CPM, Congress

ಹೆದರಿದ ಮೋದಿ ಸರ್ಕಾರದಿಂದ ಹತಾಶೆಯ ಕ್ರಮ: ರಾಹುಲ್ ವಿರುದ್ಧ ಎಫ್ಐಆರ್ಗೆ ಪ್ರಿಯಾಂಕಾ ವಾಗ್ದಾಳಿ
ಅದಾನಿ ಪ್ರಕರಣದ ಬಗ್ಗೆ ಚರ್ಚಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆದರುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರಿಗೆ 'ದಾಳಿ ಮತ್ತು ಪ್ರಚೋದನೆ' ಸಂಬಂಧ ದೂರು ನೀಡಿರುವುದನ್ನು ಖಂಡಿಸಿದರು.

ಅಶ್ಲೀಲ ಪದ ಬಳಕೆ ಪ್ರಕರಣ: ಕೋರ್ಟ್ ಮುಂದೆ BJP MLC ಸಿಟಿ ರವಿ ಹಾಜರು, ವಿಚಾರಣೆ ಮಧ್ನಾಹ್ನ 3 ಗಂಟೆಗೆ ಮುಂದೂಡಿಕೆ!
ರವಿ ಪರ ವಕೀಲ ಎಂಬಿ ಜಿರಲಿ ವಾದ ಮಂಡಿಸಿದರು. ಅಲ್ಲದೆ ಜಾಮೀನು ನೀಡುವಂತೆ ಮನವಿ ಮಾಡಿದರು. ಇದೀಗ ಜಾಮೀನು ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುವ ವಿಚಾರಣೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಪರ ವಕೀಲರು ವಾದ ಮಂಡಿಸಲಿದ್ದಾರೆ.

6,000 ಕೋಟಿ ರೂ ರಸ್ತೆ ಪುನರಾಭಿವೃದ್ಧಿ ಯೋಜನೆ ಘೋಷಿಸಿದ ಸಿಎಂ; BJP ವಿರುದ್ಧ ವಾಗ್ದಾಳಿ
ಬೆಂಗಳೂರಿನ ರಸ್ತೆಗಳಿಗೆ ಅನುದಾನದ ಬಗ್ಗೆ ಪ್ರತಿಪಕ್ಷಗಳು ಸ್ಪಷ್ಟನೆ ಕೇಳಿದಾಗ, ಈ ಬಗ್ಗೆ ಈಗಾಗಲೇ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ವಿವರಿಸಿದರು.

Muda case: ಕಾನೂನು ಹೋರಾಟಕ್ಕೆ ಲಕ್ಷ ಲಕ್ಷ ಹಣ ಎಲ್ಲಿಂದ ಬರುತ್ತಿದೆ?; ಸ್ನೇಹಮಯಿ ಕೃಷ್ಣಗೆ ಲಕ್ಷ್ಮಣ್ ಪ್ರಶ್ನೆ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪ ಮಾಡಿದ್ದು, ಇಬ್ಬರು ವ್ಯಕ್ತಿಗಳು ನನಗೆ ಹಣದ ಆಮಿಷವೊಡ್ಡಲು ಬಂದಿದ್ದರು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ,

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಬದ್ಧ: ಸಿಎಂ ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ಗುರುವಾರ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ವೇಳೆ ಮಾತನಾಡಿದ ಸಿಎಂ, 2013 ರಿಂದ 31 ಸಾವಿರ ಕೋಟಿ ರೂಪಾಯಿಗಳನ್ನು ವಿವಿಧ ಅಭಿವೃದ್ಧಿ ಉಪಕ್ರಮಗಳಿಗೆ ಖರ್ಚು ಮಾಡಿದರೂ, ಈ ಭಾಗದ ಪ್ರಗತಿ ನಿರೀಕ್ಷೆಗೆ ತಕ್ಕಂತೆ ನಡೆದಿಲ್ಲ ಎಂದು ಹೇಳಿದರು.

ಯಾರೂ ಯಾರನ್ನೂ ಕೊಲೆ ಮಾಡುತ್ತಿಲ್ಲ, ಸಭೆ ನಡೆಸಲು ಪೊಲೀಸ್ ಠಾಣೆ BJP ಕಚೇರಿಯೇ: ಸಿ.ಟಿ ರವಿ ಆರೋಪಕ್ಕೆ ಡಿಕೆಶಿ ತಿರುಗೇಟು
ಯಾರೂ ಯಾರನ್ನೂ ಕೊಲೆ ಮಾಡುತ್ತಿಲ್ಲ, ನಾನೂ ವಿಡಿಯೋ ತುಣುಕನ್ನು ನೋಡಿದ್ದೇನೆ, ಪೊಲೀಸರು ಭೇಟಿಯಾಗಲು ಅವಕಾಶ ನೀಡಿದಾಗ ಬಿಜೆಪಿಯವರು ಠಾಣೆಯಲ್ಲಿಯೇ ಸಭೆ ನಡೆಸಿರುವುದು ಕಂಡು ಬಂದಿದೆ. ಸಭೆ ನಡೆಸಲು ಪೊಲೀಸ್ ಠಾಣೆ ಬಿಜೆಪಿ ಸ್ಥಳವೇ?.

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ, ಯಾವುದೇ ತೊಂದರೆಯಾದರೆ ಪೊಲೀಸ್ ಇಲಾಖೆ-ಕಾಂಗ್ರೆಸ್ ಕಾರಣ: ಸಿಟಿ ರವಿ
ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು 3 ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ.

ಸಂಸತ್ ಮುಂದೆ ಹೈಡ್ರಾಮಾ: ರಾಹುಲ್ ಗಾಂಧಿ, ಇತರ ಸಂಸದರ ವಿರುದ್ಧ FIR ದಾಖಲು
ಬಿಜೆಪಿ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ನೋವುಂಟು ಮಾಡುವುದು), 117 (ಗಾಯ ಮಾಡುವುದು), 125 (ಇತರರ ಜೀವಕ್ಕೆ ಅಪಾಯ), 131 (ಅಪರಾಧ ಶಕ್ತಿ ಬಳಕೆ), 351 (ಬೆದರಿಕೆ) ಆರೋಪಗಳಡಿ ಎಫ್ಆರ್ಐ ದಾಖಲಿಸಲಾಗಿದೆ.


