Nepal allows Indian high-value notes after a decade-long ban
ಸಾಂದರ್ಭಿಕ ಚಿತ್ರ

ನೇಪಾಳದಲ್ಲಿ ದಶಕದ ನಂತರ ಭಾರತದ ಕರೆನ್ಸಿ ಮೇಲಿನ ನಿಷೇಧ ತೆರವು; ಯಾವ ನೋಟುಗಳಿಗೆ ಅನುಮತಿ ಗೊತ್ತಾ?

ಸೋಮವಾರ ನಡೆದ ನೇಪಾಳ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಪುಟ ಮೂಲಗಳು ತಿಳಿಸಿವೆ.
Published on

ಕಠ್ಮಂಡು: ಹಿಮಾಲಯ ತಪ್ಪಲಿನ ರಾಷ್ಟ್ರದಲ್ಲಿ ಭಾರತೀಯ ಕರೆನ್ಸಿ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ನೇಪಾಳ ಸಡಿಲಗೊಳಿಸಿದ್ದು, ದಶಕದಿಂದಲೂ ಇದ್ದ ನಿಷೇಧವನ್ನು ತೆರವುಗೊಳಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

200 ಮತ್ತು 500 ರೂಪಾಯಿಗಳ ಭಾರತೀಯ ನೋಟುಗಳ ಮೇಲಿನ ನಿಷೇಧವನ್ನು ನೇಪಾಳ ತೆರವುಗೊಳಿಸಿದ್ದು, ಪ್ರತಿ ವ್ಯಕ್ತಿಗೆ ಗರಿಷ್ಠ 25,000 ರೂಪಾಯಿಗಳವರೆಗೆ ಭಾರತೀಯ ಕರೆನ್ಸಿ ಹೊಂದಬಹುದು ಎಂದು ಹೇಳಿದೆ.

ಸೋಮವಾರ ನಡೆದ ನೇಪಾಳ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಪುಟ ಮೂಲಗಳು ತಿಳಿಸಿವೆ.

ಪರಿಷ್ಕೃತ ನಿಬಂಧನೆಯಡಿಯಲ್ಲಿ, ನೇಪಾಳಿ ಮತ್ತು ಭಾರತೀಯ ನಾಗರಿಕರು ಇಬ್ಬರೂ ಹೆಚ್ಚಿನ ಮೌಲ್ಯದ ಬ್ಯಾಂಕ್ ನೋಟುಗಳನ್ನು ಭಾರತದಿಂದ ನೇಪಾಳಕ್ಕೆ ತರಬಹುದು ಅಥವಾ ನೇಪಾಳದಿಂದ ಭಾರತಕ್ಕೆ ಕೊಂಡೊಯ್ಯಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ವಿನಿಮಯ ನಿರ್ವಹಣೆ(ಕರೆನ್ಸಿಯ ರಫ್ತು ಮತ್ತು ಆಮದು) ನಿಯಮಗಳು, 2015ಕ್ಕೆ ತಿದ್ದುಪಡಿಗಳನ್ನು ತಂದ ನಂತರ ನೇಪಾಳ ಸಂಪುಟ ನಿರ್ಧಾರ ಹೊರಬಿದ್ದಿದೆ.

Nepal allows Indian high-value notes after a decade-long ban
ಚೀನಾಗೆ ಟಕ್ಕರ್: ಯುದ್ಧಭೂಮಿ ಪ್ರವಾಸೋದ್ಯಮಕ್ಕಾಗಿ ಸಿಕ್ಕಿಂನ ಚೋ ಲಾ, ಡೋಕ್ ಲಾ ಪಾಸ್‌ಗಳನ್ನು ತೆರೆದ ಭಾರತ!

ಭಾರತ, ನೇಪಾಳಿ ಮತ್ತು ಭೂತಾನಿನ ಪ್ರಜೆಗಳು ಭಾರತಕ್ಕೆ ಮತ್ತು ಭಾರತದಿಂದ ಪ್ರಯಾಣಿಸುವಾಗ ಹೆಚ್ಚಿನ ಮೌಲ್ಯದ ಭಾರತೀಯ ಕರೆನ್ಸಿಯನ್ನು ಸಾಗಿಸಲು ಈ ತಿದ್ದುಪಡಿ ಅನುಮತಿಸುತ್ತದೆ.

ನೇಪಾಳ ರಾಷ್ಟ್ರ ಬ್ಯಾಂಕ್(NRB) ವಕ್ತಾರ ಗುರು ಪ್ರಸಾದ್ ಪೌಡೆಲ್ ಅವರ ಪ್ರಕಾರ, ಸರ್ಕಾರದ ನಿರ್ಧಾರವು ನೇಪಾಳ ಗೆಜೆಟ್‌ನಲ್ಲಿ ಪ್ರಕಟವಾದ ನಂತರ, ಭಾರತದಿಂದ ನೇಪಾಳಕ್ಕೆ ಪ್ರಯಾಣಿಸುವ ವ್ಯಕ್ತಿಗಳು ಅಥವಾ ನೇಪಾಳದಿಂದ ಭಾರತಕ್ಕೆ ಬರುವ ವ್ಯಕ್ತಿಗಳು ಹೆಚ್ಚಿನ ಮೌಲ್ಯದ ಭಾರತೀಯ ಬ್ಯಾಂಕ್ ನೋಟುಗಳ ಬಳಕೆಯನ್ನು ಕಾನೂನುಬದ್ಧಗೊಳಿಸುವ ಸುತ್ತೋಲೆಯನ್ನು NRB ಹೊರಡಿಸುತ್ತದೆ ಎಂದು ಹೇಳಿದ್ದಾರೆ.

ಇದು ಪ್ರವಾಸಿಗರು ಮತ್ತು ಎರಡೂ ದೇಶಗಳ ಉದ್ಯಮಿಗಳು ಉಭಯ ದೇಶಗಳೊಂದಿಗೆ ಪ್ರಯಾಣಿಸಲು ಅಥವಾ ವ್ಯವಹಾರ ನಡೆಸಲು ಅನುಕೂಲವಾಗುತ್ತದೆ.

"ಇದು ನಮ್ಮ ದೀರ್ಘಕಾಲದ ವಿನಂತಿಯಾಗಿತ್ತು ಮತ್ತು ಭಾರತವು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತು" ಪೌಡೆಲ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com