

ನ್ಯೂಯಾರ್ಕ್: ಚೀನಾ ವಿರುದ್ಧ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಕಿಡಿಕಾಡಿರಿದ್ದು, ಚೀನಾ ದೇಶ ಕದ್ದಿರುವ ಡ್ರೋಣ್ ಗಳು ನಮಗೆ ಬೇಕಿಲ್ಲ, ಅವರೇ ಇಟ್ಟುಕೊಳ್ಳಲಿ ಎಂದು ಭಾನುವಾರ ಹೇಳಿದ್ದಾರೆ.
ಅಮೆರಿಕ ರಾಷ್ಟ್ರದ ಡ್ರೋಣ್ ನ್ನು ವಶಕ್ಕೆ ಪಡೆದುಕೊಂಡಿರುವ ಚೀನಾ ಕ್ರಮದ ವಿರುದ್ಧ ಟ್ವಿಟರ್ ನಲ್ಲಿ ಟ್ರಂಪ್ ತೀವ್ರವಾಗಿ ಕಿಡಿಕಾಡಿದ್ದು, ಕಳ್ಳತನ ಮಾಡಿರುವ ಡ್ರೋಣ್ ಗಳು ನಮಗೆ ಅಗತ್ಯವಿಲ್ಲ ಎಂಬುದನ್ನು ಚೀನಾ ರಾಷ್ಟ್ರಕ್ಕೆ ತಿಳಿಸಬೇಕಿದ್ದು, ಕದ್ದಿರುವ ಡ್ರೋಣ್ ಗಳನ್ನು ಅವರೇ ಇಟ್ಟುಕೊಳ್ಳಲಿ ಎಂದು ಹೇಳಿದ್ದಾರೆ.