9ನೇ ಬ್ರಿಕ್ಸ್ ಸಮಾವೇಶ ಚೀನಾದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೀಜಿಂಗ್ ಗೆ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹು ಚುಯಿಂಗ್ ಅವರು, ಪಾಕಿಸ್ತಾನ ಭಯೋತ್ಪಾದನೆ ವಿಚಾರ ಬಂದಾಗ ಭಾರತ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಬ್ರಿಕ್ಸ್ ಸಮಾವೇಶದಲ್ಲಿ ಚರ್ಚೆ ನಡೆಸಲು ಇದು ಸೂಕ್ತವಾದ ವಿಚಾರವಲ್ಲ. ಚೀನಾ ನಾಯಕರು ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳುವುದರಿಂದ ಈ ರೀತಿಯ ವಿಚಾರಗಳನ್ನು ಪ್ರಸ್ತಾಪ ಮಾಡುವುದರಿಂದ ಬ್ರಿಕ್ಸ್ ಸಮಾವೇಶ ಯಶಸ್ವಿಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಬ್ರಿಕ್ಸ್ ಸಮಾವೇಶದ ಮೇಲೆ ಇಡೀ ವಿಶ್ವವೇ ಗಮನಹರಿಸುತ್ತಿದ್ದು, ಶೃಂಗಸಭೆ ಯಶಸ್ವಿಗೊಳ್ಳಲು ಬ್ರಿಕ್ಸ್ ದೇಶಗಳು ಚೀನಾದೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆಂದು ಭಾವಿಸಿತ್ತೇವೆಂದು ತಿಳಿಸಿದ್ದಾರೆ.
73 ದಿನಗಳ ಡೋಕ್ಲಾಮ್ ವಿವಾದ ಬಗೆಹರಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಬ್ರಿಕ್ಸ್' ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸೆ.3 ರಿಂದ 5ರವರೆಗೆ ಚೀನಾ ಯಾತ್ರೆ ಕೈಗೊಳ್ಳಲಿದ್ದಾರೆ.