Mysuru, Election

ಮದ್ಯ ಮಾರಾಟ ಆರಂಭ: ಎಳನೀರು ಮಾರಾಟದಲ್ಲಿ ಭಾರೀ ಇಳಿಕೆ
ಬರೋಬ್ಬರಿ 40 ದಿನಗಳ ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಮದ್ಯ ಖರೀದಿ ಮಾಡಲು ಮದ್ಯಪ್ರಿಯರಂತೂ ಕಿಲೋಮೀಟರ್'ಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಎಳನೀರು ಕೊಳ್ಳುವವರ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಾಗಿದೆ.

ಅಪಾಯದಲ್ಲಿದ್ದ ಮೈಸೂರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಕೊರೋನಾ ಯುದ್ದ ಗೆದ್ದಿದ್ದು ಹೇಗೆ?
ಮಹಾಮಾರಿ ಕೊರೊನಾ ವೈರಸ್ ಸೋಂಕು ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಶೇ.3ರಷ್ಟಿದ್ದ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಕೇಂದ್ರ ಸರಕಾರದ ಸೂಚನೆಯಂತೆ ಯಾವುದೇ ಒಂದು ಕೊರೊನಾ ಪಾಸಿಟಿವ್ ಕೇಸ್ ಬಾರದಿದ್ದರೆ ಮೈಸೂರು ಹಸಿರು ವಲಯವಾಗುವ ಸಾಧ್ಯತೆಯಿದೆ.

ಮೈಸೂರು ಮೃಗಾಲಯ ನಿರ್ವಹಣೆಗೆ ಅಮೆರಿಕದಿಂದ ಬಂತು ದೇಣಿಗೆ: ಸಚಿವರ ಮನವಿಗೆ ಸ್ಪಂದನೆ
ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ನಿರ್ವಹಣೆಗೋಸ್ಕರ ನಾಗರಿಕರು ದೇಣಿಗೆ ನೀಡಿ ಸಹಕರಿಸುವಂತೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ವಾಟ್ಸಪ್ ಮೂಲಕ ಮಾಡಿದ ಮನವಿಗೆ ಸ್ಪಂದಿಸಿದ್ದರು.

ಕೊರೋನಾದಿಂದ ಗುಣಮುಖರಾದ ಮೈಸೂರಿನ 43 ಮಂದಿಯಿಂದ ಪ್ಲಾಸ್ಮಾ ದಾನಕ್ಕೆ ಒಪ್ಪಿಗೆ
ಮಹಾಮಾರಿ ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಮೈಸೂರಿನ 43 ಮಂದಿ ಇದೀಗ ಪ್ಲಾಸ್ಮಾ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಕೇವಲ 15 ನಿಮಿಷ ಕೆಲಸ, ಅಧಿಕಾರಿಣಿಗೆ ಶೋಕಾಸ್ ನೋಟೀಸ್
ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯಂತಹ ಕಠಿಣ ಸಂದರ್ಭದಲ್ಲಿ ಕೇವಲ 15 ನಿಮಿಷ ಕೆಲಸ ಮಾಡಿ ಬೇಜವಾಬ್ದಾರಿ ತೋರಿದ್ದ ಮಹಿಳಾ ಅಧಿಕಾರಿಯೊಬ್ಬರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

'ಶ್ರೀರಂಗಪಟ್ಟಣದ ಆಂಜನೇಯ ದೇವಾಲಯದ ಪೂಜಾರಿ ಮಂಡ್ಯ, ಮೈಸೂರು ಜನರ ಮೆಚ್ಚಿನ ಡೆಲಿವರಿ ಬಾಯ್'
ಶ್ರೀರಂಗಪಟ್ಟಣದ ಆಂಜನೇಯ ದೇವಾಲಯದ ಪೂಜಾರಿ ರಾಮಚಂದ್ರ ದೀಕ್ಷಿತ್, ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಜನಗಳಿಗೆ ಮೆಚ್ಚಿನ ಡೆಲಿವರಿ ಬಾಯ್ ಆಗಿದ್ದಾರೆ.

ಮೈಸೂರು: ಸೋಂಕಿತ 72 ವರ್ಷದ ವೃದ್ಧನಿಗೆ ಜುಬಿಲಿಯಂಟ್ ನಂಟು
ನಂಜನಗೂಡಿನಲ್ಲಿ 72 ವರ್ಷದ ವೃದ್ಧನಲ್ಲಿ ಕೊರೋನಾ ವೈರಸ್ ಸೋಂಕು ತಗುಲಿದ್ದು, ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಇರದಿದ್ದರೂ ಜುಲಿಯಂಟ್ ನಂಟಿನಿಂದ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.

ಕೊರೋನಾ ವೈರಸ್: ಕರ್ನಾಟಕದಲ್ಲಿ 8 ಕೋವಿಡ್-19 ಸೋಂಕಿತರು ಗುಣಮುಖ, ಡಿಸ್ಚಾರ್ಜ್
ಮಾರಕ ಕೊರೋನಾ ವೈರಸ್ ಅಬ್ಬರ ಕರ್ನಾಟಕದಲ್ಲಿ ಮುಂದುವರೆದಿರುವಂತೆಯೇ ಇತ್ತ ವೈರಸ್ ವಿರುದ್ಧ ಸತತ ಹೋರಾಟ ಮಾಡುತ್ತಿರುವ ವೈದ್ಯರು ಶುಭ ಸುದ್ದಿ ನೀಡಿದ್ದು ಕರ್ನಾಟಕದಲ್ಲಿ 8 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮೈಸೂರು: ಕೊರೋನಾ ಸೋಂಕಿತರಿಕೆ ಚಿಕಿತ್ಸೆ ನೀಡಲು ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತನೆಗೊಂಡ ಕೆಎಸ್ಆರ್'ಟಿಸಿ ಬಸ್
ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಕೆ ನಿಗಮ, ಮೈಸೂರು ಗ್ರಾಮಾಂತರ ವಿಭಾಗದಿಂದ ಪ್ರಯಾಣಿಕ ಬಸ್ ವೊಂದನ್ನು ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿದೆ.

