್ತು ಕಮಲಾದಾಸ್ ಅವರ ಒಂದು ಕತೆಯ ಅನುವಾದ ಸೇರಿ ಈ 'ತ್ರಿಭಂಗಿ' ಸಂಕಲನ ಮೂಡಿಬಂದಿದೆ. ಕಮಲಾ ಅವರ ಆಖ್ಯಾನ ಮತ್ತು ಅವರೋಹಣ ಕತೆಗಳು ಇಲ್ಲಿವೆ. ಮಾಧವಿ ಕುಟ್ಟಿ ಅಲಿಯಾಸ್ ಕಮಲಾದಾಸ್ ಅವರ 'ಗಂಧದ ಬಳ್ಳಿಗಳು' ಕತೆಯನು ಇಲ್ಲಿ ಅನುವಾದಿಸಿ ನೀಡಲಾಗಿದೆ. ಮೂಲ ಮಲೆಯಾಳಿ ಕತೆ ಇಂಗ್ಲಿಷ್ ಮೂಲಕ ಇಲ್ಲಿ ಬಂದಿದೆ. ನವ್ಯದ ಮತ್ತು ಅನಂತಮೂರ್ತಿಯವರ ದಟ್ಟ ಪ್ರಭಾವಕ್ಕೆ ಒಳಗಾಗಿದ್ದ ಕಮಲಾ ಹೆಮ್ಮಿಗೆ ನಿರ್ಭಿಡೆಯಿಂದ ಕತೆಯನು ಹೆಣೆದಿದ್ದಾರೆ. ಅದುವರೆಗೆ ಮುಸುಕಿನಲ್ಲಿದ್ದ ಹೆಣ್ಣಿನ ಒಳತೋಟಿಗಳು ಇಲ್ಲಿ ಅನಾವರಣಗೊಂಡಿರುವುದನು ಕಾಣಬಹುದು. ಇಂಥ ನಿರ್ಭಿಡೆಯ ಕಾರಣದಿಂದಾಗಿಯೇ ಕಮಲಾ ಹೆಮ್ಮಿಗೆಗೆ ಕಮಲಾದಾಸ್ ಇಷ್ಟದ ಲೇಖಕಿಯಾಗಿರುವುದು. ಇಬ್ಬರ ಹೆಸರೂ ಕಮಲಾ! ಆದರೆ ಇಲ್ಲಿಯ ಕತೆಗಳನು ತೌಲನಿಕವಾಗಿ ನೋಡಿದಾಗ ಕತೆಯ ಶಿಲ್ಪ ಒಂದೇ ರೀತಿ ಕಂಡರೂ ಎರಡೂ ಕಮಲಗಳ ಘಮದಲ್ಲಿಯ ವ್ಯತ್ಯಾಸ ಗೊತ್ತಾಗಿಬಿಡುತ್ತದೆ.
ಕೃತಿ: ತ್ರಿಭಂಗಿ, ಪ್ರಕಾರ: ಕತೆಗಳು
ಏಕೆ ಓದಬೇಕು?: ಸ್ತ್ರೀಚಿಂತನೆಗೆ
ಪ್ರ: ಸುಂದರಸಾಹಿತ್ಯ, ಬೆಂಗಳೂರು, ಪುಟಗಳು 135, ಬೆಲೆ ರು.  100

ಅ.ನ.ಕೃ. ಮಾತು
ಕನಡ ನವೋದಯ ಅಂದರೆ ಕನಡ, ಕರ್ನಾಟಕದ ಪುನರುತ್ಥಾನದ ಕಾಲ. ಕರ್ನಾಟಕ ಏಕೀಕರಣದ ಕನಸಿನ ಕಾಲ. ಭಾರತ ಸ್ವಾತಂತ್ರ್ಯ ಚಳವಳಿಯ ಒಡಲೊಳಗೇ ಕರ್ನಾಟಕ ಏಕೀಕರಣ ಚಳವಳಿಯೂ ಮೊಳಕೆಯೊಡೆದು ಬೆಳೆದಿತ್ತು. ನಾಡಿನ ಏಕೀಕರಣಕ್ಕಾಗಿ ದುಡಿದ ಪ್ರಾತಃಸ್ಮರಣೀಯರಲ್ಲಿ ಅ.ನ.