ಹಫೀಜ್ ನಿಮಗೆ ಪ್ರೀತಿ ಪಾತ್ರನಾಗಿದ್ದ ವ್ಯಕ್ತಿಯೇ, ನಮ್ಮನ್ನು ದೂಷಿಸಬೇಡಿ: ಅಮೆರಿಕಾಗೆ ಪಾಕ್

Published On :
ನ್ಯೂಯಾರ್ಕ್: ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ನಿಮ್ಮ ಪ್ರೀತಿ ಪಾತ್ರನಾಗಿದ್ದ ವ್ಯಕ್ತಿಯೇ ಆಗಿದ್ದು, ನಮ್ಮನ್ನು ದೂಷಿಸಬೇಡಿ ಎಂದು ಅಮೆರಿಕಾಗೆ ಪಾಕಿಸ್ತಾನ ಮಂಗಳವಾರ ಹೇಳಿದೆ.
ನ್ಯೂಯಾರ್ಕ ನಲ್ಲಿ ನಡೆಯುತ್ತಿರುವ ಏಷ್ಯಾ ಸೊಸೈಟಿ ಸೆಮಿನಾರ್'ನಲ್ಲಿ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜಾ ಆಸಿಫ್, ಹಕ್ಕಾನಿ, ಹಫೀಜ್ ಸಯೀದ್ ಹಾಗೂ ಲಷ್ಕರ್-ಇ-ತೊಯ್ಬಾಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂದು ಸುಲಭವಾಗಿ ಹೇಳಬಹುದು. ಹಫೀಜ್ ಒಬ್ಬ ಅಪರಾಧಿ, ಇದನ್ನು ಪಾಕಿಸ್ತಾನ ಕೂಡ ಹೇಳಿದೆ. ಆದರೆ, ಇವುಗಳಿಂದ ಹೊರ ಬರಲು ನಮಗೆ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ.
ಹಕ್ಕಾನಿ ಹಾಗೂ ಹಫೀಜ್ ಸಯೀದ್ ಕುರಿತಂತೆ ನಮ್ಮನ್ನು ದೂಷಿಸಬೇಡಿ. 20-30 ವರ್ಷಗಳ ಹಿಂದೆ ಇದೇ ವ್ಯಕ್ತಿಗಳು ವಾಷಿಂಗ್ಟನ್'ಗೆ ಪ್ರೀತಿ ಪಾತ್ರರಾದ ವ್ಯಕ್ತಿಯಾಗಿದ್ದರು. ಇದೀಗ ಶ್ವೇತಭವನ ಹಫೀಜ್ ನನ್ನು ತಿರಸ್ಕರಿಸುತ್ತಿರುವುದರಿಂದ, ನಿಮ್ಮ ಜನರನ್ನೇ ನೀವು ಪೋಷಣೆ ಮಾಡುತ್ತಿರುವುದರಿಂದ ಹಫೀಜ್ ರಂತಹವರನ್ನು ಪಾಕಿಸ್ತಾನದ ನರಕಕ್ಕೆ ಹೋಗಿ ಎನ್ನುತ್ತಿದ್ದೀರಾ... ಎಂದು ಪ್ರಶ್ನಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವಿಶ್ವಸಂಸ್ಥೆ 72ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ್ದ ಸುಷ್ಮಾ ಸ್ವರಾಜ್ ಅವರು, ಭಾರತ ಬಡತನ ನಿರ್ಮೂಲನೆ ಬಗ್ಗೆ ಗಮನ ಹರಿಸಿದರೆ, ಪಾಕಿಸ್ತಾನ ಉಗ್ರ ಸಂಘಟನೆಗಳನ್ನು ಹುಟ್ಟು ಹಾಕುವಿಕೆಯತ್ತ ಗಮನ ಹರಿಸುತ್ತಿದೆ. ನಾವು ಐಐಟಿ, ಎಐಐಎಂಎಸ್ ಮತ್ತು ಇಸ್ರೋ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ನೋಡುತ್ತಿದ್ದೇವೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


