

ಮತ್ತೊಮ್ಮೆ ವಿಶ್ವ ಮಹಿಳಾ ದಿನ ಮುಗಿದಿದೆ. ಹಳೆಯ ಕನಸುಗಳೆಲ್ಲಾ ದುಃಸ್ವಪ್ನವಾಗಿ ಕಾಡುತ್ತಿರಲು ಹೊಸ ಕನಸುಗಳ ಹೆಣೆಯಲು ಯಾಕೋ ಮನಸ್ಸೇ ಬರುತ್ತಿಲ್ಲ. ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ ಯಾಕೋ ಮಹಿಳಾ ದಿನ ಅರ್ಥ ಕಳೆದುಕೊಂಡಂತೆ ಅನಿಸುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೇಗೆ ತಡೆಯುವುದು ಎಂಬುದೇ ದೊಡ್ಡ ಸಮಸ್ಯೆ. ಮನೆಯಲ್ಲೇ ಆರಂಭವಾಗುವ ಹಿಂಸೆಯನ್ನು ತಡೆಯುವುದು ಹೇಗೆ, ಮನೆಯ ಹೊರಗಾಗುವ ದೌರ್ಜನ್ಯ ತಡೆಯುವುದು ಹೇಗೆ, ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಹೇಗೆ? ಈ ಸಮಸ್ಯೆಗಳ ಪರಿಹಾರದತ್ತ ಒಮ್ಮೆ ಕಣ್ಣು ಹಾಯಿಸೋಣ.