

ಮನೆಯಲ್ಲೊಂದಿಷ್ಟು ಅಲಂಕಾರಿಕ ವಸ್ತುಗಳಿದ್ದರೆ ಆ ಗೂಡು ಇನ್ನೊಂದು ಸ್ವರ್ಗ. ಈ ಪರಿಸರದಲ್ಲಿ ಮನಸ್ಸೂ ಸದಾ ಅರಳುತ್ತಲೇ ಇರುತ್ತದೆ. ಆ ಪುಟ್ಟಗೂಡಿನ ಒಳಭಾಗ ಅಲಂಕರಿಸುವುದು ಎಂದರೆ ನೀರೆಯರಿಗೆ ಅದೇನೋ ಒಂದು ರೀತಿ ಖುಷಿ. ಜತೆಗೆ ಉತ್ಸಾಹ... ಉಲ್ಲಾಸ...
ಮನೆಗೆ ವಸ್ತುಗಳನ್ನು ತರಲೆಂದು ಮಾರುಕಟ್ಟೆಯತ್ತ ಹೋದರೆ, ಕಣ್ಣಿಗೆ ಕಂಡ ವಸ್ತುಗಳನ್ನು ತಂದು ಮನೆಯಲ್ಲಿ ಅಲಂಕರಿಸೋಣ ಎಂಬ ತುಡಿತ ಸದಾ ಅವರಲ್ಲಿರುತ್ತದೆ. ಮನೆ ಎಂದರೆ ಹಾಲ್, ಕೊಠಡಿ, ವರಾಂಡಗಳು ನೆನಪಿಗೆ ಬರುತ್ತವೆ. ಬಂಧುಗಳು, ಸ್ನೇಹಿತರು ಮನೆಗೆ ಬಂದಾಗ ಅವರ ಕಣ್ಣಿಗೆ ಆ ವಸ್ತುಗಳೂ ಕಾಣಬೇಕು. ಅವರಿಂದ ಪ್ರಶಂಸೆ ಗಿಟ್ಟಿಸಬೇಕು ಎಂಬ ತುಡಿತ ಬೇರೆ ಅವರ ಮನಸಿನಲ್ಲಿ ಮನೆ ಮಾಡಿರುತ್ತದೆ. ಹಾಲ್, ವರಾಂಡಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಹೆಂಗಳೆಯರು ಅಡುಗೆಮನೆಗೆ ಕೊಡುವುದು ಕಡಿಮೆ. ಅಷ್ಟೇಅಲ್ಲ, ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಯಸುತ್ತಾರೆ. ಆದರೆ, ಹೆಚ್ಚು ಅಲಂಕಾರ ಮಾಡಲು ಹೋಗುವುದಿಲ್ಲ.
ಆದರೆ, ಅಡುಗೆ ಮನೆಯ ಸ್ವಚ್ಛತೆ ಜತೆಗೆ ಅಲಂಕಾರಕ್ಕೂ ಪ್ರಾಮುಖ್ಯತೆ ನೀಡುವುದು, ವಿವಿಧ ಅಲಂಕಾರಿಕ ವಸ್ತುಗಳಿಂದ ಅಳವಡಿಸುವುದು ಇತ್ತೀಚಿನ ಟ್ರೆಂಡ್. ಈ ಕಿಚನ್‌ಗೆ, ಕೊಠಡಿಗಳಿಗೆ ಅಂಟಿಕೊಂಡಿರುವ ವಾಶ್‌ಬೇಸಿನ್ ಸಹ ಇದಕ್ಕೆ ಹೊರತಲ್ಲ.
ಕೇವಲ ತಟ್ಟೆ, ಲೋಟ, ಡೈನಿಂಗ್ ಟೇಬಲ್, ಪಾತ್ರೆಗಳಷ್ಟೇ ಆಕರ್ಷಕವಾಗಿದ್ದರೆ ಸಾಕಾಗಲ್ಲ. ಕೈತೊಳೆಯುವ ವಾಶ್ ಬೇಸಿನ್‌ಗಳೂ ಬಗೆಬಗೆಯ ಅಲಂಕಾರದಿಂದ ಕೂಡಿದ್ದರೆ ಎಷ್ಟು ಚೆನ್ನ ಅಲ್ಲವೇ? ಅಂಥ ವಿವಿಧ ಬಗೆಯ ಆಕರ್ಷಕ ವಾಶ್‌ಬೇಸಿನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೀವು ಕೊಂಡು ಹೋಗಿ, ನಿಮ್ಮ ಕಿಚನ್, ಬೆಡ್‌ರೂಂಗಳಲ್ಲಿ ವಾಶ್‌ಬೇಸಿನ್ ಇದ್ದರೆ ವಿವಿಧ ಬಗೆಯ ವಾಶ್‌ಬೇಸಿನ್‌ನಿಂದ ಅಲಂಕರಿಸಿ.
