ನಾ ನಿನ್ನ ಮರೆಯಲಾರೆ...

ಅವಳನ್ನು ನೋಡ್ತಾ ನೋಡ್ತಾ ಅವಳಿಗೆ ಹೇಳದೆ ಉಸಿರಿಗಿಂತ ಹೆಚ್ಚು ಪ್ರೀತಿಸಿದೆ. 2 ವರ್ಷದ ನಂತರ ಅವಳಿಗೆ ನನ್ನ ಪ್ರೇಮ ನಿವೇದನೆ ತಿಳಿಸಿದೆ...
ನಾ ನಿನ್ನ ಮರೆಯಲಾರೆ...
Updated on

ನನ್ನ ಹೆಸರು ವಾಸು. ನಾನು ನನ್ನ ಪುಟ್ಟ ಲವ್ ಸ್ಟೋರಿ ಹೇಳ್ತಿದ್ದೀನಿ. ನನ್ನ ಕತೆ ಒಂದು ಬಸ್ ನಿಂದ. ಅವಳನ್ನು ನೋಡ್ತಾ ನೋಡ್ತಾ  ಅವಳಿಗೆ ಹೇಳದೆ ಉಸಿರಿಗಿಂತ ಹೆಚ್ಚು ಪ್ರೀತಿಸಿದೆ. 2 ವರ್ಷದ ನಂತರ ಅವಳಿಗೆ ನನ್ನ ಪ್ರೇಮ ನಿವೇದನೆ ತಿಳಿಸಿದೆ. ಆದ್ರೆ ಒಪ್ಪಿಕೊಳ್ಳಿಲ್ಲ. ಅವಳನ್ನು ಮರೆಯೋಕೆ ಆಗದಷ್ಟು ಅವಳನ್ನ ಲವ್ ಮಾಡಿಬಿಟ್ಟೆ. ನಂತರದ ದಿನಗಳಲ್ಲಿ ಅವಳು ಒಪ್ಪಿಕೊಂಡ್ಳು. ನಾನು ತುಂಬಾ ಖುಷಿಯಾಗಿದ್ದೆ. ಆದ್ರೆ ಆ ಖುಷಿ ಜಾಸ್ತಿ ದಿನ ಇರ್ಲಿಲ್ಲ. ಕಾರಣಾನೇ ಇಲ್ಲದೆ ಅವಳು ನನ್ನ ಬಿಟ್ಟು ಹೋದ್ಳು.  ಆದ್ರೆ ಅವಳದ್ದೇ ನೆನಪಲ್ಲೇ ಕೊರಗ್ತಾ ಇದ್ದೆ. ನನ್ನ ಮನಸ್ಸು ಅವಳ ಸ್ಥಾನ ಯಾರೂ ತುಂಬೋಕೆ ಆಗೇ ಇಲ್ಲ. ಅವಳು ನನ್ನ ಬಿಟ್ಟು  ಹೋಗಿ 5 ವರ್ಷ ಆಯ್ತು. ಈಗಲೂ ನನ್ನ ಮನಸ್ಸು ಹೇಳುತ್ತೆ ನೀ ನಿರಾಕರಿಸಿ ಹೋದ ಮೇಲೂ ಐ ಲವ್ ಯೂ..
ಪ್ರೀತಿಸಿದವರು ಬಿಟ್ಟು ಹೋದ ನೋವಿಗಿಂತ ಅವರನ್ನ ಮತ್ತೆ ನೋಡಿದಾಗ ಆಗೋ ನೋವು ಜಾಸ್ತಿ.

ಅವಳು ಮತ್ತೆ ತಿರುಗಿ ಬರ್ತಾಳೆ ಅಂತಾ ಕಾಯ್ತಾ ಇರೋ ವಾಸು.. ಅವಳು ಮತ್ತೆ ಬರದೇ ಹೋದ್ರೂ ಅವಳ  ನೆನಪಲ್ಲೇ ಜೀವನ ಸಾಗಿಸ್ತೀನಿ ಅವಳ ನೆನಪಲ್ಲೇ ಸಾಯ್ತೀನಿ. ಬಟ್ ಇನ್ನೊಂದು ಹುಡುಗಿಗೆ ಆ ಪ್ರೀತಿ ಸಿಗಲ್ಲ.

ವಾಸು . ಸಿ.ಜಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com