ಬ್ರಿಕ್ಸ್ ಸಮಾವೇಶ: ಭಯೋತ್ಪಾದನೆ ಕುರಿತಂತೆ ದ್ವಿಮುಖ ಧೋರಣೆ ಸಲ್ಲದು: ಭಾರತ

ಈ ಹಿಂದೆ ಜೈಶ್ ಇ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಅಡ್ಡಗಾಲು ಹಾಕಿದ್ದ ಚೀನಾಕ್ಕೆ ಭಾರತ ಜಾಗತಿಕ ವೇದಿಕೆಯಲ್ಲಿ ತಿರುಗೇಟು ನೀಡಿದ್ದು, ಭಯೋತ್ಪಾದನೆ ಕುರಿತಂತೆ ದ್ವಿಮುಖ ಧೋರಣೆ ಸಲ್ಲದು ಎಂದು ಹೇಳಿದೆ.
ವಿದೇಶಾಂಗ ಕಾರ್ಯದರ್ಶಿ ಪ್ರೀತಿ ಶರಣ್ ಸುದ್ದಿಗೋಷ್ಠಿ
ವಿದೇಶಾಂಗ ಕಾರ್ಯದರ್ಶಿ ಪ್ರೀತಿ ಶರಣ್ ಸುದ್ದಿಗೋಷ್ಠಿ
Updated on: 
ಬೀಜಿಂಗ್: ಈ ಹಿಂದೆ ಜೈಶ್ ಇ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಅಡ್ಡಗಾಲು ಹಾಕಿದ್ದ ಚೀನಾಕ್ಕೆ ಭಾರತ ಜಾಗತಿಕ ವೇದಿಕೆಯಲ್ಲಿ ತಿರುಗೇಟು ನೀಡಿದ್ದು, ಭಯೋತ್ಪಾದನೆ  ಕುರಿತಂತೆ ದ್ವಿಮುಖ ಧೋರಣೆ ಸಲ್ಲದು ಎಂದು ಹೇಳಿದೆ.
ಬ್ರಿಕ್ಸ್ ಸಮಾವೇಶದ ಜಾಗತಕಿ ನಾಯಕರ ಭೇಟಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಪ್ರೀತಿ ಶರಣ್ ಅವರು ಚೀನಾ ಹೆಸರನ್ನು ಪ್ರಸ್ತಾಪಿಸದೇ ಭಯೋತ್ಪಾದನೆ ಸಂಬಂಧ ಆ  ದೇಶವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತನಾಡಿದ ಅವರು ಇಡೀ ವಿಶ್ವವನ್ನು ಪೀಡಿಸುತ್ತಿರುವ ಭಯೋತ್ಪಾದನೆ ಕುರಿತಂತೆ ದ್ವಿಮುಖ ಧೋರಣೆ ಸಲ್ಲದು. ಉಗ್ರ ನಿಗ್ರಹಕ್ಕಾಗಿ ನಾವು ಒಗ್ಗೂಡಲೇ ಬೇಕು. ಜಾಗತಿಕವಾಗಿ  ನಾವು ಒಗ್ಗೂಡಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಬ್ರಿಕ್ಸ್ ಸಮಾವೇಶದಲ್ಲಿ ನಾಯಕರು ಕೈಗೊಂಡ ನಿರ್ಣಯಗಳ ಕುರಿತು ಮಾತನಾಡಿದ ಅವರು, ಉಗ್ರರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವಿನ ವ್ಯವಸ್ಥೆಯನ್ನು ಕತ್ತರಿಸಬೇಕು. ಬ್ರಿಕ್ಸ್ ರಾಷ್ಟ್ರಗಳು ತಮ್ಮ ದೇಶಗಳಲ್ಲಿನ  ಉಗ್ರ ಸಂಘಟನೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂಬ ನಿರ್ಣಯಕ್ಕೆ ಬಂದಿವೆ. ಇದೇ ಮೊದಲ ಬಾರಿಗೆ ಬ್ರಿಕ್ಸ್ ಸಮಾವೇಶದಲ್ಲಿ ಉಗ್ರ ಸಂಘಟನೆಗಳನ್ನು ಪಟ್ಟಿ ಮಾಡಲಾಗಿದ್ದು, ಈ ಸಂಘಟನೆಗಳನ್ನು ಜಾಗತಿಕ  ಉಗ್ರ ಸಂಘಟನೆಗಳು ಎಂದು ಘೋಷಣೆ ಮಾಡಲಾಗಿದೆ. ಅಂತೆಯೇ ಈ ಸಂಘಟನೆಗಳ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳು ಒಗ್ಗೂಡಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಉಲ್ಲೇಖಿಸಿದ ಪ್ರೀತಿ ಶರಣ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ರಾಷ್ಟ್ರಗಳ ಸೌಹಾರ್ಧ ಸಂಬಂಧ ಗಟ್ಟಿಯಾಗಬೇಕು ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದಾರೆ  ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com