ಸಿಲಿಕಾನ್ ಸಿಟಿಯಲ್ಲಿ ವಾಶ್‌ಬೇಸಿನ್‌ಗಳ ಪ್ರತ್ಯೇಕ ಮಳಿಗೆಯೇ ಇದೆ. ಅಲ್ಲಿ ವಿವಿಧ ಸುಮಾರು 400 ಬಗೆಯ ವಾಶ್‌ಬೇಸಿನ್‌ಗಳು ಲಭ್ಯ. ಅಲ್ಲಿ ನಿಮಗೆ ಸಿಗುವ ವಾಶ್‌ಬೇಸಿನ್‌ಗಳು ಕಲ್ಲಿನಿಂದ ತಯಾರಾಗಿರುವವು.
ಆ ಅಂಗಡಿ ಸ್ಟೋನ್ ಆರ್ಟ್ಸ್.ಡಿ. ಈ ಸ್ಟೋನ್‌ಆರ್ಟ್ಸ್.ಡಿ ಕಂಪನಿ, ಅವುಗಳನ್ನು ತಯಾರಿಸಿ ಮಾರುಕಟ್ಟೆಗೆ ಹಾಗೂ ನೇರವಾಗಿ ಗ್ರಾಹಕರಿಗೆ ನೀಡುತ್ತಿದೆ. ಹಾಗಿದ್ದರೆ ತಡೆ ಏಕೆ, ನಿಮ್ಮ ಕಿಚನ್‌ಗೆ ಸಿಂಗರಿಸಲು ಸಿದ್ಧರಾಗಿ. ಒಮ್ಮೆ ಅವುಗಳನ್ನು ಕಂಡರೆ ಮನೆಗೆ ತಂದು ಅಲಂಕರಿಸುವ ಮನಸ್ಸು ಎಂಥವನ್ನೂ ಬಿಡಲಾರದು.
ಒಂದೊಂದು ವಾಶ್‌ಬೇಸಿನ್ ಸಹ ಒಂದೊಂದು ವಿನ್ಯಾಸದಿಂದ ಕೂಡಿದ್ದು, ಅತ್ಯಾಕರ್ಷಕವಾಗಿವೆ. ಚೌಕಾಕಾರ, ಮೊಟ್ಟೆ, ಗುಂಡಾಕಾರ, ಬುದ್ಧನ ವಿಗ್ರಹ... ಹೀಗೆ ವಿವಿಧ ಬಗೆಯ ವಾಶ್‌ಬೇಸಿನ್‌ಗಳನ್ನು ಕಣ್ತುಂಬಿಕೊಳ್ಳಬಹುದು.
ಈ ಸ್ಟೋನ್ ಆರ್ಟ್ಸ್ ಭಾರತದಲ್ಲೇ ಅತಿದೊಡ್ಡ ಶೋರೂಂ. ಎಲ್ಲಾ ವರ್ಗದವರು ಖರೀದಿಸಬಹುದಾದ ಬೆಲೆಗಳಲ್ಲಿ ಬೇಸಿನ್‌ಗಳು ಲಭ್ಯ. ಸಾವಿರದಿಂದ ಲಕ್ಷಗಟ್ಟಲೆ ಬೆಲೆಯ ಐಟಂಗಳಿವೆ. ನೀವೂ ವಾಷ್‌ಬೇಸಿನ್ ಕೊಳ್ಳಬೇಕಿದ್ದಲ್ಲಿ- feedback@stonarts.com, 9740029203 ಸಂಪರ್ಕಿಸಬಹುದು.
- ಶಾಂತ ತಮ್ಮಯ್ಯ