• Tag results for BMRCL

ಬೆಂಗಳೂರು: ಮಾರ್ಚ್ ಮಧ್ಯಂತರದಲ್ಲಿ ವೈಟ್‌ಫೀಲ್ಡ್- ಕೆಆರ್ ಪುರಂ ಮೆಟ್ರೋ ಮಾರ್ಗ ಸಂಚಾರ ಆರಂಭ

ಬೆಂಗಳೂರಿನ ಬಹು ನಿರೀಕ್ಷಿತ ವೈಟ್‌ಫೀಲ್ಡ್ ನಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿಯನ್ನು 2 ಹಂತಗಳಲ್ಲಿ ನಡೆಯುತ್ತಿದ್ದು, ಈ ಪೈಕಿ ವೈಟ್‌ಫೀಲ್ಡ್-ಕೆಆರ್ ಪುರಂ ನಡುವಿನ ಮಾರ್ಗದ ಸಂಚಾರ 2023ರ ಮಾರ್ಚ್‌ ವೇಳೆಗೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

published on : 25th November 2022

ನಮ್ಮ ಮೆಟ್ರೊದಿಂದ ಸದ್ಯದಲ್ಲೇ ಆರು ಮಂದಿಯವರೆಗೆ ಗುಂಪು ಪ್ರಯಾಣಕ್ಕೆ ಏಕ ಮೆಟ್ರೋ QR ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ

ನಮ್ಮ ಮೆಟ್ರೊದ ಆ್ಯಪ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಬಿಡುಗಡೆಯಾದ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್‌ ವ್ಯವಸ್ಥೆ(QR code) ಯಶಸ್ಸಿನಿಂದ ಉತ್ತೇಜಿತವಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಶೀಘ್ರದಲ್ಲೇ ಒಂದು ಕ್ಯೂ ಆರ್ ಕೋಡ್ ಟಿಕೆಟ್ ಬಳಸಿ ಗರಿಷ್ಠ ಆರು ಮಂದಿಯವರೆಗೆ ಪ್ರಯಾಣಿಸಲು ಅನುಮತಿ ನೀಡಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾ

published on : 24th November 2022

ಕನ್ನಡ ರಾಜ್ಯೋತ್ಸವ ವಿಶೇಷ: ಬಿಎಂಆರ್ ಸಿಎಲ್ ನಿಂದ ಕ್ಯೂಆರ್ ಟಿಕೆಟ್ ಖರೀದಿಸುವ ಸೌಲಭ್ಯ

ಕನ್ನಡ ರಾಜ್ಯೋತ್ಸವಕ್ಕೆ ಬಿಎಂಆರ್ ಸಿಎಲ್ ರಾಜ್ಯದ ಜನತೆಗೆ ಉಡುಗೊರೆ ನೀಡಿದ್ದು, ಸಿಂಗಲ್ ಟ್ರಿಪ್ ಕ್ಯೂ ಆರ್ ಟಿಕೆಟ್ ಗಳನ್ನು ವಿತರಣೆ ಮಾಡಲಿದೆ. 

published on : 31st October 2022

ವೈಟ್‌ಫೀಲ್ಡ್‌-ಐಟಿಪಿಎಲ್‌ ಮಾರ್ಗದಲ್ಲಿ ನಮ್ಮ ಮೆಟ್ರೋ ಪ್ರಾಯೋಗಿಕ ಸಂಚಾರ; ಐಟಿ ಉದ್ಯೋಗಿಗಳ ದಶಕಗಳ ಬೇಡಿಕೆ ಈಗ ನನಸು!

