ವೀಸಾ ಉಲ್ಲಂಘನೆ: ಬ್ರಿಟನ್‌ ನಲ್ಲಿ 38 ಭಾರತೀಯರು ವಶಕ್ಕೆ!

ವೀಸಾ ಅವಧಿ ಮುಗಿದರೂ ಕಾನೂನು ಬಾಹಿರವಾಗಿ ಉದ್ಯೋಗದಲ್ಲಿದ್ದ ಆರೋಪದ ಮೇರೆಗೆ ಬ್ರಿಟನ್ ನಲ್ಲಿ ಸುಮಾರು 38 ಭಾರತೀಯರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಲಂಡನ್: ವೀಸಾ ಅವಧಿ ಮುಗಿದರೂ ಕಾನೂನು ಬಾಹಿರವಾಗಿ ಉದ್ಯೋಗದಲ್ಲಿದ್ದ ಆರೋಪದ ಮೇರೆಗೆ ಬ್ರಿಟನ್ ನಲ್ಲಿ ಸುಮಾರು 38 ಭಾರತೀಯರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬ್ರಿಟನ್ ನ ಲೀಸೆಸ್ಟರ್‌ ನಲ್ಲಿರುವ ಎರಡು ಬಟ್ಟೆ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡಿದ್ದ ವಲಸೆ ಜಾರಿನಿರ್ದೇಶನಾಲಯದ ಅಧಿಕಾರಿಗಳು ಅಲ್ಲಿನ ಸಿಬ್ಬಂದಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಸುಮಾರು 9 ಮಂದಿ ಮಹಿಳೆಯರೂ  ಸೇರಿದಂತೆ ಒಟ್ಟು 39 ಮಂದಿ ಭಾರತೀಯರ ವೀಸಾ ಅವಧಿ ಮುಕ್ತಾಯವಾಗಿರುವ ಮಾಹಿತಿ ಬಹಿರಂಗವಾಗಿದೆ. ಈ 38 ಮಂದಿ ಪೈಕಿ 31 ಮಂದಿ ವೀಸಾ ಅವಧಿ ಮುಗಿದಿದ್ದರೂ ದೇಶದಲ್ಲಿ ಉಳಿದಿದ್ದರು, ಏಳು ಮಂದಿ ಅಕ್ರಮವಾಗಿ  ದೇಶ ಪ್ರವೇಶಿಸಿದ್ದರು ಮತ್ತು ಓರ್ವ ವೀಸಾ ಷರತ್ತು ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ 39 ಮಂದಿಯ ಪೈಕಿ 20 ಮಂದಿಯ ವಿಚಾರಣೆ ನಡೆಸಲಾಗಿದ್ದು, ಕೂಡಲೇ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಇನ್ನುಳಿದ 19 ಮಂದಿಯ ವಿಚಾರಣೆ ಬಾಕಿ ಇದ್ದು, ವಿಚಾರಣೆ  ಬಳಿಕ ಬ್ರಿಟನ್ ನಿಂದ ಹೊರಹಾಕುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತೆಯೇ ವೀಸಾ ಅವಧಿ ಮುಕ್ತಾಯವಾಗಿದ್ದರೂ ವಿದೇಶಿ ನೌಕರರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದ ಬಟ್ಟೆ ಕಾರ್ಖಾನೆಗಳ ವಿರುದ್ಧವೂ ಬ್ರಿಟನ್ ಕಾನೂನಿನಂತೆ ಕ್ರಮ ಕೈಗೊಳ್ಳುವುದಾಗಿ ಈಸ್ಟ್ ಮಿಡ್ ಲ್ಯಾಂಡ್ಸ್ ವಲಸೆ ಜಾರಿ  ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಆಲಿಸನ್ ಸ್ಪೋವೇಜ್ ಮಾಹಿತಿ ನೀಡಿದ್ದಾರೆ. ಪ್ರತೀ ಸಂಸ್ಥೆಗೂ ಕನಿಷ್ಛ 20 ಸಾವಿರ ಪೌಂಡ್ಸ್ ಗಳಿಂದ ಗರಿಷ್ಠ 2, 40,000 ಪೌಂಡ್ಸ್ ಗಳವರೆಗೂ ದಂಡ ಬೀಳುವ ಸಾಧ್ಯತೆ ಇದೆ ಎಂದೂ  ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com