Rahul Gandhi, Akhilesh Yadav

ಗಂಗಾ ನದಿಯಲ್ಲಿ ಮೃತದೇಹಗಳು ತೇಲುವುದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ: ರಾಹುಲ್ ಗಾಂಧಿ
ಗಂಗಾ ನದಿಯಲ್ಲಿ ಮೃತದೇಹಗಳು ತೇಲುವುದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ, ಅದು ಸಾಮೂಹಿಕ ಜವಾಬ್ದಾರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯತಿಥಿ: ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರಿಂದ ಸ್ಮರಣೆ, ಗೌರವಾರ್ಪಣೆ
ಮೇ 21, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿ. 30 ವರ್ಷಗಳ ಹಿಂದೆ ಮೇ,21 1991ರಲ್ಲಿ ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿಯವರು ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ ಟಿಟಿಇ ಕಾರ್ಯಕರ್ತರ ಆತ್ಮಹತ್ಯಾ ದಾಳಿಗೆ ಬರ್ಬರವಾಗಿ ಹತ್ಯೆಗೀಡಾಗಿದ್ದರು.

ಕೋವಿಡ್ ಸಾವುಗಳು ಹೆಚ್ಚಾಗುತ್ತಿವೆ, ಆದರೆ ಲಸಿಕೆಗಳು ಕಡಿಮೆಯಾಗುತ್ತಿವೆ: ರಾಹುಲ್ ಗಾಂಧಿ
ದೇಶದಲ್ಲಿ ಕೋವಿಡ್-19 ನಿಂದ ಸಾವುಗಳು ಹೆಚ್ಚಾಗುತ್ತಿದ್ದರೆ, ಲಸಿಕೆಗಳು ಕಡಿಮೆಯಾಗುತ್ತಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಜನರ ಗಮನ ಬೇರೆಡೆಗೆ ತಿರುಗಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.

ನವದೆಹಲಿ: 'ನನ್ನನ್ನೂ ಬಂಧಿಸಿ' ರಾಹುಲ್ ಗಾಂಧಿ ಸವಾಲು!
ಕೋವಿಡ್-19 ಲಸಿಕೆ ರಫ್ತು ನೀತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಫೋಸ್ಟರ್ ಅಂಟಿಸಿದ್ದಹಲವರನ್ನು ಬಂಧಿಸಿರುವುದರ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ವಿನಾಶಕಾರಿ ನೀತಿಯಿಂದಾಗಿ ಕೊರೋನಾ ಮೂರನೇ ಅಲೆ ಅಪ್ಪಳಿಸುವುದು ಖಚಿತ: ರಾಹುಲ್ ಗಾಂಧಿ ಎಚ್ಚರಿಕೆ
ರಾಷ್ಟ್ರೀಯ ಲಸಿಕೆ ವಿತರಣಾ ಯೋಜನೆ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸರ್ಕಾರದ ಇನಾಕ್ಯುಲೇಷನ್ ನೀತಿಯು ದೇಶದಲ್ಲಿ "ವಿನಾಶಕಾರಿ ಮೂರನೇ ಅಲೆಯನ್ನು ಖಚಿತಪಡಿಸುತ್ತದೆ" ಎಂದು ಹೇಳಿದ್ದಾರೆ.

ಟೌಕ್ಟೇ ಸೈಕ್ಲೋನ್: ಸಂಕಷ್ಟದಲ್ಲಿರುವ ಜನರಿಗೆ ಸಹಾಯಕ್ಕೆ ಧಾವಿಸುವಂತೆ ಕಾರ್ಯಕರ್ತರಿಗೆ ರಾಹುಲ್ ಸೂಚನೆ
ಟೌಕ್ಟೇ ಚಂಡಮಾರುತ ಆರಂಭವಾಗುತ್ತಿದ್ದು, ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯಕ್ಕೆ ಧಾವಿಸುವಂತೆ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಸೂಚನೆ ನೀಡಿದ್ದಾರೆ.

ಲಸಿಕೆ, ಆಕ್ಸಿಜನ್, ಔಷಧ ಜೊತೆಗೆ ಪ್ರಧಾನಿಯೂ ಮಿಸ್ಸಿಂಗ್: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಲಸಿಕೆ, ಆಕ್ಸಿಜನ್ ಮತ್ತು ಔಷಧ ಜೂತೆಗೆ ಪ್ರಧಾನಿ ಕೂಡಾ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

'ನಗಬೇಕೋ ಅಳಬೇಕೋ'? ಕೋವಿಡ್ ತಡೆಯಲು ಸಗಣಿ ಬಳಕೆ ಬಗ್ಗೆ ಅಖಿಲೇಶ್ ಯಾದವ್ ಟ್ವೀಟ್
ಕೋವಿಡ್ ವಿರುದ್ಧ ಪ್ರತಿರೋಧ ಶಕ್ತಿ ಪಡೆಯಲು ಜನರು ದೇಹಕ್ಕೆ ಗೋಮೂತ್ರ ಬೆರೆಸಿ ಸೆಗಣಿ ಮೆತ್ತಿಕೊಂಡಿರುವ ವಿಡಿಯೋ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ 'ಟ್ವೀಟ್ ಮಾಡಿದ್ದಾರೆ.

ಅಗತ್ಯವಿರುವವರಿಗೆ ಸಹಾಯ ಹಸ್ತ ಒದಗಿಸುವಂತೆ ಜನರಲ್ಲಿ ರಾಹುಲ್ ಗಾಂಧಿ ಮನವಿ
ಕೋವಿಡ್-19 ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಸಹಾಯ ಹಸ್ತ ಒದಗಿಸುವಂತೆ ಕಾಂಗ್ರೆಸ್ಮುಖಂಡ ರಾಹುಲ್ ಗಾಂಧಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಕೊರೋನಾವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸಲು SpeakUpToSaveLives ಅಭಿಯಾನದಲ್ಲಿ ಸೇರಿಕೊಳ್ಳುವಂತೆ ಅವರು ಕೋರಿದ್ದಾರೆ.

