ಲಂಡನ್ ನಲ್ಲಿ ಸೇನಾ ಮುಖ್ಯಸ್ಥ ಜ.ಕಮರ್ ಜಾವೇದ್ ಬಾಜ್ವಾ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ವಕ್ತಾರ ಜ.ಆಸಿಫ್ ಗಫೂರ್, ಭಾರತವೇನಾದರೂ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದೇ ಆದರೆ, ಭಾರತದ ಮೇಲೆ ಅದೇ ರೀತಿಯ 10 ದಾಳಿ ನಡೆಸುವ ಸಾಮರ್ಥ್ಯ ಪಾಕಿಸ್ತಾನಕ್ಕಿದೆ ಎಂದು ಹೇಳಿದ್ದಾರೆ.