ಮ್ಯಾಂಚೆಸ್ಟರ್ ದಾಳಿ: ಬ್ರಿಟನ್ ಪೊಲೀಸರಿಂದ ಮತ್ತೆ ಇಬ್ಬರ ಬಂಧನ, ಮಹಿಳೆ ಬಿಡುಗಡೆ

22 ಮಂದಿಯನ್ನು ಬಲಿ ಪಡೆದ ಮ್ಯಾಂಚೆಸ್ಟರ್​ನ ಅರೇನಾ ಸ್ಟೇಡಿಯಂನ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ....
ದಾಳಿ ನಡೆದ ಅರೇನಾ ಸ್ಟೇಡಿಯಂ
ದಾಳಿ ನಡೆದ ಅರೇನಾ ಸ್ಟೇಡಿಯಂ
Updated on
ಮ್ಯಾಂಚೆಸ್ಟರ್: 22 ಮಂದಿಯನ್ನು ಬಲಿ ಪಡೆದ ಮ್ಯಾಂಚೆಸ್ಟರ್​ನ ಅರೇನಾ ಸ್ಟೇಡಿಯಂನ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ ಇಬ್ಬರನ್ನು ಬಂಧಿಸಿರುವುದಾಗಿ ಹಾಗೂ ಈ ಮುಂಚೆ ವಶಕ್ಕೆ ಪಡೆದಿದ್ದ ಮಹಿಳೆಯನ್ನು ಬಿಡುಗಡೆ ಮಾಡಿರುವುದಾಗಿ ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.
ಕಳೆದ ಸೋಮವಾರ ರಾತ್ರಿ ಮ್ಯಾಂಚೆಸ್ಟರ್​ನ ಅರೇನಾ ಬಾಂಬ್ ದಾಳಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬ್ರಿಟನ್ ಪೊಲೀಸರು, ಇಂದು ಮತ್ತೆ ಇಬ್ಬರನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಅರೇನಾ ಸ್ಟೇಡಿಯಂನಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ಸ್ಫೋಟಿಸಿದ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಕಳೆದ 12 ವರ್ಷಗಳಲ್ಲಿ ನಡೆದಿರುವ ಅತಿ ಭೀಕರ ಸ್ಫೋಟ ಇದಾಗಿದೆ.
ಸೋಮವಾರ ರಾತ್ರಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಯುವ ಅಭಿಮಾನಿಗಳೇ ಭಾಗವಹಿಸಿದ್ದರು. ಸ್ಫೋಟ ನಡೆದ ಕೂಡಲೇ ಸ್ಟೇಡಿಯಂ ನಿಂದ ಹೆದರಿ ದಿಕ್ಕಾಪಾಲಾಗಿ ಓಡಿದ್ದರು.
ಈ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಇಸೀಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com