ಅಣ್ವಸ್ತ್ರ ಸ್ಪರ್ಧೆ ತಡೆಯಲು ಭಾರತದೊಂದಿಗೆ ಕಾರ್ಯನಿರ್ವಹಿಸಲು ಸಿದ್ಧ: ಪಾಕಿಸ್ತಾನ

ಭಾರತದೊಂದಿಗೆ ಸದಾಕಾಲ ಅಣ್ವಸ್ತ್ರ ಸ್ಪರ್ಧೆಯಲ್ಲಿ ಇರಲು ಹಾತೊರೆಯುವ ಪಾಕಿಸ್ತಾನ ಇದೀಗ ಯೂಟರ್ನ್ ಹೊಡೆದಿದ್ದು, ಸ್ಪರ್ಧೆ ತಡೆಯುವ ನಿಟ್ಟಿನಲ್ಲಿ ಭಾರತದೊಂದಿಗೆ ಕಾರ್ಯ ನಿರ್ವಹಿಸಲು ಸಿದ್ಧವಿರುವುದಾಗಿ ಹೇಳಿದೆ.
ಪಾಕಿಸ್ತಾನದ ವಿದೇಶಾಂಗ ವಕ್ತಾರ ನಫೀಸ್‌ ಝಕಾರಿಯಾ (ಸಂಗ್ರಹ ಚಿತ್ರ)
ಪಾಕಿಸ್ತಾನದ ವಿದೇಶಾಂಗ ವಕ್ತಾರ ನಫೀಸ್‌ ಝಕಾರಿಯಾ (ಸಂಗ್ರಹ ಚಿತ್ರ)
Updated on: 

ಇಸ್ಲಾಮಾಬಾದ್‌: ಭಾರತದೊಂದಿಗೆ ಸದಾಕಾಲ ಅಣ್ವಸ್ತ್ರ ಸ್ಪರ್ಧೆಯಲ್ಲಿ ಇರಲು ಹಾತೊರೆಯುವ ಪಾಕಿಸ್ತಾನ ಇದೀಗ ಯೂಟರ್ನ್ ಹೊಡೆದಿದ್ದು, ಸ್ಪರ್ಧೆ ತಡೆಯುವ ನಿಟ್ಟಿನಲ್ಲಿ ಭಾರತದೊಂದಿಗೆ  ಕಾರ್ಯ ನಿರ್ವಹಿಸಲು ಸಿದ್ಧವಿರುವುದಾಗಿ ಹೇಳಿದೆ.

ಭಾರತ ಮತ್ತು ಪಾಕಿಸ್ತಾನ ದೇಶಗಳು ತಮ್ಮ ಅಣ್ವಸ್ತ್ರ ಕಾರ್ಯಕ್ರಮಗಳನ್ನು ನಿಯಂತ್ರಿಸಬೇಕು ಎಂದು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಕರೆ ನೀಡಿದ ಬೆನ್ನಲ್ಲೇ, ಭಾರತದ  ಜತೆ ಈ ಕುರಿತಾಗಿ ತಾನು ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನ ಹೇಳಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ವಕ್ತಾರ ನಫೀಸ್‌ ಝಕಾರಿಯಾ ಅವರು,  "ಭಾರತದ ಜತೆ ಅಣ್ವಸ್ತ್ರ ನಿಯಂತ್ರಣದ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ.

"ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ನೀಡಿದ ಕರೆಯನ್ನು ಪಾಕಿಸ್ತಾನ ಪರಿಗಣಿಸಿದ್ದು, ಸೇನಾ ಅಣ್ವಸ್ತ್ರಗಳು ತಪ್ಪು ದಿಕ್ಕಿನತ್ತ ಸಾಗಬಾರದು ಎಂಬುದು ನಮ್ಮ ಅನಿಸಿಕೆಯಾಗಿದೆ.  ಪ್ರಾದೇಶಿಕ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಉಭಯ ದೇಶಗಳ ಸಮ್ಮತ ನಿಯಂತ್ರಣ ಕ್ರಮಗಳು ಅವಶ್ಯಕ' ಎಂದು ನಫೀಸ್‌ ಝಕಾರಿಯಾ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com