ದಿನಂಪ್ರತಿ ರಾತ್ರಿ ಮಲಗಿದಾಗ ಹೆಂಡತಿಯ ಗೊರಕೆ ಶಬ್ಧದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪತಿಯೊಬ್ಬ ಸುಮಾರು 800 ಮೀಟರ್ ಸುರಂಗವನ್ನು ಕೊರೆದಿದ್ದಾನೆ. ಇದಕ್ಕೆ ಆತ ತೆಗೆದುಕೊಂಡಿದ್ದು ಬರೋಬ್ಬರಿ 15 ವರ್ಷಗಳ ಕಾಲ. ಇನ್ನು ದಿ ಶಾವಂಶ್ವಾಂಕ್ ರಿಡೆಂಪ್ಶನ್ ಚಿತ್ರದಿಂದ ಸ್ಫೂರ್ತಿ ಪಡೆದು ಈ ಕೆಲಸ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.