ಇಂದಿನಿಂದ ತೇಜಸ್ವಿ ವಿಶೇಷ

ತೇಜಸ್ವಿ ಇದ್ದಿದ್ದರೆ ಇವತ್ತಿಗೆ ಅವರಿಗೆ 75 ತುಂಬುತ್ತಿತ್ತು. ಈ ಹಸಿರಲ್ಲಿ, ಆ ಕೃತಿಯಲ್ಲಿ, ಯಾವುದೋ ಚಿತ್ರದಲ್ಲಿ ಅಚ್ಚಳಿಯದೆ ಬೆರೆತ ತೇಜಸ್ವಿಯವರನ್ನು ಈಗಿಲ್ಲ ಎನ್ನಲು ನಾವ್ಯಾರು? ಅವರ ಜೀವಂತಿಕೆಗೆ ಸಾಕ್ಷಿಯಾಗುವ ಸಂಗತಿಗಳಲ್ಲಿ ಕಾರ್ಯಕ್ರಮ, ಸಂವಾದಗಳೂ ಸೇರಿಕೊಂಡಿವೆ. ಸೆ.8ರಿಂದ 14ರ ವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಈ ಸ್ಮರಣೆಯಲ್ಲಿ ವೈವಿಧ್ಯ ಕಾರ್ಯಕ್ರಮಗಳ ಸುಗ್ಗಿಯೇ ಇದೆ. ಸೆ.8ರ ಭಾನುವಾರ ಸಂಜೆ 4ಕ್ಕೆ ತೇಜಸ್ವಿಯವರ 'ಕಾಡು ಮತ್ತು ಕ್ರೌರ್ಯ' ಕಾದಂಬರಿಯ ಬಿಡುಗಡೆಯಿದೆ. ಜೊತೆಗೆ 'ವಿಶ್ವ ಪರಿಸರ ದಿನ' ಕೈಪಿಡಿಗಳ ಬಿಡುಗಡೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಕಲಾವಿದರು ರಚಿಸಿರುವ ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯೂ ಇದೆ. ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ. ಕೃತಿ ಬಿಡುಗಡೆಯನ್ನು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರು ನಡೆಸಿಕೊಡುತ್ತಾರೆ. ಮುಖ್ಯ ಅತಿಥಿಯಾಗಿ ನಾಗೇಶ ಹೆಗಡೆ, ಅಧ್ಯಕ್ಷತೆಯ ಆಸನದಲ್ಲಿ ಬಿ.ಎಲ್. ಶಂಕರ್ ಕಾಣಿಸಿಕೊಳ್ಳಲಿದ್ದಾರೆ.
ಸೆ.10ರಂದು ನವಕರ್ನಾಟಕ ಪಬ್ಲಿಕೇಶನ್ ಹೊರತಂದ 'ತೇಜಸ್ವಿ ಪರಿಸರ ಕಥಾಪ್ರಸಂಗ' ನಾಟಕ ಕೃತಿ ಬಿಡುಗಡೆ, ಪ್ರದರ್ಶನವಿದೆ. ಸೆ.11ರಂದು ಪ್ರಯೋಗರಂಗ ಅಭಿನಯದ 'ಯಮಳ ಪ್ರಶ್ನೆ' ನಾಟಕವಿದೆ. ಸೆ.12ರಂದು 'ಪರಿಸರ ಕಾವ್ಯ' ಕಾರ್ಯಕ್ರಮದಲ್ಲಿ ವಿವಿಧ ಕವಿಗಳಿಂದ ಕಾವ್ಯವಾಚನವಿದೆ. ಸೆ.13ರಂದು ಗೀತಾಗಾಯನ, ಸೆ.14ರ ಶನಿವಾರ 'ತೇಜಸ್ವಿ ನೋಟ- ಕಿರುಚಿತ್ರಗಳ ಪ್ರದರ್ಶನ'ವಿರುತ್ತದೆ. ಇಷ್ಟೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವವರು ಕರ್ನಾಟಕ ಚಿತ್ರಕಲಾ ಪರಿಷತ್, ಭಾರತ ಯಾತ್ರಾ ಕೇಂದ್ರ, ವಿಸ್ಮಯ ಪ್ರತಿಷ್ಠಾನ ಮೂಡಿಗೆರೆ, ಪರಿಸರ- ನಿಸರ್ಗ ಸಂರಕ್ಷಣಾ ಸಂಸ್ಥೆ.
ಮರೆಯದೆ ಬನ್ನಿ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


