

ಸುಂದರ ಸೂರು ಎಲ್ಲರ ಕನಸು. ಆದರೆ, ಕಟ್ಟುವಾಗ ಆಗುವ ಖರ್ಚು ಎಲ್ಲರಿಗೂ ಸ್ವಲ್ಪ ಮುನಿಸು. ಹೀಗಾಗಿ ಸುಂದರ ಮನೆಯನ್ನೇ ಕಡಿಮೆ ವೆಚ್ಚದಲ್ಲಿ ಮಾಡಬೇಕೆಂಬ ಆಸೆ ಎಲ್ಲರದು. ಜತೆಗೆ ಪರಿಸರಸ್ನೇಹಿ ಕೂಡ.
ಇಂತಹ ಮಧ್ಯಮವರ್ಗದವರನ್ನೇ ಮುಖ್ಯವಾಗಿರಿಸಿಕೊಂಡು ಇಲ್ಲೊಂದು ಇಟ್ಟಂಗಿ ಕಂಪನಿಯೊಂದು ಇದೆ. ಅಷ್ಟೇ ಅಲ್ಲ, ಅದು ಪರಿಸರಪ್ರಿಯವಾದ ಮನೆಗಳ ನಿರ್ಮಾಣಕ್ಕೆ ಸಹಕಾರಿಯೂ ಆಗಿದೆ.
ಅದುವೇ ಹಾಲೋ ಇಟ್ಟಂಗಿ ಉತ್ಪಾದನಾ ಕಂಪನಿ. ಇದು ಇರುವುದು ಮಂಗಳೂರಿನಿಂದ ಏಳು ಕಿಲೋಮೀಟರ್‌ದೂರದಲ್ಲಿರುವ ಬೆರ್ಲಘಟ್ಟದಲ್ಲಿ. ಬರೀ ಇಟ್ಟಂಗಿ ಮಾತ್ರವಲ್ಲ, ನಾನಾ ತರಹದ ಟೈಲ್ಸ್, ಪ್ಯಾನಲ್ ಇಟ್ಟಂಗಿ, ಪರಿಸರಪ್ರಿಯವಾದ ಇಟ್ಟಂಗಿ, ನೆಲಹಾಸಿಗೂ ಬೇಕಾದ ಉತ್ತಮ ಇಟ್ಟಂಗಿಯನ್ನೂ (ಅಗಲವಾದ) ಇದು ತಯಾರಿಸುತ್ತದೆ.
ಈ ಹಾಲೋ ಇಟ್ಟಂಗಿಯಿಂದ ಈಗಾಗಲೇ ನೂರಾರು ಮನೆಗಳು ನವೀನ ರೀತಿಯಲ್ಲಿ ನಿರ್ಮಾಣಗೊಂಡಿವೆ. ಈಗಲೂ ಇದನ್ನು ಸುಳ್ಯ, ಪುತ್ತೂರು ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಮನೆ ಕಟ್ಟಲು ಬಳಸುತ್ತಾರೆ. ಅಂದಹಾಗೆ ಹಾಲೋ ಇಟ್ಟಂಗಿಯಿಂದ ಕೇವಲ ಆರರಿಂದ ಎಂಟು ತಿಂಗಳೊಳಗೆ ಮನೆಯನ್ನು ಕಟ್ಟಬಹುದು.
ಬೇರೆ ಮನೆಗಳಿಗಿಂತಲೂ ಇದು ಆಕರ್ಷಣೀಯವಾಗಿ ಕಾಣಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂಗಣಕ್ಕೆ ಹಾಕುವ ಪೇವ್‌ಮೆಂಟ್ ಇಟ್ಟಂಗಿಯಲ್ಲಿ ಸಣ್ಣ ಸಣ್ಣ ತೂತುಗಳು ಇರುವುದರಿಂದ ನೀರನ್ನು ಹರಿದು ಹೋಗಲು ಬಿಡುವುದಿಲ್ಲ.