ವೈಟ್‌ಫೀಲ್ಡ್ ಡಿಪೋ ಮತ್ತು ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ಮೆಟ್ರೋ ನಿಲ್ದಾಣದ ನಡುವೆ ಆರು ಬೋಗಿಗಳ ಮೆಟ್ರೋ ರೈಲಿನ ಮೊದಲ ಪ್ರಾಯೋಗಿಕ ಸಂಚಾರವನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಲಾಗಿದ್ದು, ಶೀಘ್ರದಲ್ಲೇ ಈ ಭಾಗದಲ್ಲಿ ಅಧಿಕೃತವಾಗಿ ಪ್ರಯಾಣಿಕರ ಸಂಚಾರ ಆರಂಭವಾಗಲಿದೆ.

published on : 22nd October 2022

411 ಮರಗಳ ತೆರವಿಗೆ ಹೈಕೋರ್ಟ್ ಅನುಮತಿ: ಬೆಂಗಳೂರು ಮೆಟ್ರೋದ ವಿಮಾನ ನಿಲ್ದಾಣದ ಮಾರ್ಗದ ಅಡ್ಡಿ ನಿವಾರಣೆ

ಕೆಆರ್ ಪುರಂ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೂಲಸೌಕರ್ಯ ಕಾಮಗಾರಿಗೆ ಅಡ್ಡಿಯಾಗಿದ್ದ 411 ಮರಗಳನ್ನು ತೆರವುಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ಗೆ(ಬಿಎಂಆರ್‌ಸಿಎಲ್) ಹೈಕೋರ್ಟ್ ಒಪ್ಪಿಗೆ ನೀಡಿದೆ.

published on : 17th September 2022

ಬೆಂಗಳೂರು ಮೆಟ್ರೋ ರೈಲು: 3ನೇ ಹಂತದ ಡಿಪಿಆರ್ ಸರ್ಕಾರದ ಅನುಮೋದನೆಗೆ ಸಿದ್ಧ

ಬಿಎಂಆರ್ ಸಿಎಲ್ 3 ನೇ ಹಂತದ ಅಂತಿಮ ವಿವರವಾದ ಯೋಜನಾ ವರದಿಗೆ ರಾಜ್ಯ ಸರ್ಕಾರದ ಅನುಮೋದನೆ ಪಡೆಯಲು ಸಜ್ಜಾಗಿದೆ. ಇದನ್ನು ರೈಲ್ವೆ ಸಚಿವಾಲಯದ ಸಲಹಾ ಸಂಸ್ಥೆಯಾದ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್  ಲಿಮಿಟೆಡ್ ಸಲ್ಲಿಸಿದೆ.

published on : 26th August 2022

ಸ್ವಾತಂತ್ರ್ಯೋತ್ಸವ 75ನೇ ವರ್ಷಾಚರಣೆ: ನಮ್ಮ ಮೆಟ್ರೋ ದಾಖಲೆ, 8.25 ಲಕ್ಷ ಮಂದಿ ಪ್ರಯಾಣ

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಹಿನ್ನಲೆಯಲ್ಲಿ ಆಗಸ್ಟ್ 15ರಂದು ನಮ್ಮ ಮೆಟ್ರೋ ರೈಲಿನಲ್ಲಿ ದಾಖಲೆಯ ಪ್ರಯಾಣಿಕರು ಪ್ರಯಾಣಿಸಿದ್ದು, ಇದು ಈ ಹಿಂದಿನ 6.1 ಲಕ್ಷಕ್ಕಿಂತ ಹೆಚ್ಚು ಎನ್ನಲಾಗಿದೆ.

published on : 17th August 2022

ಕೋವಿಡ್ ನಂತರ ಮೊದಲ ಬಾರಿಗೆ ಲಾಭದಲ್ಲಿ ಮೆಟ್ರೊ ರೈಲು ನಿಗಮ; ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಆದಾಯ ಏರಿಕೆ

ಕಳೆದ ಕೆಲವು ತಿಂಗಳುಗಳಲ್ಲಿ ಮೆಟ್ರೊ ರೈಲನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ನಿಗಮ ಲಾಭಕ್ಕೆ ಮರಳಲು ಮತ್ತೆ ಸಾಧ್ಯವಾಗಿದೆ, ಕೋವಿಡ್ ಪೂರ್ವ ಸ್ಥಿತಿಗತಿಗೆ ಸಂಸ್ಥೆ ಮರಳಿದೆ ಎನ್ನಬಹುದು. 

published on : 13th August 2022

ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ನಿರ್ಮಾಣ?

