Mysuru, Election

ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಮಂದಿಗೆ ಅವಕಾಶ!
ನಾಡಹಬ್ಬ ದಸರಾ ಆಚರಣೆಯ ಸಂದರ್ಭದಲ್ಲಿ ಕೋವಿಡ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೋವಿಡ್-19 ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು.

ವಿಧಾನ ಪರಿಷತ್ತಿನ ಶಿಕ್ಷಕರು, ಪದವೀಧರರ 4 ಕ್ಷೇತ್ರಗಳ ಚುನಾವಣೆ: 52 ಅಭ್ಯರ್ಥಿಗಳಿಂದ 96 ನಾಮಪತ್ರ ಸಲ್ಲಿಕೆ
ರಾಜ್ಯ ವಿಧಾನಪರಿಷತ್‌ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗ ಳಿಗೆ ಅ.೨೮ ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು,೫೭ ಅಭ್ಯ ರ್ಥಿಗಳು ೯೬ ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.

ಮೈಸೂರು ದಸರಾ ಸಿದ್ಧತೆ ಕುರಿತ ವರದಿ ನೀಡಿ: ಅಧಿಕಾರಿಗಳಿಗೆ ಸಚಿವ ಶ್ರೀರಾಮುಲು
ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ದಸರಾ ಆಚರಿಸುವ ಸಂಬಂಧ ತಜ್ಞರ ತಂಡವನ್ನು ಮೈಸೂರಿಗೆ ಕಳುಹಿಸಲಾಗುತ್ತಿದೆ. ಇವರು ವರದಿ ನೀಡಿದ 24 ಗಂಟೆಯೊಳಗೆ ಕ್ರಿಯಾ ಯೋಜನೆ ತಯಾರಿಸುವಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರು: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ, ಕೆಆರ್ ಆಸ್ಪತ್ರೆಯಲ್ಲಿ ಹೆಚ್ಚುವರಿ 200 ಬೆಡ್ ಗಳಿಗೆ ಕ್ರಮ- ರೋಹಿಣಿ ಸಿಂಧೂರಿ
ರಾಜ್ಯದಲ್ಲಿ ಬೆಂಗಳೂರು ಬಳಿಕ ಕೊರೋನಾ ವೈರಸ್ ಆರ್ಭಟಕ್ಕೆ ಹೆಚ್ಚಾಗಿ ತುತ್ತಾಗಿರುವ ಮೈಸೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ 200 ಬೆಡ್ ಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಆರ್ ಆರ್ ನಗರ ಉಪ ಚುನಾವಣೆ: ಡಿಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿ ಎಂದ ಸಿದ್ದರಾಮಯ್ಯ
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

'ರಾಜಮಾರ್ಗ' ವಿಶೇಷ ಮಕ್ಕಳ ಕುರಿತ ಚಿತ್ರ ನವೆಂಬರ್ ನಲ್ಲಿ ಬಿಡುಗಡೆ
ಮಕ್ಕಳ ಚಲನಚಿತ್ರ 'ರಾಜಮಾರ್ಗ' ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧಗೊಂಡಿದೆ. ಹಳ್ಳಿಯೊಂದರಲ್ಲಿ ವಾಸಿಸುವ ವಿಶೇಷ ಚೇತನ ಹುಡುಗ ಶಾಲೆಯಲ್ಲಿ ಅನುಭವಿಸುವ ಅವಮಾನ ಮತ್ತು ಬೆದರಿಕೆಯ ಕಥೆಯನ್ನು ಈ ಚಿತ್ರ ಹೇಳುತ್ತದೆ.

ಮೈಸೂರು, ಬೆಂಗಳೂರು ನಗರಗಳಲ್ಲಿ ಶೇ.53ರಷ್ಟು ಮಂದಿ ಉಸಿರಾಟದ ತೊಂದರೆಯಿಂದ ಮಾಸ್ಕ್ ಧರಿಸುತ್ತಿಲ್ಲ: ಸಮೀಕ್ಷೆ
ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ 18 ನಗರಗಳಲ್ಲಿ ನಡೆಸಿದ ಸಮೀಕ್ಷೆಯಿಂದ, ಉಸಿರಾಟದ ತೊಂದರೆಯಿಂದಾಗಿ ಮೈಸೂರು ಮತ್ತು ಬೆಂಗಳೂರುಗಳಲ್ಲಿ ಶೇಕಡಾ 53 ಮಂದಿ ಮಾಸ್ಕ್ ಧರಿಸುವುದಿಲ್ಲ ಎಂದು ತಿಳಿದುಬಂದಿದೆ. ಕೊರೋನಾ ವೈರಸ್ ತಡೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು ಏಕ್ ದೇಶ್ ಅಭಿಯಾನದಡಿ ಅಪ್ನಾಮಾಸ್ಕ್ ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬೆಂಗಳೂರು ಮತ್ತ

ಭಾರತೀಯ ಸೇನೆ ಸೇರಬಯಸುವ ಆಕಾಂಕ್ಷಿಗಳಿಗೆ ನೆರವು ನೀಡುವ ಎನ್ ಎಸ್ ಎಸ್ ಅಧಿಕಾರಿ
ಎನ್ ಎಸ್ ಎಸ್ ಅಧಿಕಾರಿ ಡಾ. ರಾಘವೇಂದ್ರ ಅವರು ಸಶಸ್ತ್ರ ಪಡೆ ಸೇರಬಯಸುವ ಬಹುತೇಕ ಗ್ರಾಮೀಣ ಪ್ರದೇಶದ ನೂರಾರು ಯುವ ಆಕಾಂಕ್ಷಿಗಳಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ತೃಪ್ತಿ ಕಂಡುಕೊಂಡಿದ್ದಾರೆ.

ಕೋವಿಡ್-19: ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಲ್ಲಿ 'ನೋವಾವಾಕ್ಸ್' ನ ಮಾನವ ಪ್ರಯೋಗ ಆರಂಭ ಸಾಧ್ಯತೆ
ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯು ಕೋವಿಡ್-19 ಲಸಿಕೆ ನೋವಾವಾಕ್ಸ್ ನ ಎರಡು ಹಾಗೂ ಮೂರನೇ ಹಂತದ ಮಾನವ ಪ್ರಯೋಗಗಳನ್ನು ಆರಂಭಿಸುವ ಸಾಧ್ಯತೆಯಿದೆ.

