RBI

ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಹೊಸ ನಿಯಮ ಜಾರಿ..! ಏನಿದು ಟೋಕನೈಸೇಶನ್? ನೀವು ತಿಳಿದುಕೊಳ್ಳಲೇಬೇಕಾದದ್ದು
ಇಂದಿನಿಂದ ಕ್ರೆಡಿಟ್ ಕಾರ್ಡ್ ಸಂಬಂಧಿಸಿದ 3 ನಿಯಮಗಳು ಬದಲು, ಜನಸಾಮಾನ್ಯರ ಮೇಲಾಗುವ ಪರಿಣಾಮಗಳೇ? ಅಕ್ಟೋಬರ್ 1 ರಿಂದ, ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಈ 3 ಹೊಸ ನಿಯಮಗಳು ಜಾರಿಗೆ ಬರಲಿವೆ.

ಆರ್‌ಬಿಐ: ಸಾಲ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 5.90 ಕ್ಕೆ ಹೆಚ್ಚಳ, ರೆಪೊ ದರ ಏರಿಕೆ
ದೇಶದ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 5.90ಕ್ಕೆ ಏರಿಕೆ ಮಾಡಿದೆ.

ಯುಪಿಐ ಪಾವತಿ ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಪಾವತಿ ಸೇವೆಗಳ ಮೇಲೆ ಶುಲ್ಕ ವಿಧಿಸುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂಬ ಸುದ್ದಿಗಳ ನಡುವೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಯುಪಿಐ ಪಾವತಿ ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ.

ಡಿಜಿಟಲ್ ಲೆಂಡಿಂಗ್ ವ್ಯವಸ್ಥೆಗೆ ಆರ್ ಬಿಐ ತಂದಿದೆ ಹೊಸ ಮಾರ್ಗಸೂಚಿ! (ಹಣಕ್ಲಾಸು)
ಇವತ್ತು ಜಗತ್ತು ಯಾವ ಮಟ್ಟಕ್ಕೆ ಬಂದು ಕುಳಿತಿದೆ ಎಂದರೆ ಸಾಲವೇ ಹಣ ಎನ್ನುವ ಮಟ್ಟಕ್ಕೆ! ಅಂದರೆ ಹಣ ಎಂದ ತಕ್ಷಣ ಅದು ಸಾಲದ ಹಣವೇ ಆಗಿರುತ್ತದೆ ಎನ್ನುವ ಮಟ್ಟಕ್ಕೆ ಜಗತ್ತು ಬದಲಾಗಿ ಹೋಗಿದೆ.

ವಂಚನೆಗೆ ಕಡಿವಾಣ: ಡಿಜಿಟಲ್ ಸಾಲಕ್ಕೆ ಮಾನದಂಡ ಬಿಡುಗಡೆ ಮಾಡಿದ ಆರ್‌ಬಿಐ
ಲೋನ್ ಆ್ಯಪ್ ಮತ್ತು ಡಿಜಿಟಲ್ ಸಾಲ ವ್ಯವಸ್ಥೆಗಳಲ್ಲಿನ ವಂಚನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮೊದಲ ಹಂತದ ಮಾನದಂಡಗಳನ್ನು ಬಿಡುಗಡೆ ಮಾಡಿದೆ.

NRI ಗಳು ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ಯಾವುದೇ ಬಿಲ್ ಪಾವತಿಸಬಹುದು: ಆರ್ ಬಿಐ
ಭಾರತದಲ್ಲಿನ ತಮ್ಮ ಕುಟುಂಬದ ಸದಸ್ಯರ ಪರವಾಗಿ ಅನಿವಾಸಿ ಭಾರತೀಯರು ಯುಟಿಲಿಟಿ ಬಿಲ್‌ಗಳು ಮತ್ತು ಶಿಕ್ಷಣ ಶುಲ್ಕವನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿ ಮಾಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಮತ್ತೆ ರೆಪೋ ದರ ಹೆಚ್ಚಿಸಿದ ಆರ್ ಬಿಐ, ಇದು 2019 ರಿಂದಲೇ ಗರಿಷ್ಠ ಏರಿಕೆ; ಹಣದುಬ್ಬರದ ಆತಂಕ!
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಶುಕ್ರವಾರ ಮತ್ತೆ ರೆಪೋ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಬಡ್ಡಿ ದರ ಈಗ ಶೇ. 5.40ಕ್ಕೆ ಏರಿಕೆಯಾಗಿದೆ. ಇದು 2019ರಿಂದ ಗರಿಷ್ಠ ಏರಿಕೆಯಾಗಿದೆ.

ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ರದ್ದು ಮಾಡುವಂತೆ ರೈತರ ಪ್ರತಿಭಟನೆ; 2 ಗಂಟೆ ಸಭೆ ನಡೆಸಿದ ಆರ್‌ಬಿಐ!
ರಾಜ್ಯದ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದುಗೊಳಿಸಲು ಒತ್ತಾಯಿಸಿ ಆರ್ ಬಿ ಐ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಬೇಡ: ತಜ್ಞರ ಅಭಿಮತ
ಕೃಷಿ ಸಾಲ ಪಡೆಯಲು ಆರ್‌ಬಿಐ ಮತ್ತು ಸರ್ಕಾರ ಸಾಲ ನೀಡುವ ನೀತಿಯನ್ನು ಬದಲಾಯಿಸಬೇಕಿದ್ದು, ಸಿಬಿಲ್ ಸ್ಕೋರ್‌ಗೆ ಬೇಡಿಕೆ ಇಡಬಾರದು ಎಂದು ಕೃಷಿ ತಜ್ಞರು ಒತ್ತಾಯಿಸಿದ್ದಾರೆ.