ಕೃಷ್ಣರಾಯರು ಪ್ರಮುಖರು. ಕರ್ನಾಟಕ ಕಾದಂಬರಿ ಸಾರ್ವಭೌಮರೆಂದು ಹೆಸರಾದ ಅವರು ಈ ನಾಡಿನ ಉದ್ದಗಲಕ್ಕೂ ಸಂಚರಿಸಿ ಕನಡ ಮನಸ್ಸುಗಳನು ಜಾಗೃತಗೊಳಿಸುವ ಕೆಲಸವನು ಮಾಡಿದರು. ಈ ನಾಡು ಕಂಡ ಅದ್ಭುತ ವಾಗ್ಮಿಗಳಲ್ಲಿ ಅವರು ಒಬ್ಬರಾಗಿದ್ದರು. ಹಲವು ವಿಷಯಗಳಲ್ಲಿ ಪಾಂಡಿತ್ಯ ಹೊಂದಿದ್ದ ಅನಕೃ ಅವರ ಭಾಷಣ ಕಲೆಯ ಬಗ್ಗೆ ಜಿ.ಪಿ. ರಾಜರತಂ ಅವರು ಮೆಚ್ಚುಗೆಯ ನುಡಿಯನಾಡಿದ್ದರು. ಕನಡಿಗರ ಸ್ವಾಭಿಮಾನವನು ಬಡಿದೆಬ್ಬಿಸಿದ ಕೃಷ್ಣರಾಯರ ಕೆಲವು ಭಾಷಣಗಳನು ಅವರ ಅಭಿಮಾನಿ ಶಾ.ಮಂ.ಕೃಷ್ಣರಾಯರು ಸಂಪಾದಿಸಿಕೊಟ್ಟಿದ್ದಾರೆ. ಕರ್ನಾಟಕದ ಇತಿಹಾಸದ ಹಲವು ಒಳನೋಟಗಳು ಅನಕೃ ಭಾಷಣಗಳಲ್ಲಿ ದೊರಕುತ್ತವೆ.
ಕೃತಿ: ಅ.ನ.ಕೃ. ಭಾಷಣಗಳು, ಪ್ರಕಾರ: ಭಾಷಣಗಳು
ಏಕೆ ಓದಬೇಕು?: ನಾಡಿನ ಇತಿಹಾಸ ಅರಿಯಲು
ಪ್ರ: ಸಾಗರ್ ಪ್ರಕಾಶನ ಬೆಂಗಳೂರು, ಪುಟಗಳು 288, ಬೆಲೆ ರು.  145

ಇಸ್ಲಾಂ ಅರಿವು
ಇಸ್ಲಾಂ ಧರ್ಮದ ಸಾರವನು ಮುಸ್ಲಿಮೇತರರಿಗೂ ಸರಳವಾದ ರೀತಿಯಲ್ಲಿ ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಸೈಯದ್ ಹಾಮಿದ್ ಮೊಹ್ಸಿನ್‌' ಅವರು 'ಮುಹಮ್ಮದ್ ಸರ್ವಜನರ ಪ್ರವಾದಿ' ಎಂಬ ಕೃತಿಯನು ಇಂಗ್ಲಿಷ್‌ನಲ್ಲಿ ರಚಿಸಿದ್ದಾರೆ. ಅದನು ಅಸಿಫ್ ಅಲಿ ಇಂಜಿನಿಯರ್ ಕನಡಕ್ಕೆ ಅನುವಾದಿಸಿರುವರು. ಸರ್ವಧರ್ಮಗಳ ಸಾರವು ಒಂದೇ. ಸಜ್ಜನರಾಗಿ ಬದುಕಿ ಎಂದು ಎಲ್ಲ ಧರ್ಮಗಳೂ ಹೇಳುತ್ತವೆ. ಹಾಗೆ ಬದುಕುವ ಮಾರ್ಗವನೂ ಅವು ತಿಳಿಸಿಕೊಡುತ್ತವೆ. ಈ ಕೃತಿಯನು ಓದಿದಾಗ ಇಸ್ಲಾಂ ಧರ್ಮದಲ್ಲಿಯ ಉದಾತ್ತ ವಿಚಾರಗಳು ಸರಳವಾಗಿ ಬೋಧೆಯಾಗುತ್ತವೆ. ಕುರಾನಿನಲ್ಲಿ ಅಂತರ್ಗತವಾದ ಹಲವು ವಿಚಾರಗಳನು ಒಬ್ಬ ಸಂಶೋಧಕನ ಹಾಗೆ ಅವರು ವಿಶ್ಲೇಷಿಸಿದ್ದಾರೆ. ಸ್ತ್ರೀಯರ ವಿಚಾರದಲ್ಲಿ ಕುರಾನಿನಲ್ಲಿ ಅನೇಕ ಪ್ರಗತಿಪರ ವಿಚಾರಗಳು ಇರುವುದು ತಿಳಿಯುತ್ತದೆ. ಕಷ್ಟದಲ್ಲಿರುವವರಿಗೆ ನೆರವಾಗಬೇಕೆಂದು ಕುರಾನ್ ಹೇಳುತ್ತದೆ. ಈ ಕೃತಿಯನು ಓದಿದಾಗ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಪ್ರೀತಿ ಮೂಡದೆ ಇರದು.
ಕೃತಿ: ಮುಹಮ್ಮದ್ ಸರ್ವ ಜನರ ಪ್ರವಾದಿ
ಪ್ರಕಾರ: ಪ್ರವಾದಿಯ ಜೀವನ ಮತ್ತು ಸಂದೇಶ
ಏಕೆ ಓದಬೇಕು?: ಇಸ್ಲಾಂ ಬಗ್ಗೆ ಅರಿಯಲು
ಪ್ರ: ಸಲಾಮ್ ಸೆಂಟರ್ ಬೆಂಗಳೂರು,
ಪುಟಗಳು 446, ಬೆಲೆ ರು.  145

ನಗುವಿಗೆ ಶ್ರೀದೇವಿ ಟಾನಿಕ್
ನಿತ್ಯಜೀವನದ ಜಂಜಾಟದಲ್ಲಿ ಮನುಷ್ಯರು ನಗುವುದನೇ ಮರೆತವರಂತೆ ಇದ್ದಾರೆ. ಅಂಥವರನು ನಗಿಸುವುದಕ್ಕಾಗಿ ಶ್ರೀದೇವಿ ರಾಜನ್ ಅವರು 'ವಿಸಿಟಿಂಗ್ ಸೊಸೆ' ಮೂಲಕ ನಿಮ್ಮ ಮುಂದೆ ಬಂದಿದ್ದಾರೆ. ಇದು ಅವರ ಮೂರನೆಯ ನಗೆ ಬರೆಹಗಳ ಸಂಕಲನ. ಇದರಲ್ಲಿ ಭರ್ತಿ 26 ನಗೆಬರೆಹಗಳಿವೆ. ಮೂಲತಃ ಕತೆಗಾರ್ತಿಯಾದ ಶ್ರೀದೇವಿ ರಾಜನ್ ಅವರ ನಗೆಬರೆಹಗಳಲ್ಲೂ ಕಥನಗಾರಿಕೆಯ ಕುಸುರಿಕಲೆ ಇದೆ. ನಿರೂಪಣೆಯಲ್ಲಿ ಅವರು ಪಳಗಿದ್ದಾರೆ. ನಿತ್ಯಜೀವನದ ಲಘು ಪ್ರಸಂಗಗಳನು ಅವರು ಇಲ್ಲಿ ರಸವತ್ತಾಗಿ ವರ್ಣಿಸಿದ್ದಾರೆ. ಇವು ಯಾರ ಬದುಕಿನಲ್ಲಿಯೂ ಸಂಭವಿಸಬಹುದಾದುದರಿಂದ ಎಲ್ಲರಿಗೂ ಇಷ್ಟವಾಗುತ್ತವೆ. ಹಾಸ್ಯದ ಹಿಂದೆ ವಿಡಂಬನೆ ಇದೆ. ಲೇವಡಿ ಇದೆ. ಅಂತಃಕರಣ ಇದೆ. ಆಳದಲ್ಲೆಲ್ಲೋ ಅವಿತಿರುವ ನೋವಿದೆ. ಬದುಕಿಗೆ ಬೇಕಾದ ಹಿತಪಾಠಗಳೂ ಇದರಲ್ಲಿ ಅಡಕವಾಗಿವೆ. ಅವನು ಓದುಗನಿಗೆ ತಟ್ಟಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಸರಳವಾದ ಭಾಷೆ ಶ್ರೀದೇವಿಯವರ ಬರೆಹಗಳಿಗೆ ಒಂದು ಗುಣವಾಗಿ ಒದಗಿದೆ.
