

ಸಿಡ್ನಿ: ಸುಮಾರು 145 ವರ್ಷಗಳಷ್ಟು ಹಳೆಯದಾದ ಅಪರೂಪದ ಪತ್ರವೊಂದು ಆಸ್ಚ್ರೇಲಿಯಾದಲ್ಲಿ ಪತ್ತೆಯಾಗಿದ್ದು, ಪತ್ರವನ್ನು ಪತ್ರಾಗಾರದಲ್ಲಿ ಸುರಕ್ಷಿತವಾಗಿಡಲಾಗಿದೆ.
ಮೂಲಗಳ ಪ್ರಕಾರ ಸುಮಾರು 145 ವಷ೯ಗಳ ಹಿ೦ದೆ ಫ್ರಾನ್ಸ್ ಮೂಲದ ವ್ಯಕ್ತಿ ಚಾಲ್ಸ್‍೯ ಮೆಸ್ನಿಯರ್ ಎ೦ಬಾತ ತನ್ನ ತಾಯಿಗೆ ಬರೆದಿದ್ದ ಪತ್ರ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಪ್ರಸ್ತುತ ಈ ಅಪರೂಪದ ಪತ್ರವನ್ನು ಆಸ್ಟ್ರೇಲಿಯಾದ ಪತ್ರಾಗಾರದಲ್ಲಿ ಸುರಕ್ಷಿತವಾಗಿಡಲಾಗಿದ್ದು, ಈ ಪತ್ರವು ಸೇರಬೇಕಾಗಿದ್ದ ಜಾಗದ ಕುರಿತು ಇದೀಗ ಪತ್ರಾಗಾರ ಇಲಾಖೆ ಹುಡುಕಾಟ ಆರಂಭಿಸಿದೆ.
1870ರಲ್ಲಿ ನಡೆದ ಫ್ರಾನ್ಸ್ ಮತ್ತು ರಷ್ಯಾ ಯುದ್ಧದಲ್ಲಿ ಜಮ೯ನಿಯು ಪ್ಯಾರಿಸನ್ನು ನಾಲ್ಕು ತಿ೦ಗಳಿಗೂ ಅಧಿಕ ಕಾಲ ಸುತ್ತುವರಿದಿತ್ತು. ಈ ಸಂದರ್ಭದಲ್ಲಿ ಪ್ಯಾರಿಸ್ ನಿಂದ ಹೊರಹೋಗಲು ಯಾವುದೇ ಮಾರ್ಗಗಳಿರಲಿಲ್ಲ. ಹೀಗಾಗಿ ಆ ಸಮಯದಲ್ಲಿ ಅಲ್ಲಿ ಬಿಸಿಗಾಳಿಯ ಬಲೂನ್ ಮೂಲಕ ಪತ್ರ ವ್ಯವಹಾರ ನಡೆಸಲಾಗುತ್ತಿತ್ತು. ಇದೇ ರೀತಿ ಈ ಪತ್ರವನ್ನು ಕೂಡ ಬಿಸಿ ಗಾಳಿ ಬಲೂನು ಮೂಲಕ ರವಾನಿಸಲಾಗಿತ್ತಾದರೂ, ಆಗ ಮಾರ್ಗ ತಪ್ಪಿದ ಬಲೂನ್ ಪ್ಯಾರಿಸ್ ಬಿಟ್ಟು ಹೊರಗಡೆ ಹಾರಿತ್ತು.
ಇದೀಗ ಸುಮಾರು 145 ವರ್ಷಗಳ ಬಳಿಕ ಈ ಪತ್ರ ಪ್ಯಾರಿಸ್ ನಿಂದ ಸುಮಾರು 10 ಸಾವಿರ ಮೈಲುಗಳನ್ನು ಸಂಚರಿಸಿ ಆಸ್ಚ್ರೇಲಿಯಾದ ಸಿಡ್ನಿಯಲ್ಲಿ ಪತ್ತೆಯಾಗಿದ್ದು, ಪತ್ರವನ್ನು ಆಸ್ಟ್ರೇಲಿಯಾದ ಪತ್ರಾಗಾರದಲ್ಲಿ ಶೇಖರಿಸಿಡಲಾಗಿದೆ. 8/5 ಇಂಚಿರುವ ಪತ್ರ 1870 ಅಥವಾ 1871ರಲ್ಲಿ ಬರೆದಿರಬಹುದು ಎಂದು ಹೇಳಲಾಗುತ್ತಿದೆ. 145 ವಷ೯ಗಳ ಹಿ೦ದಿನ ಪತ್ರವಾಗಿದ್ದರಿ೦ದ ಇದಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಇದು ಎಲ್ಲಿ೦ದ ಬ೦ದಿದೆ ಎನ್ನುವ ಕುರಿತು ಖಚಿತ ಮಾಹಿತಿಯಿಲ್ಲ ಎ೦ದು ಪತ್ರ ಸ೦ಗ್ರಹಾಲಯ ಹೇಳಿದೆ.