ಇತ್ತೀಚೆಗೆ ಅಂತರ್ಜಾಲದ ಸಂಪರ್ಕ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಅಷ್ಟೇ ಅಲ್ಲ, ಅದರ ಬಳಕೆದಾರರೂ ಹೆಚ್ಚುತ್ತಿದ್ದಾರೆ. ತೀರಾ ಇತ್ತೀಚೆಗೆ ತಂತ್ರಜ್ಞಾನದಲ್ಲಿ ಹೊಸತನವೂ ಇಣುಕುತಿದೆ. ಅದುವೆ ಎಫ್‌ಟಿಟಿಎಚ್ (ಫೈಬರ್ ಟು ದಿ ಹೋಮ್).
ಡೇಟಾ (ದತ್ತಾಂಶ), ಎಲೆಕ್ಟ್ರಾನಿಕ್ ಸಾಧನ ಸಲಕರಣೆಗಳು ಮತ್ತು ಅಂತರ್ಜಾಲದ ಬಳಕೆ ಒಂದೇ ಕಡೆ ಬರುವುದೇ ಈ ಎಫ್‌ಟಿಟಿಎಚ್ ವಿಶೇಷ. ಇಂಥ ಎಫ್‌ಟಿಟಿಎಚ್ ಸಂಪರ್ಕ ಈಗ ಮನೆಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಇದು ಬೆಂಗಳೂರಿನಲ್ಲಿ ಅತೀ ವೇಗವಾಗಿ ಹೆಚ್ಚುತ್ತಿದೆ. ಮನೆಗೆ ಅಂತರ್ಜಾಲದ ಜತೆಗೆ ಆಪ್ಟಿಕಲ್ ಎಲೆಕ್ಟ್ರಾನಿಕ್ ಸಾಧನಗಳ ವೇಗ ಮತ್ತು ಟೆಲಿವಿಷನ್ ಸೌಲಭ್ಯವನ್ನು ಮನೆ, ಕಚೇರಿಗೆ ಸಂಪರ್ಕ ಒದಗಿಸುತ್ತದೆ ಈ ಎಫ್‌ಟಿಟಿಎಚ್. ಈ ಸೌಲಭ್ಯವನ್ನು ಟಾಟಾ ಡೊಕೊಮೊ ಎಲ್ಲರ ಕೈಗೆಟುಕುವ ದರದಲ್ಲಿ ಒದಗಿಸುತ್ತಿದೆ. ಈಗಾಗಲೇ ಬೆಂಗಳೂರಿನ 125ಕ್ಕೂ ಹೆಚ್ಚು ಅಪಾರ್ಟ್‌ಮೆಂಟಿನ ಮನೆಗಳು ಸೇರಿದಂತೆ 30,000 ಸಾವಿರ ಸೂರುಗಳಿಗೆ ಈಗಾಗಲೇ ಟಾಟಾ ಡೊಕೊಮೊ ಎಫ್‌ಟಿಟಿಎಚ್ ಸಂಪರ್ಕವನ್ನು ಕಲ್ಪಿಸಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಂಪನಿಯು ಇನ್ನಷ್ಟು ಮನೆಗಳಿಗೆ ಎಫ್‌ಟಿಟಿಎಚ್ ಸಂಪರ್ಕವನ್ನು ಕಲ್ಪಿಸುವ ಯೋಜನೆ ಹಾಕಿಕೊಂಡಿದೆ.