ಕೃತಿ: ವಿಸಿಟಿಂಗ್ ಸೊಸೆ, ಪ್ರಕಾರ: ಹಾಸ್ಯ ಲೇಖನ
ಏಕೆ ಓದಬೇಕು?: ನಕ್ಕು ಹಗುರಾಗಲು
ಪ್ರ: ಹೇಮಂತ ಸಾಹಿತ್ಯ ಬೆಂಗಳೂರು, ಪುಟಗಳು 120, ಬೆಲೆ ರು.  65

ನಾರೀಗೀತ
ರಾಜಾರಾವ್ ಅವರು ಇಂಗ್ಲಿಷ್‌ನಲ್ಲಿ ಕೃತಿ ರಚಿಸಿದ ಖ್ಯಾತ ಕನ್ನಡಿಗ ಲೇಖಕರು. ಅವರ 'ಸಾಂಗ್ ಆಫ್ ವುಮನ್‌' ಕಾದಂಬರಿಯನ್ನು ಸಿ.ಎನ್. ಶ್ರೀನಾಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಜಾರಾವ್ ಈ ಕೃತಿಯನ್ನು 1940ರ ದಶಕದಲ್ಲಿ ಬರೆದರು. ಅದು ದ್ವಿತೀಯ ಮಹಾಯುದ್ಧ ನಡೆಯುತ್ತಿದ್ದ ಕಾಲ. ಅವರ ಮೊದಲ ಕಾದಂಬರಿ 'ಕಾಂತಾಪುರ'ದ ಹಾಗೆ ಇದರಲ್ಲಿಯೂ ಗ್ರಾಮೀಣ ಬದುಕಿನ ದಟ್ಟ ಚಿತ್ರಣವಿದೆ. ರಾಮಪ್ಪ- ಕೃಷ್ಣಪ್ಪ ಎಂಬ ಸಹೋದರರ ಅವಿಭಕ್ತ ಕುಟುಂಬ, ಆ ಕುಟುಂಬದ ಸದಸ್ಯರ ನಡುವಿನ ಗಾಢವಾದ ಬಂಧ, ರಾಜಕೀಯ ಪ್ರಜ್ಞೆ, ಮನುಷ್ಯ ಮತ್ತು ಪ್ರಕೃತಿಗಳ ನಡುವಿನ ಸಂಬಂಧ, ಹೆಣ್ಣಿನ ಒಳತೋಟಿಗಳು ಅಸಾಧಾರಣ ಎನ್ನುವಂತೆ ಇಲ್ಲಿ ನಿರೂಪಣೆಯಾಗಿದೆ. ಗಾಂಧಿಯುಗದ ಸ್ತ್ರೀ ಸಮೂಹದ ಚಿತ್ರಣ ಇಲ್ಲಿದೆ. ಅಂದಿನ ಮೌಲ್ಯಗಳ ತಾಕಲಾಟ ಹಾಗೂ ಯುಗಧರ್ಮದ ಮೂಲ ಆಶಯಗಳ ಮಂಡನೆ ಇದೆ. ಸಿ.ಎನ್.ಶ್ರೀನಾಥರ ಅನುವಾದದ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ.
