

ಕಾಲ ಉರುಳಿದಂತೆ ಸೀರೆಯ ಟ್ರೆಂಡ್ ಬದಲಾಗುತ್ತಿದೆ. ಆದರೆ, ಸೀರೆಯೊಂದಿಗಿನ ಒಲವು, ಧರಿಸಿದಾಗ ಸಿಗುವ ಗೌರವ, ಮನ್ನಣೆ, ಪ್ರಶಂಸೆ ಬದಲಾಗಿಲ್ಲ. ಸೀರೆ ಎಲ್ಲ ಸಂದರ್ಭಕ್ಕೂ ಸರಿಹೊಂದುವ ಉಡುಗೆ. ಇತ್ತೀಚಿಗಂತೂ ಸೀರೆಯಲ್ಲಿ ನಾನಾ ವಿಧಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ. ಹೊಸ ಟ್ರೆಂಡ್ ಹಾಗೂ ವಿನ್ಯಾಸಗಳನ್ನು ಕೊಳ್ಳುವಾಗ ಒಂದಿಷ್ಟು ಮಾಹಿತಿ ನಿಮ್ಮಲ್ಲಿದ್ದರೆ ಚೆನ್ನ.
ಎಂಬ್ರಾಯಿಡರಿ ಸೀರೆ
ಸಾದಾ ಸೀರೆಗಳ ಅಂಚಿಗೆ ಬಣ್ಣ ಬಣ್ಣದ ದಾರ ಅಥವಾ ಒಂದು ಬಣ್ಣದ ಸೀರೆಗೊಪ್ಪುವ ದಾರದಲ್ಲಿ ಎಂಬ್ರಾಯಿಡರಿ ಮಾಡಿಸಿ ಉಡುವುದು ಸಿಂಪಲ್ಲಾದರೂ ಕಣ್ಮನ ಸೆಳೆಯುತ್ತದೆ. ಎಂಬ್ರಾಯಿಡರಿ ಮಾಡಿಸುವಾಗ ಅಥವಾ ಕೊಳ್ಳುವಾಗ ಒಂದಷ್ಟು ವಿಷಯಗಳ ಬಗ್ಗೆ ಗಮನ ಕೊಡಬೇಕು. ಫೋಲ್ಡ್ ಮಾಡಿ ಉಡುವಿರಾದರೆ ಸೀರೆ ನೆರಿಗೆ ಬಳಿ ಬರುವ ವರ್ಕ್ ಸ್ವಲ್ಪ ಅಗಲವಾಗಿರಬೇಕು. ಪಲ್ಲು ಹತ್ತಿರ ಫೋಲ್ಡ್ ಮಾಡಿದಾಗ ಒಳಗಿನ ಬದಿ ಸಣ್ಣದಾಗಿ ಎಂಬ್ರಾಯಿಡರಿ ಮಾಡಿಸಬೇಕು. ಫೋಲ್ಡ್ ಮಾಡದೆ ಉಡುವಾಗ ಪಲ್ಲು ಬಳಿ ಹೆಚ್ಚು ವರ್ಕ್, ನೆರಿಗೆ ಬಳಿ ಕಮ್ಮಿ ಇದ್ದರೆ ಆಕರ್ಷಕವಾಗಿರುತ್ತದೆ.
ನೆಟ್ಟೆಡ್ ಸೀರೆ
ನೆಟ್ಟೆಡ್ಸೀರೆಗಳು ರೆಡಿ ನೆರಿಗೆಯೊಂದಿಗೇ ಬರುತ್ತಿವೆ. ಹೀಗಾಗಿ ಸೀರೆ ಉಡಲು ಬಾರದ ಈಗಿನ ಹುಡುಗಿಯರ ಮಧ್ಯ ಅವು ಹೆಚ್ಚು ಜನಪ್ರಿಯವಾಗಿವೆ. ನೆಟ್ಟೆಡ್ ಸೀರೆ ಕೊಳ್ಳುವಾಗ ಬಾರ್ಡರ್ಗಳು ದೊಡ್ಡದಾಗಲಿ, ಇಲ್ಲವೇ ಸಣ್ಣದಾಗಲಿ ಅವುಗಳ ಬಣ್ಣ ಮುಖ್ಯವಾಗುತ್ತದೆ. ನೆಟ್ ಮತ್ತು ಸೀರೆಯ ಬಣ್ಣ ಒಂದೇ ಇದ್ದು, ಬಾರ್ಡರ್ ಬಣ್ಣ ಡಾರ್ಕ್ ಹಾಗೂ ಕಾಂಟ್ರಾಸ್ಟ್ ಇದ್ದರೆ ಚೆನ್ನವೆನಿಸುತ್ತದೆ. ಕೇವಲ ಪಲ್ಲು ನೆಟ್ ಆಗಿ ಬರುವ ಸೀರೆಗಳೂ, ನೆರಿಗೆ ನೆಟ್ನಲ್ಲಿ ಬರುವ ಸೀರೆಗಳೂ ಲಭ್ಯ. ಕುಂದನ್ ಲೇಸ್ ಹಾಗೂ ಕುಂದನ್ ವರ್ಕ್ ಇರುವ ಸೀರೆಗಳು ಸಿಂಪಲ್ ಹಾಗೂ ಬ್ಯೂಟಿಫುಲ್ ಎನಿಸುತ್ತವೆ.
ಬಾರ್ಡರ್ ಟ್ರೆಂಡ್
ಸೀರೆಗಳಿಗೆ ಬಾರ್ಡರ್ ಇಟ್ಟು ಲೇಸ್ಗಳನ್ನು ಹಚ್ಚಿ ಉಡುವ ಟ್ರೆಂಡ್ ಹೆಚ್ಚಾಗಿದೆ. ಸಾದಾ, ಕ್ರೇಪ್, ಫ್ರೆಂಚ್ ಕ್ರೇಪ್, ಶಿಫಾನ್, ಸಿಲ್ಕ್ ಎಲ್ಲ ರೀತಿಯ ಸೀರೆಗಳೊಂದಿಗೂ ಲೇಸ್ ಹಾಗೂ ಬಾರ್ಡರ್ಗಳ ಪ್ರಯೋಗ ಮಾಡಬಹುದು.
ಫ್ಯಾನ್ಸಿ ಸಿಲ್ಕ್
ಫ್ಯಾನ್ಸಿಯಾಗಿರುವ ರೇಶ್ಮೆ ಸೀರೆಗಳು ನೀರೆಯರಲ್ಲಿ ಹೆಚ್ಚು ಪ್ರಿಯವಾಗುತ್ತಿವೆ. ನೋಡಲು ಸಾಂಪ್ರದಾಯಿಕ ರೇಶ್ಮೆ ಎನಿಸದ ಆದರೂ ರೇಶ್ಮೆ ನೂಲಿನಿಂದ ತಯಾರಿಸಿದ ಚಿತ್ತಾಕರ್ಷಕ ಡಿಸೈನ್ಗಳನ್ನು ಹೊಂದಿರುವ ಸೀರೆಗಳಿಗೀಗ ಬೇಡಿಕೆ ಹೆಚ್ಚು.
ಯಾವ ಟೈಮಲ್ಲಿ ಯಾವ ಸೀರೆ?