ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ವಿದೇಶ ಪ್ರವಾಸದ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿದ್ದು. ಮುಂದಿನ ವಾರ ದಕ್ಷಿಣ ಆಫ್ರಿಕಾದ ಜೊಹಾನೆಸ್ ಬರ್ಗ್ ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸೀ ಝಿನ್‌ಪಿಂಗ್‌ರನ್ನು ಭೇಟಿಯಾಗಲಿದ್ದಾರೆ. ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾಗಳು ಸದಸ್ಯರಾಗಿರುವ ಬ್ರಿಕ್ಸ್ ಒಕ್ಕೂಟದ 10ನೇ ಶೃಂಗಸಭೆಯು ಜುಲೈ25 ರಿಂದ 27ರವರೆಗೆ ನಡೆಯಲಿದೆ.