ಇಸಿಸ್ ಪಾಲಿಗೆ ಭಾರತೀಯ ಉಗ್ರರು ಉತ್ತಮ ಹೋರಾಟಗಾರರಲ್ಲ

ಇಡೀ ವಿಶ್ವಕ್ಕೆ ಕಂಟಕ ಪ್ರಾಯವಾಗಿರುವ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ ಉಗ್ರ ಸಂಘಟನೆ ದಕ್ಷಿಣ ಏಷ್ಯಾದ ಮುಸ್ಲಿಂ ಉಗ್ರಗಾಮಿಗಳನ್ನು ಅನುಮಾನದಿಂದ ನೋಡುತ್ತಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ...
ಸಿರಿಯಾದಲ್ಲಿ ಇಸಿಸ್ ಉಗ್ರರ ದಾಳಿ (ಸಂಗ್ರಹ ಚಿತ್ರ)
ಸಿರಿಯಾದಲ್ಲಿ ಇಸಿಸ್ ಉಗ್ರರ ದಾಳಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಇಡೀ ವಿಶ್ವಕ್ಕೆ ಕಂಟಕ ಪ್ರಾಯವಾಗಿರುವ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ ಉಗ್ರ ಸಂಘಟನೆ ದಕ್ಷಿಣ ಏಷ್ಯಾದ ಮುಸ್ಲಿಂ ಉಗ್ರಗಾಮಿಗಳನ್ನು ಅನುಮಾನದಿಂದ  ನೋಡುತ್ತಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.

ಇಸಿಸ್ ಮೂಲಭೂತವಾದಿಗಳ ಪ್ರಕಾರ ದಕ್ಷಿಣ ಏಷ್ಯಾದ ಮುಸ್ಲಿಂ ಯುವಕರು ಅದರಲ್ಲಿಯೂ ಪ್ರಮುಖವಾಗಿ ಭಾರತದ ಮುಸ್ಲಿಂ ಉಗ್ರಗಾಮಿಗಳಿಗೆ ಶತ್ರುಗಳ ವಿರುದ್ಧ ಪ್ರಾಣದ ಹಂಗಿಲ್ಲದೆ  ಹೋರಾಡುವ ಮನಸ್ಥಿತಿ ಕಡಿಮೆಯಂತೆ. ಹೀಗಾಗಿ ಇಂತಹ ಉಗ್ರಗಾಮಿಗಳನ್ನು ಆತ್ಮಾಹುತಿ ದಳಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ, ಆತ್ಮಾಹುತಿ ಬಾಂಬರ್ ಗಳಾಗಿ ಬಳಕೆ ಮಾಡಲಾಗುತ್ತಿದೆ  ಎಂದು ತಿಳಿದುಬಂದಿದೆ.

ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿರುವಂತೆ ಅರಬ್ ರಾಷ್ಟ್ರಗಳಿಂದ ಇಸಿಸ್ ಸಂಘಟನೆ ಸೇರಿರುವ ಉಗ್ರಗಾಮಿಗಳಿಗೆ ಹೋಲಿಕೆ ಮಾಡಿದರೆ ಭಾರತ, ಬಾಂಗ್ಲಾದೇಶ, ಪಾಕಿಸ್ತಾನದಿಂದ  ಬಂದ ಉಗ್ರಗಾಮಿಗಳನ್ನು ಕೀಳಾಗಿ ಕಾಣಲಾಗುತ್ತಿದೆ. ನೈಜಿರಿಯಾ, ಸುಡಾನ್ ದೇಶಗಳ ಉಗ್ರಗಾಮಿಗಳನ್ನು ಸಂಘಟನೆಯಲ್ಲಿ ಉನ್ನತ ಮಟ್ಟದಲ್ಲಿಟ್ಟು ನೋಡಲಾಗುತ್ತಿದೆ ಎಂದು  ತಿಳಿದುಬಂದಿದೆ. ಉಗ್ರರ ವೇತನ ಮತ್ತು ಶ್ರೇಣಿಗಳಲ್ಲೂ ಸಾಕಷ್ಟು ವ್ಯತ್ಯಾಸವಿದ್ದು, ಅರಬ್, ನೈಜಿರಿಯಾ ಮತ್ತು ಸುಡಾನ್ ದೇಶದ ಉಗ್ರಗಾಮಿಗಳಿಗಿಂತ ಭಾರತ, ಪಾಕಿಸ್ತಾನ ಮತ್ತು  ಬಾಂಗ್ಲಾದೇಶದ ಉಗ್ರಗಾಮಿಗಳಿಗೆ ಕಡಿಮೆ ವೇತನ ಮತ್ತು ಕೆಳಮಟ್ಟದ ಶ್ರೇಣಿಗಳನ್ನು ನೀಡಲಾಗುತ್ತಿದೆ.

ಇನ್ನು ಕೆಲ ವರದಿಗಳ ಪ್ರಕಾರ ದಕ್ಷಿಣ ಏಷ್ಯಾದ ಉಗ್ರಗಾಮಿಗಳಿಗೆ ಸ್ಫೋಟಕ ತುಂಬಿದ ವಾಹನಗಳನ್ನು ನೀಡಿ ಶತ್ರುಪಾಳಯ ಸೈನಿಕರತ್ತ ನುಗ್ಗಿಸಿ ಸ್ಫೋಟಿಸಿಕೊಳ್ಳುವಂತೆ ಸೂಚನೆ  ನೀಡಲಾಗುತ್ತಿದೆ. ಇಲ್ಲಿಯವರೆಗೂ ಭಾರತದಿಂದ ಸುಮಾರು 23 ಮಂದಿ ಇಸಿಸ್ ಉಗ್ರ ಸಂಘಟನೆಯನ್ನು ಸೇರಿದ್ದು, ಈ ಪೈಕಿ 6 ಮಂದಿ ಉಗ್ರರು ವಿವಿಧ ಘಟನೆಗಳಲ್ಲಿ ಮತ್ತು ವಿವಿಧ  ಪ್ರದೇಶಗಳಲ್ಲಿ ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com