ವಿದೇಶ

ಅಮೆರಿಕ ಬೆನ್ನಲ್ಲೇ ಯುನೆಸ್ಕೋ ದಿಂದ ಹೊರ ನಡೆದ ಇಸ್ರೇಲ್!

ಅಮೆರಿಕ ಬೆನ್ನಲ್ಲೇ ಯುನೆಸ್ಕೋ ದಿಂದ ಹೊರ ನಡೆದ ಇಸ್ರೇಲ್!
ಇಸ್ರೇಲ್ ಪ್ರಧಾನಿ ನೆತಾನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ (ಸಂಗ್ರಹ ಚಿತ್ರ)
Published On :
ವಾಷಿಂಗ್ಟನ್: ಇಸ್ರೇಲ್ ವಿರೋಧಿ ಪಕ್ಷಪಾತ ಧೋರಣೆ ಆರೋಪ ಮಾಡಿ ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯುನೆಸ್ಕೋದಿಂದ ಅಮೆರಿಕ ಹೊರನಡೆದ ಬೆನ್ನಲ್ಲೇ ಇಸ್ರೇಲ್ ದೇಶ ಕೂಡ ಯುನೆಸ್ಕೋದಿಂದ ಹೊರ ನಡೆದಿದೆ.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿರುವ ಯುನೆಸ್ಕೋದಿಂದ ಹೊರಬಂದ ಇಸ್ರೇಲ್ ನಡೆಯಿಂದಾಗಿ ಯುನೆಸ್ಕೋ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗುವಂತೆ ಮಾಡಿದೆ. ಯುನೆಸ್ಕೋದಿಂದ  ಹೊರಬಂದ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಪ್ರಕಟಣೆ ಹೊರಡಿಸಿದ್ದು, ಪ್ಯಾರಿಸ್ ಮೂಲದ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿರುವ ಯುನೆಸ್ಕೋ ಇಸ್ರೇಲ್  ವಿರೋಧಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಯುನೆಸ್ಕೋ ಒಕ್ಕೂಟದಿಂದ ಹೊರ ಬಂದ ಅಮೆರಿಕದ ನಿರ್ಧಾರವನ್ನು ಶ್ಲಾಘಿಸಿರುವ ನೆತನ್ಯಾಹು, ಅಮೆರಿಕದ ನಿರ್ಧಾರ ದಿಟ್ಟ, ಕೆಚ್ಚೆದೆಯ ಮತ್ತು ನೈತಿಕ'ವಾದದ್ದು ಎಂದು ಬಣ್ಣಿಸಿದ್ದಾರೆ.

ಇನ್ನು ಯುನೆಸ್ಕೋದಿಂದ ಅಮೆರಿಕ ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯುನೆಸ್ಕೋ ಪ್ರಧಾನಿ ನಿರ್ದೇಶಕ ಇರಿನಾ ಬೊಕೋವಾ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, "ಅಮೆರಿಕದ  ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಅವರ ಅಧಿಕೃತ ಪತ್ರ ನಮಗೆ ದೊರೆತಿದ್ದು, ಯುನೆಸ್ಕೋದಿಂದ ಹೊರನಡೆಯುವ ಅಮೆರಿಕ ನಿರ್ಧಾರ ವಿಷಾಧಕರ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.