ಇದೇ ವೇಳೆ ಭಾರತ ಮತ್ತು ಚೀನಾ ದೇಶಗಳ ನಡುವಿನ ಡೋಕ್ಲಾಂ ಗಡಿ ವಿವಾದ ಸಂಬಂಧ ಮಾತನಾಡಿದ ತಾಂಗ್ ಯುಂಗೈ, ಗಡಿ ವಿವಾದ ದೊಡ್ಡ ವಿವಾದವೇನೂ ಅಲ್ಲ. ಎಲ್ಲ ದೇಶಗಳ ನಡುವೆ ಈ ಸಮಸ್ಯೆ ಇದಿದ್ದೇ..ಆದರೆ ನನಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮೇಲೆ ವಿಶ್ವಾಸವಿದ್ದು, ಖಂಡಿತಾ ಬ್ರಿಕ್ಸ್ ಸಮಾವೇಶದ ವೇಳೆ ಡೊಕ್ಲಾಂ ಗಡಿ ವಿವಾದವನ್ನು ಬಗೆ ಹರಿಸುತ್ತಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಹಿಂದಿಯ ಬ್ಲಾಕ್ ಬಸ್ಟರ್ ಚಿತ್ರ ನೂರಿ ಚಿತ್ರದ "ಆ ಜಾರೇ" ಚಿತ್ರಗೀತೆಯನ್ನು ಹಾಡಿದ ತಾಂಗ್ ಯುಂಗೈ, ಭಾರತೀಯರಿಗೆ ಕೈ ಮುಗಿದು ನಮಸ್ತೆ ಎಂದು ಹೇಳಿದ್ದಾರೆ.