ಹಾಡುಪದದ ಜಾಡು
'ನ್ಯಾಸ್ತನೇ ನೆಲಬಾಲನೆ ಸರಿಯಲ್ಲವೋ ಏ ಕಾಂತನೇ...'
ತೆಲುಗಿನ 'ಅಭಿಜ್ಞಾನ ಶಾಕುಂತಲ' ನಾಟಕದಲ್ಲಿ ಶಕುಂತಲೆಯ ಯಾತನೆಯ ಹಾಡಾಗಿ ಹೊಮ್ಮಿದ ಈ ಸೊಲ್ಲು, ಕನಡದ 'ಅನಭಿಜ್ಞ ಶಾಕುಂತಲ' ನಾಟಕದಲ್ಲಿ ಕವಿ ಕಾಳಿದಾಸನ ದಿಕ್ಕುಗೆಟ್ಟ ಜೀವನಯಾನದ ಪಾಡಾಗಿ ಕೇಳಿಸುತ್ತದೆ. ರಾಮಚಂದ್ರ ಹಡಪದ್ ಅವರ ಕಂಠ ಮಧ್ಯ ಮಸ್ಥಾಯಿಯಲ್ಲಿ ಮಿಡಿಯುತ್ತ ಇಡೀ ನಾಟಕದ ಜೀವಸ್ರೋತವನು ಕುಂದಿಲ್ಲದಂತೆ ನೋಡುಗರಿಗೆ ಮುಟ್ಟಿಸುತ್ತದೆ.
'ಪ್ರಸಂಗ' ತಂಡದ ಅನಭಿಜ್ಞ ಶಾಕುಂತಲ ನಾಟಕ ಹಲವಾರು ಸೂಪರ್ಹಿಟ್ ಶೋಗಳನು ಕಂಡಿದೆ. ಹಾಡುಗಳು ಅದರ ಜೀವಾಳ. ಈ ಹಾಡುಗಳಿಗೆ ಜೀವ ತುಂಬಿದ ದನಿ ರಾಮಚಂದ್ರ ಹಡಪದ್. ಗುಲ್ಬರ್ಗದ ಹಳ್ಳಿಯೊಂದರಿಂದ ಬಂದ ಪ್ರತಿಭೆ, ಇಂದು ನಾಡಿನ ರಂಗಪ್ರವಾಹದಲ್ಲಿ ಗುರುತಿಸಬೇಕಾದ ನಾದದ ಅಲೆ. ರಾಜಧಾನಿಯ ರಂಗತಂಡಗಳ ಅಚ್ಚುಮೆಚ್ಚು.
ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಂಕುರ್ ಗ್ರಾಮ ಹುಟ್ಟೂರು. ಡಿಗ್ರಿ ಪಡೆದದ್ದೆಷ್ಟೋ ಅಷ್ಟೇ. ಆಸಕ್ತಿ ಮಾತ್ರ ಶಾಸ್ತ್ರೀಯ ಸಂಗೀತ. ಮೊದಲಿಗೆ ಎಂ.ಆರ್.ರುದ್ರೇಶ್, ರೇವಯ್ಯ ವಸ್ತ್ರದ್ಮಠ್ ಗುರುಗಳು. ಹುಡುಗನ ಹುಚ್ಚಿಗೆ ಮನೆಯಲ್ಲಿ ಸಿಕ್ಕಿದ್ದು ಏರುಹುಬ್ಬಿನ ನೋಟ. ಊರಿಂದ ಹೊರಟು ರಾಜಧಾನಿಗೆ ಬಂದವನನು ಆಲಂಗಿಸಿಕೊಂಡದ್ದು ರಂಗಸಂಗೀತ. 'ನಾಗರಬೆತ್ತ' ನಾಟಕವೇ ಆರಂಭ. ಇಲ್ಲಿವರೆಗೂ 36 ನಾಟಕಗಳು, 400 ಪ್ರದರ್ಶನಗಳು ಪೂರ್ತಿ.
ಶಾಸ್ತ್ರೀಯ ಹಾಡುಗಾರಿಕೆಗೆ ಇಲ್ಲಿ ಉಸ್ತಾದ್ ಫಯಾಜ್ ಖಾನರ ಶಿಷ್ಯತ್ವ. ಹೊಟ್ಟೆಪಾಡಿಗೆ ರಂಗಸಂಗೀತ, ಸುಗಮಸಂಗೀತ, ಸಿನಿಮಾ. 'ನಿಮ್ಹಾನ್ಸ್' ಚಿತ್ರದಲ್ಲಿ ಅವಿನಾಶ್ ಜತೆಗೆ ಸಂಗೀತ ನಿರ್ದೇಶನ, ಗಾಯನ. 'ಕಳುವು' ಚಿತ್ರೀಕರಣದಲ್ಲಿದೆ. ಸಂಗೀತದಿಂದಲೇ ಅನವನೂ ಹೆಸರನೂ ಪಡೆಯುವ ಹಂಬಲ. ಸಂಗೀತ ನಿರ್ದೇಶಕನಾಗಿ ನೆಲೆನಿಲ್ಲುವ ಗುರಿ. ಮಾದರಿ ತನಗೆ ತಾನೇ ಎನುವ ಸ್ವಾಭಿಮಾನ. ಅಭಿನಂದಿಸಲು: 8050828126 <
ಹಾಡುಪದ
ಸದ್ಯ 'ರಂಗನಿರಂತರ' ತಂಡದ 'ಮಳೆಮಾಂತ್ರಿಕ' ನಾಟಕದ ಹಾಡುಗಳು ಇವರ ಕಂಠದಿಂದ ಜೀವ ಪಡೆಯುತ್ತಿವೆ. ಹಡಪದ್ ಹಾಡಿದ ಈ ಹಾಡುಗಳ ಧ್ವನಿತಟ್ಟೆ ಮಾ.26ರ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ. ನಾಗಾಭರಣ, ಹಂಸಲೇಖ, ಕೆ.ವೈ.ನಾರಾಯಣ್ವಾಮಿ, ನಾರಾಯಣ ರಾಯಚೂರು ಉಪಸ್ಥಿತಿ. ಈ ಸಂದರ್ಭದಲ್ಲಿ ಹಡಪದರ ಗಾಯನವೂ ಇದೆ. ಈ ಕಾರ್ಯಕ್ರಮಕ್ಕೆ 'ಹಾಡುಪದ' ಎಂಬ ಚಂದದ ಹೆಸರನೂ ಕೊಟ್ಟಿದ್ದಾರೆ.
-ವಿಹಂಗಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