ಮನೆಯ ಕಂಬಗಳು, ನೆಲ, ಗೋಡೆ, ಮೆಟ್ಟಿಲು, ಛಾವಣಿಯ ಶೀಟ್ಸ್ ಇತ್ಯಾದಿ ಎಲ್ಲವೂ ಕೂಡ ಹಾಲೋ ಇಟ್ಟಂಗಿಯಿಂದಲೇ ನಿರ್ಮಿಸಬಹುದಾಗಿದೆ. ಜತೆಗೆ ಮನೆಯ ವಿವಿಧ ವಿನ್ಯಾಸಕ್ಕೂ ಈ ಹಾಲೋ ವಿವಿಧ ಬಗೆಯ ಇಟ್ಟಂಗಿಯನ್ನು ಒದಗಿಸುತ್ತ
ಹಾಲೋ ಬ್ರಿಕ್ಸ್‌ನಿಂದ ನಿರ್ಮಿತವಾದ ಮನೆಗಳ ವೈಶಿಷ್ಟ್ಯಗಳು
ಅತ್ಯಂತ ಆಧುನಿಕ ಮನೆ ನಿರ್ಮಿಸಬಹುದು
ಕಡಿಮೆ ವೆಚ್ಚದಲ್ಲಿ ಹಾಲೋ ಬ್ರಿಕ್ಸ್‌ನಿಂದ ಸೂರು ಕಲ್ಪಿಸಿಕೊಳ್ಳಬಹುದು
ಮನೆಗೆ ಪ್ಲಾಸ್ಟರ್ ಮಾಡುವ ಅಗತ್ಯವೂ ಇಲ್ಲ. ಇದರಿಂದ ಸಿಮೆಂಟ್ ಕೂಡ ಉಳಿಯುತ್ತದೆ
ಹಾಲೋ ಬ್ರಿಕ್ಸ್‌ನಿಂದ ಕಟ್ಟಿದ ಮನೆಗಳು ಕಾಂಕ್ರೀಟ್ ಮನೆಗಳಿಗಿಂತ ಶೇ.60ರಷ್ಟು ಸಿಮೆಂಟ್ ಉಳಿಸುತ್ತೆ ಸಿಮೆಂಟ್ ಮನೆಗಳಿಗಿಂತ ಹೆಚ್ಚು ತಂಪು ನೀಡುತ್ತದೆ.
ಹೆಚ್ಚು ವೆಚ್ಚದಾಯಕವಲ್ಲದ್ದರಿಂದ ಮಧ್ಯಮ ವರ್ಗದವರಿಗೆ ಹೆಚ್ಚು ಉಪಯುಕ್ತ. ಅಂದಾಜಿನ ಪ್ರಕಾರ ಕಾಂಕ್ರೀಟ್ ಮನೆ ಕಟ್ಟಲು 18 ಲಕ್ಷ ವೆಚ್ಚ ಮಾಡಿದರೆ ಹಾಲೋ ಬ್ರಿಕ್ಸ್‌ನಿಂದ ಕಟ್ಟುವ ಮನೆಗೆ 8 ಲಕ್ಷದಿಂದ 9 ಲಕ್ಷ ವೆಚ್ಚವಾಗಬಹುದಷ್ಟೇ ಸುಳ್ಯ, ಪುತ್ತೂರು, ಬೆಳ್ತಂಗಡಿ ವ್ಯಾಪ್ತಿಯಲ್ಲಿ ಹಾಲೋ ಬ್ರಿಕ್ಸ್‌ಗಳಿಂದ ಹೆಚ್ಚು ಮನೆ ಕಟ್ಟಲಾಗುತ್ತಿತ್ತು. ಆದರೆ, ಇವುಗಳು ಈಗ ನಗರ ಪ್ರದೇಶವನ್ನೂ ವ್ಯಾಪಿಸಿದೆ. ಕೇರಳ, ಗೋವಾಕ್ಕೂ ಇವರು ಈ ಬ್ರಿಕ್ಸ್‌ಗಳನ್ನು ಕಳಿಸುತ್ತಿದ್ದಾರೆ
ಅಪಾರ್ಟ್‌ಮೆಂಟ್ ನಿರ್ಮಿಸುವಲ್ಲಿಯೂ ಹಾಲೋ ಬ್ರಿಕ್ಸ್ ಹೆಚ್ಚು ಉಪಯುಕ್ತವಾಗುತ್ತಿದೆ.
ಹಾಗಾದರೆ ಹಾಲೋ ಬ್ರಿಕ್ಸ್ ನಿಮಗೆ ಉಪಯುಕ್ತವಾಗುತ್ತದೆ ಎಂಬ ನಂಬಿಕೆ ಇದ್ದಲ್ಲಿ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಅವರನ್ನು ನೀವೇ ನೇರವಾಗಿ ವೇ ಸಂಪರ್ಕಿಸಬಹುದು. ಅವರ ಮೊ. 9964696178.
-ಬಾಲಕೃಷ್ಣ ಶಿರ್ವ