ಸಂಗೀತ ಲೋಕ ಸೃಷ್ಟಿ

ಸೃಷ್ಟಿ ಕಲಾಸಂಸ್ಥೆ ಮೊದಲ ಬಾರಿಗೆ ದಸರ ರಾಷ್ಟ್ರೀಯ ಸಂಗೀತ ನೃತ್ಯ ನಾಟಕ ಉತ್ಸವವನ್ನು ನಡೆಸುತ್ತಿದೆ. ಅಕ್ಟೋಬರ್ 5ರಿಂದ 14ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 32 ತಂಡಗಳು, 150 ಕಲಾವಿದರಿಂದ ಭರತನಾಟ್ಯ, ಕಥಕ್, ಮಣಿಪುರಿ, ನಾಟಕ, ನೃತ್ಯ ನಾಟಕ, ಓಡಿಸ್ಸಿ ನೃತ್ಯ, ಕೂಚುಪುಡಿ, ಸಟ್ರೆಯ ಮತ್ತು ಶಾಸ್ತ್ರೀಯ ಸಂಗೀತದ ಮೂಲಕ ಹಬ್ಬದ ವಾತಾವರಣ ನಿರ್ಮಿಸಲಿದ್ದಾರೆ.
ಅ.5ರಂದು ಜಯನಗರ ನ್ಯಾಷನಲ್ ಕಾಲೇಜಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಪದ್ಮಭೂಷಣ ಆರ್.ಕೆ. ಪದ್ಮನಾಭ ಅವರಿಂದ ಉದ್ಘಾಟನೆ. 9ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀಕಂಠನ್ ಅವರಿಗೆ 'ಸೃಷ್ಟಿ ರಾಷ್ಟ್ರೀಯ ಸಂಗೀತ ಸಮ್ಮಾನ್' ಪ್ರಶಸ್ತಿ ಪ್ರದಾನ ಹಾಗೂ ಅವರ ಕಛೇರಿ. 10ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಎ.ವಿ. ಸತ್ಯನಾರಾಯಣ ಅವರ 'ಮಹಾನ್ ಬುದ್ಧ' ನೃತ್ಯರೂಪಕ ಮತ್ತು ಏಕವ್ಯಕ್ತಿ ಪ್ರದರ್ಶನ. ಪ್ರತಿ ದಿನ 'ದಾಂಡಿಯ ರಾಸ್' ಇರುತ್ತದೆ. 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 7.30ಕ್ಕೆ ನಾಗಾಭರಣರ ಬೆನಕ ತಂಡದಿಂದ ಜೋಕುಮಾರಸ್ವಾಮಿ ನಾಟಕ ಪ್ರದರ್ಶನವಿದೆ. ರವೀಂದ್ರ ಕಲಾಕ್ಷೇತ್ರ, ಎಚ್.ಎನ್. ಕಲಾಕ್ಷೇತ್ರ, ನಯನ ರಂಗಮಂದಿರಗಳಲ್ಲಿ ನಡೆಯುವ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರ್ ಬ್ಯಾಂಕ್, ಕೆನರಾ ಬ್ಯಾಂಕ್, ಬೆಂಮಪಾ ಸಹಕಾರವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