ಕೃತಿ: ನಾರೀಗೀತ, ಪ್ರಕಾರ: ಅನುವಾದ
ಏಕೆ ಓದಬೇಕು?: ಕಳೆದ ಶತಮಾನದ ಗ್ರಾಮೀಣ ಬದುಕನ್ನು ಅರಿಯಲು
ಪ್ರ: ಧ್ವನ್ಯಾಲೋಕ ಪಬ್ಲಿಕೇಷನ್ಸ್, ಮೈಸೂರು ಹಾಗೂ ಕನ್ನಡ ವೃಂದ ಹ್ಯೂಸ್ಟನ್, ಪುಟಗಳು 256, ಬೆಲೆ ರು.  150

ಪಶುವೈದ್ಯೋ ನಾರಾಯಣೋ.....
ಕನ್ನಡ ಸಾಹಿತ್ಯ ಹೇಗೆ ಶ್ರೀಮಂತವಾಗುತ್ತದೆ ಎನ್ನುವುದಕ್ಕೆ ಡಾ.ಗಣೇಶ ಎಂ.ನೀಲೇಸರ ಅವರ 'ಡೇರಿ ಡಾಕ್ಟರ್ ಹೋರಿ ಮಾಸ್ಟರ್‌' ಎಂಬ ಕೃತಿ ಒಂದು ಉತ್ತಮ ಉದಾಹರಣೆಯಾಗಿದೆ. ಪಶುವೈದ್ಯರ ವೃತ್ತಿಯಲ್ಲಿ ಬರುವ ಅನುಭವಗಳನ್ನು ಲಘು ವಿನೋದದ ರೀತಿಯಲ್ಲಿ ಬರೆಹಕ್ಕೆ ಇಳಿಸಿದ ಪರಿ ಅದ್ಭುತವಾದದ್ದು. ಕನ್ನಡ ಸಾಹಿತ್ಯಕ್ಕೆ ಇದುವರೆಗೆ ದಕ್ಕದೆ ಇದ್ದ ಹೊಸ ಪುಟಗಳು ಈ ಮೂಲಕ ಸೇರ್ಪಡೆಯಾಗಿವೆ. ವೃತ್ತಿಯಿಂದ ಪಶುವೈದ್ಯರೇ ಆಗಿರುವ ಗಣೇಶ ಅವರಿಗೆ ಪ್ರೇರಣೆ ಅಮೆರಿಕದ ಪ್ರಖ್ಯಾತ ಬರೆಹಗಾರ ಜೇಮ್ಸ್ ಹೆರಿಯಟ್ ಕಾವ್ಯನಾಮದ ಜೇಮ್ಸ್ ಆಲ್‌ಫ್ರೆಡ್ ವೈಟ್. ತನ್ನ ವೃತ್ತಿಜೀವನದ ಸ್ವಾರಸ್ಯಕರ ಅನುಭವಗಳನ್ನು ಕಥೆಯ ರೂಪದಲ್ಲಿ ಬರೆದ ಜೇಮ್ಸ್ ಹೆರಿಯಟ್ ಅಮೆರಿಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ. ಆತನ ಬರೆಹಗಳನ್ನು ಆಧರಿಸಿ ಅಲ್ಲಿ ಟೀವಿ ಧಾರಾವಾಹಿಗಳೂ ಆರಂಭವಾದವು. ಆತನ ಬರೆಹಗಳ ರೂಪಾಂತರವನ್ನು ಗಣೇಶ ನೀಲೇಸರ ಅವರು ಭಾರತೀಯ ಸಂದರ್ಭಕ್ಕೆ ಹೊಂದುವಂತೆ ನೀಡಿದ್ದಾರೆ.
ಕೃತಿ: ಡೇರಿ ಡಾಕ್ಟರ್ ಹೋರಿ ಮಾಸ್ಟರ್
ಪ್ರಕಾರ: ಅನುಭವ ಕಥನ
ಏಕೆ ಓದಬೇಕು?: ಪಶುವೈದ್ಯರ ಪೇಚು ಅರಿಯಲು
ಪ್ರ: ಭೂಮಿ ಬುಕ್ಸ್, ಬೆಂಗಳೂರು, ಪುಟಗಳು 160, ಬೆಲೆ ರು.  120

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.