ಬ್ರಿಟನ್ ರಾಣಿ ಎಲಿಜಬೆತ್ ಪ್ರವಾದಿ ಮೊಹಮ್ಮದ್ ವಂಶಸ್ಥೆ?

ವಿಶ್ವದ ಅತ್ಯಂತ ಪ್ರಾಚೀನ ರಾಜಮನೆತನವೆಂದೇ ಖ್ಯಾತ ಬ್ರಿಟೀಷ್ ರಾಜಮನೆತನದ ರಾಣಿ 2ನೇ ಎಲಿಜಬೆತ್ ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾಗಿ ಮೊಹಮ್ಮದ್ ವಂಶಸ್ತರು ಎಂಬುದಾಗಿ...
Queen Elizabeth
Queen Elizabeth
ಲಂಡನ್: ವಿಶ್ವದ ಅತ್ಯಂತ ಪ್ರಾಚೀನ ರಾಜಮನೆತನವೆಂದೇ ಖ್ಯಾತ ಬ್ರಿಟೀಷ್ ರಾಜಮನೆತನದ ರಾಣಿ 2ನೇ ಎಲಿಜಬೆತ್ ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾಗಿ ಮೊಹಮ್ಮದ್ ವಂಶಸ್ತರು ಎಂಬುದಾಗಿ ಅಧ್ಯಯನವೆಂದು ತಿಳಿಸಿದ ವಿಚಾರ ಇದೀಗ ಬಹಿರಂಗಗೊಂಡಿದೆ. ವಿಶೇಷವೆಂದರೆ ರಾಣಿ ಎಲಿಜಬೆತ್ ಕ್ರೈಸ್ತ ಧರ್ಮೀಯರಾಗಿದ್ದರೆ, ಅವರ ಮೂಲ ಇಸ್ಲಾಂ ಆಗಿದೆ. 
ಬ್ರಿಟನ್ ರಾಜಮನೆತನದ ಇತಿಹಾಸಗಳ ಕುರಿತು ಸಮಗ್ರ ಮಾಹಿತಿ ಹೊಂದಿರುವ ಪ್ರಸಿದ್ಧ ಪುಸ್ತಕ ಪ್ರಕಟಣೆ ಸಂಸ್ಥೆ ಬೂರ್ಕೇಸ್ ಪೀರೆಜ್ ನಡೆಸಿದ್ದ ಅಧ್ಯಯನದಲ್ಲಿ ರಾಣಿ ಎಲಿಜಬೆತ್, ಮೊಹಮ್ಮದ್ ಅವರ 43ನೇ ತಲೆಮಾರಿನ ಕುಡಿ ಎಂದು 1986ರಲ್ಲೇ ತಿಳಿಸಿದೆ. 
ಇದರ ಸಮರ್ಥನೆಗಾಗಿ ಸಂಸ್ಥೆ ಪ್ರವಾದಿ ಮೊಹಮ್ಮದ್ ರಿಂದ ಹಿಡಿದು ಇದೀಗ ಬ್ರಿಟನ್ ರಾಣಿ 2ನೇ ಎಲಿಜಬೆತ್ ವರೆಗಿನ ವಂಶವೃಕ್ಷದ ಸಮಗ್ರ ಮಾಹಿತಿಗಳನ್ನು ದಾಖಲೆಗಳ ರೂಪದಲ್ಲಿ ನೀಡಿದೆ. 
ಇದೀಗ ಮೊರಾಕ್ಕೋ ದೇಶದ ಪತ್ರಿಕೊಂದು ಈ ವಿಷಯವನ್ನು ಮತ್ತೆ ಪ್ರಸ್ತಾಪ ಮಾಡುವ ಮೂಲಕ ವಿಷಯವನ್ನು ಮತ್ತೆ ಚರ್ಚೆಗೆ ಬರುವಂತೆ ಮಾಡಿದೆ. 
11ನೇ ಶತಮಾನದಲ್ಲಿ ಪ್ರವಾದಿ ಮೊಹಮ್ಮದ್ ಅವರ ಕುಟುಂಬಕ್ಕೆ ಸೇರಿದ ರಾಣಿ ಝಾದಿಯಾ ಎಂಬಾಕೆ ಮನೆಯಿಂದ ಓಡಿಹೋಗಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ತನ್ನ ಹೆಸರನ್ನು ಇಸ್ಟೆಲ್ಲಾ ಎಂದು ಬದಲಿಸಿಕೊಂಡಿದ್ದರು. ನಂತರ ಈಕೆಯ ಕುಟುಂಬದ ಕುಡಿಯಾಗಿ ರಾಣಿ 2ನೇ ಎಲಿಜಬೆತ್ ಕೂಡ ಜನಿಸಿದ್ದಾರೆ. ಹೀಗಾಗಿ ಮುಸ್ಲಿಂ ಮೂಲದ ರಾಣಿಗೆ ಕ್ರೈಸ್ತ ಧರ್ಮದ ನಂಟು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com