ಸಿಪಿಇಸಿ ಭಾರತದ ಸಾರ್ವಭೌಮತೆಯನ್ನು ನಿರಾಕರಿಸುತ್ತಿಲ್ಲ: ಚೀನಾ ಮಾಧ್ಯಮ
ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ(ಸಿಪಿಇಸಿ) ಭಾರತದ ಸಾರ್ವಭೌಮತೆಯನ್ನು ಕಡೆಗಣಿಸುತ್ತಿಲ್ಲ. ಆದರೆ ಯೋಜನೆಗೆ ಭಾರತ ಉಂಟುಮಾಡುತ್ತಿರುವ ಅಡ್ಡಿಯನ್ನು ನಿರಾಕರಿಸುತ್ತಿದೆ...
ಸಿಪಿಇಸಿ ಭಾರತದ ಸಾರ್ವಭೌಮತೆಯನ್ನು ನಿರಾಕರಿಸುತ್ತಿಲ್ಲ: ಚೀನಾ ಮಾಧ್ಯಮ
ಬೀಜಿಂಗ್: ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ(ಸಿಪಿಇಸಿ) ಭಾರತದ ಸಾರ್ವಭೌಮತೆಯನ್ನು ಕಡೆಗಣಿಸುತ್ತಿಲ್ಲ. ಆದರೆ ಯೋಜನೆಗೆ ಭಾರತ ಉಂಟುಮಾಡುತ್ತಿರುವ ಅಡ್ಡಿಯನ್ನು ನಿರಾಕರಿಸುತ್ತಿದೆ ಎಂದು ಚೀನಾದ ಮಾಧ್ಯಮ ಹೇಳಿದೆ.
ಅಭಿವೃದ್ದಿ ಹೊಂದಿದ ದೇಶಗಳೂ ಸಹ ಸಿಪಿಇಸಿ ಯೋಜನೆಗೆ ಆಸಕ್ತಿ ತೋರುತ್ತಿದ್ದು, ದೆಹಲಿಯ ವಿರೋಧದಿಂದ ಪಶ್ಚಿಮದೊಂದಿಗೆ ಚೀನಾದ ಬಾಂಧವ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಸಿಪಿಇಸಿಗೆ ಭಾರತದ ವಿರೋಧದಿಂದ ಅಭಿವೃದ್ಧಿ ಹೊಂದಿದ ದೇಶಗಳ ಹೂಡಿಕೆಗೂ ಸಹ ಹೊಡೆತ ಬೀಳುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ಅಸಮಾಧಾನ ವ್ಯಕ್ತಪಡಿಸಿದೆ.
ಸಿಪಿಇಸಿ ಯೋಜನೆಯಿಂದ ಆರ್ಥಿಕ ಪ್ರಯೋಜನಗಳು ಹೆಚ್ಚಲಿದೆ ಎಂದು ಹೇಳಿಕೊಂಡಿರುವ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ, ಸಿಪಿಇಸಿಯಲ್ಲಿ ತೊಡಗಿಸಿಕೊಳ್ಳಲು ಬ್ರಿಟನ್ ಸಹ ಆಸಕ್ತಿದಾಯಕವಾಗಿದ್ದು, ಸಿಪಿಇಸಿಯಲ್ಲಿ ಬ್ರಿಟನ್ ತಾನೂ ಸಹ ಪ್ರಮುಖ ಪಾಲುದಾರ ಎಂದು ಹೇಳಿಕೊಂಡಿರುವುದನ್ನು ಉಲ್ಲೇಖಿಸಿದೆ.
ಬ್ರಿಟನ್ ನ ಆಸಕ್ತಿಯಿಂದ ಸಿಪಿಇಸಿಯೆಡೆಗೆ ಉಳಿದ ಅಭಿವೃದ್ಧಿ ಹೊಂದಿದ ದೇಶಗಳೂ ಆಸಕ್ತಿ ತೋರುವಂತಾಗಿದ್ದು, ಅದನ್ನು ಸ್ವಾಗತಿಸುವುದಾಗಿ ಚೀನಾದ ಪತ್ರಿಕೆ ಹೇಳಿದೆ.