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತನ್ನ ಆದಾಯವನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಎರಡು ಪ್ರಮುಖ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಗಂಭೀರ ಚಿಂತನೆಯಲ್ಲಿ ತೊಡಗಿದೆ.

published on : 12th August 2022

ದೇಶದಲ್ಲೇ ಮೊದಲು: ಎಂಜಿ ರಸ್ತೆಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ 5G ನೆಟ್‌ವರ್ಕ್ ಪರೀಕ್ಷೆ!

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಪ್ರಾಯೋಗಿಕ ಯೋಜನೆಯಡಿಯಲ್ಲಿ 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಪಾತ್ರವಾಗಿದೆ.

published on : 22nd July 2022

ಡಿಸೆಂಬರ್ ಅಂತ್ಯಕ್ಕೆ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ಸಿದ್ಧ!

ಡಿಸೆಂಬರ್ ಅಂತ್ಯಕ್ಕೆ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ಸಿದ್ಧವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

published on : 23rd April 2022

ಬಿಎಂಟಿಸಿಯಂತೆ ಇನ್ನು ಮುಂದೆ 'ನಮ್ಮ ಮೆಟ್ರೋ'ದಲ್ಲೂ ಡೈಲಿ ಪಾಸ್ ಲಭ್ಯ!

ಬಿಎಂಟಿಸಿಯಂತೆ ನಮ್ಮ ಮೆಟ್ರೋ  ಪ್ರಯಾಣಿಕರಿಗೆ 1 ಹಾಗೂ 3 ದಿನದ ಪಾಸ್ ವಿತರಣೆಗೆ ಬಿಎಂಆರ್​ಸಿಎಲ್ ಮುಂದಾಗಿದೆ.

published on : 31st March 2022

ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ: ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ಹೊಸ ಸವಾಲು!

ಮೆಟ್ರೋ ರೈಲುಗಳ ಮೇಲೆ ದುಷ್ಕರ್ಮಿಗಳು ಪದೇ ಪದೇ ಕಲ್ಲು ತೂರಾಟ ಮಾಡುತ್ತಿದ್ದು, ಇದು ಬಿಎಂಆರ್ ಸಿಎಲ್ ಅಧಿಕಾರಿಗಳ ತಲೆ ನೋವಿಗೆ ಕಾರಣವಾಗಿದೆ.

published on : 14th March 2022

ಬೆಂಗಳೂರು: ನಿವಾಸಿಗಳ ದೂರಿನ ನಂತರ ರಾತ್ರಿ ಕೆಲಸ ನಿಲ್ಲಿಸಿದ ಬಿಎಂಆರ್ ಸಿಎಲ್

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಮೆಟ್ರೋ ಹಂತ-II ಗಾಗಿ ಡಿಸೆಂಬರ್ 2024ರ ಪರಿಷ್ಕೃತ ಗಡುವನ್ನು ಪೂರೈಸಲು ರಾತ್ರಿಯೂ ಕೆಲಸ ಮಾಡಲಾಗುತ್ತಿದ್ದು, ಇದು ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ವಾಸಿಸುವ...

published on : 22nd February 2022

ಬೆಂಗಳೂರು: ಚಲ್ಲಘಟ್ಟ ಮೆಟ್ರೋ ನಿಲ್ದಾಣ ಆಗಸ್ಟ್ ವೇಳೆಗೆ ರೈಲು ಸಂಚಾರಕ್ಕೆ ಸಿದ್ಧ

ಕೆಂಗೇರಿ ಮೆಟ್ರೊ ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಚಲ್ಲಘಟ್ಟ ಮೆಟ್ರೊ ನಿಲ್ದಾಣ ಈ ವರ್ಷದ ಆಗಸ್ಟ್‌ ವೇಳೆಗೆ ಸಂಚಾರಕ್ಕೆ ಸಿದ್ಧವಾಗಲಿದೆ. ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವೆ ವಿಸ್ತರಿಸಿದ ನೇರಳೆ ಮಾರ್ಗದ ಪ್ರಾರಂಭದ ಸಮಯದಲ್ಲಿ, ಇದು ಮಾರ್ಚ್ 2022 ರ ವೇಳೆಗೆ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.

published on : 21st January 2022
1 2 > 

ರಾಶಿ ಭವಿಷ್ಯ