ಪಪುವಾ ನ್ಯೂಗಿನಿಯಾದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪನ

ಪಪುವಾ ನ್ಯೂಗಿನಿಯಾದಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಶೇ.6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ..
ಪಪುವಾ ನ್ಯೂಗಿನಿಯಾದಲ್ಲಿ ಭೂಕಂಪನ (ಸಂಗ್ರಹ ಚಿತ್ರ)
ಪಪುವಾ ನ್ಯೂಗಿನಿಯಾದಲ್ಲಿ ಭೂಕಂಪನ (ಸಂಗ್ರಹ ಚಿತ್ರ)

ಸಿಡ್ನಿ: ಪಪುವಾ ನ್ಯೂಗಿನಿಯಾದಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಶೇ.6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾದ ಫೆಸಿಫಿಕ್ ಸಮುದ್ರದ ಸುಮಾರು 6.6 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದ್ದು. ರಿಕ್ಟರ್ ಮಾಪಕದಲ್ಲಿ ಶೇ.6.3ರಷ್ಟು ತೀವ್ರತೆ ದಾಖಲಾಗಿದೆ ಎಂದು  ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರ ತಿಳಿಸಿದೆ. ಅಂತೆಯೇ ಭೂಕಂಪನದಿಂದ ಸುನಾಮಿ ಅಲೆಗಳು ಏಳುವ ಸಂಭವವಿಲ್ಲ ಎಂದೂ ಕೂಡ ಇಲಾಖೆ ಸ್ಪಷ್ಟಪಡಿಸಿದೆ. ಭೂಕಂಪನ  ಪ್ರಬಲವಾಗಿದ್ದರೂ ಸಮುದ್ರ ಹೆಚ್ಚು ಆಳದಲ್ಲಿ ಸಂಭವಿಸಿರುವುದರಿಂದ ಹೆಚ್ಚಿನ ಅಪಾಯವಿಲ್ಲ ಎಂದು ಇಲಾಖೆ ಹೇಳಿದೆ.

ಭೂಕಂಪನದಿಂದಾಗಿ ದ್ವೀಪರಾಷ್ಟ್ರದಲ್ಲಿ ಯಾವುದೇ ರೀತಿಯ ಹಾನಿಯಾದ ಕುರಿತು ವರದಿಯಾಗಿಲ್ಲ. ಪ್ರಸ್ತುತ ಭೂಕಂಪನ ಸಂಭವಿಸಿರುವ ಪ್ರದೇಶ ಭೂಕಂಪನ ವಲಯದಲ್ಲಿದ್ದು, ಇಲ್ಲಿ  ಭೂಕಂಪನ ಸಾಮಾನ್ಯ. ಆದರೆ ಪ್ರಸ್ತುತ ಕಂಪನ ಪ್ರಬಲವಾಗಿದೆಯಾದರೂ ಸುನಾಮಿ ಅಲೆಗಳನ್ನು ಉಂಟುಮಾಡುವಷ್ಟು ಪ್ರಬಲವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com