ಎಣ್ಣೆ ಹೆಣ್ಣೇ...

ಹಲವು ರೀತಿಯ ಎಣ್ಣೆಗಳು ನಮ್ಮ ಸೌಂದರ್ಯವನ್ನು ಕಾಪಾಡುವಂಥವು. ಬಹುಶಃ ಈ ಚಳಿಗಾಲದಲ್ಲಿ ಇವುಗಳ ಫ್ರೆಂಡ್‌ಶಿಪ್ ಬೆಳೆಸಿಕೊಳ್ಳುವುದು ಅತಿಸೂಕ್ತವೇನೋ?
Updated on: 

ಹಲವು ರೀತಿಯ ಎಣ್ಣೆಗಳು ನಮ್ಮ ಸೌಂದರ್ಯವನ್ನು ಕಾಪಾಡುವಂಥವು. ಬಹುಶಃ ಈ ಚಳಿಗಾಲದಲ್ಲಿ ಇವುಗಳ ಫ್ರೆಂಡ್‌ಶಿಪ್ ಬೆಳೆಸಿಕೊಳ್ಳುವುದು ಅತಿಸೂಕ್ತವೇನೋ?

ಮೃದು ಚರ್ಮಕ್ಕೆ
ದಿನಾ 5 ನಿಮಿಷಗಳ ಕಾಲ ಬೇಬಿ ಆಯಿಲ್ ಮುಖಕ್ಕೆ ಹಚ್ಚಿ ಮಸಾಜ್ ಮಾಡಿದರೆ ಚರ್ಮ ಮೃದುವಾಗುತ್ತದೆ.

ಶುಷ್ಕ ತ್ವಚೆ
ಅರ್ಧ ಟೀ ಚಮಚ ಅಲಿವ್ ಎಣ್ಣೆಯಲ್ಲಿ ಅಷ್ಟೇ ಪ್ರಮಾಣದ ಹಾಲು, ಅರಿಶಿನ ಪುಡಿ, ನಿಂಬೆರಸ ಸೇರಿಸಿ ಮಿಶ್ರ ಮಾಡಿ. ಆ ಮಿಶ್ರಣಕ್ಕೆ ಒಂದು ಟೀ ಚಮಚ ಕಡಲೆ ಹಿಟ್ಟು ಸೇರಿಸಿ ಪೇಸ್ಟ್ ಮಾಡಿ ಹಚ್ಚಿ ತಣ್ಣೀರಲ್ಲಿ ಮುಖ ತೊಳೆಯಿರಿ.

ಸುಕ್ಕು ನಿವಾರಣೆಗೆ
ಒಂದು ಟೀ ಚಮಚ ಅಲಿವ್ ಎಣ್ಣೆಯಲ್ಲಿ ಒಂದು ಮೊಟ್ಟೆ ಮಿಶ್ರಮಾಡಿ ಸ್ನಾನಕ್ಕೆ ಮುನ್ನ ಮುಖಕ್ಕೆ ಹಚ್ಚಿರಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ಸುಕ್ಕು ನಿವಾರಣೆಯಾಗುತ್ತದೆ.

ಉಗುರು ದೃಢವಾಗಲು
ಬೇಬಿ ಆಯಿಲ್ ಜತೆ ಬಿಳಿ ಅಯೋಡಿನ್ ಸೇರಿಸಿ ಉಗುರಿನ ಸುತ್ತಲೂ ಹಚ್ಚಿದರೆ ಉಗುರುಗಳು ತುಂಡಾಗುವುದಿಲ್ಲ.

ಮುಖ ಕಾಂತಿ
ಒಂದು ಟೀ ಚಮಚ ಬಾದಾಮಿ ಎಣ್ಣೆಯಲ್ಲಿ ಅಷ್ಟೇ ಪ್ರಮಾಣದ ನಿಂಬೆರಸ, ಜೇನುತುಪ್ಪ, ಹಾಲಿನ ಕೆನೆ ಮಿಶ್ರ ಮಾಡಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಮುಖ ಕಾಂತಿಯುತವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com