ಮದ್ಯ ಸೇವಿಸಲು ನೇಪಾಳಕ್ಕೆ ತೆರಳಿದ್ದ ೭೦ ಬಿಹಾರಿಗಳ ಬಂಧನ: ಪೊಲೀಸ್

ಪ್ರಾದೇಶಿಕ ಪಬ್ ಗಳಲ್ಲಿ ಮದ್ಯ ಸವಿಯಲು ನೇಪಾಳಕ್ಕೆ ತೆರಳಿದ್ದ ಬಿಹಾರ ಮೂಲದ ೭೦ ಭಾರತೀಯರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಬಿಹಾರ ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಮದ್ಯ ನಿಷೇಧ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಖಟ್ಮಂಡು: ಪ್ರಾದೇಶಿಕ ಪಬ್ ಗಳಲ್ಲಿ ಮದ್ಯ ಸವಿಯಲು ನೇಪಾಳಕ್ಕೆ ತೆರಳಿದ್ದ ಬಿಹಾರ ಮೂಲದ ೭೦ ಭಾರತೀಯರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಬಿಹಾರ ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಮದ್ಯ ನಿಷೇಧ ಜಾರಿಯಾಗಿದೆ.

ದಕ್ಷಿಣ ನೇಪಾಳ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿ, ಕಳೆದ ಒಂದೂವರೆ ತಿಂಗಳುಗಳಿಂದ ನೇಪಾಳಿ ಗ್ರಾಮಗಳ ಪಬ್ ಗಳಿಗೆ ಮದ್ಯ ಸೇವಿಸಲು ಬರುತ್ತಿದ್ದ ೭೦ ಭಾರತೀಯರನ್ನು ಬಂಧಿಸಿರುವುದಾಗಿ ರೌತಾಹತ್ ಜಿಲ್ಲಾ ಪೊಲೀಸ್ ಕಚೇರಿ (ಡಿ ಪಿ ಒ) ತಿಳಿಸಿದೆ.

ಬಿಹಾರ ರಾಜ್ಯದಲ್ಲಿ ಮದ್ಯ ನಿಷೇಧವಾಗಿರುವುದರಿಂದ ಅಲ್ಲಿನ ನಿವಾಸಿಗಳು ಕುಡಿತವನ್ನು ಸಂಭ್ರಮಿಸಲು ನೇಪಾಳಕ್ಕೆ ಬರುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಸೀತಾಮಾರ್ಹಿಯಿಂದ ನೇಪಾಳದ ಗೌರ್ ಗೆ ತೆರಳಿದ್ದ ೯ ಭಾರತೀಯರನ್ನು ನೇಪಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇವರೆಲ್ಲರಿಗೂ ೧೦೦೦ ರೂ ದಂಡ ವಿಧಿಸಲಾಗಿದೆ ಎಂದು ಉಪ ಸೂಪರಿಂಡೆಂಟ್ ಆಫ್ ಪೊಲೀಸ್ ನಾಬಿಲ್ ಕೃಷ್ಣ ಬಂಢಾರಿ ತಿಳಿಸಿದ್ದಾರೆ. ಇಂತಹ ಚಟುವಟಿಕೆಗಳ ಪ್ರಚಾರ ಮಾಡಿದ್ದಕ್ಕೆ ಇಬ್ಬರು ಪಬ್ ಮಾಲಿಕರನ್ನು ಕೂಡ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಇಲ್ಲಿಯವರೆಗೂ ಬಂಧನಗೊಂಡ ಎಲ್ಲ ಭಾರತೀಯರ ಬಳಿ ಇನ್ನು ಮುಂದೆ ಮದ್ಯ ಸೇವನೆಗಾಗಿ ನೇಪಾಳಕ್ಕೆ ಬರುವುದಿಲ್ಲ ಎಂಬ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.

ಏಪ್ರಿಲ್ ೫ ರಂದು ಬಿಹಾರದಲ್ಲಿ ಜಾರಿಯಾದ ಮದ್ಯ ನಿಷೇಧ ಕಾಯ್ದೆಯ ಪ್ರಕಾರ ಬಾರ್ ಗಳು ಮತ್ತು ಹೋಟೆಲ್ ಗಳೂ ಸೇರಿದಂತೆ ಎಲ್ಲಿಯೂ ಮದ್ಯ ಸೇವಿಸುವಂತಿಲ್ಲ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com