West Asia crisis: ಬಾಂಗ್ಲಾದೇಶದ ಆರು ತೈಲ ಹಡಗುಗಳು ಹಾರ್ಮುಜ್ ದಾಟಲು ಇರಾನ್ ಅನುಮತಿ

"ಬಾಂಗ್ಲಾದೇಶಿಗಳು ಯಾವುದೇ ತೊಂದರೆ ಎದುರಿಸುವುದನ್ನು ಇರಾನ್ ಬಯಸುವುದಿಲ್ಲ ಮತ್ತು ಹಾರ್ಮುಜ್ ಮೂಲಕ ಇಂಧನವನ್ನು ಸಾಗಿಸಲು ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತದೆ".
Tankers are seen off the Hormuz
ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ ಸಾಗಣೆ ಹಡಗುಗಳ ಸಾಂದರ್ಭಿಕ ಚಿತ್ರ
Updated on

ಢಾಕಾ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಮಧ್ಯೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಕಾಯುತ್ತಿದ್ದ ಬಾಂಗ್ಲಾದೇಶದ ಆರು ಇಂಧನ ಸಾಗಿಸುವ ಹಡಗುಗಳು ಸುರಕ್ಷಿತವಾಗಿ ತೆರಳಲು ತನ್ನ ಭದ್ರತಾ ಮಂಡಳಿ ಅನುಮೋದಿಸಿದೆ ಎಂದು ಇರಾನ್ ಬುಧವಾರ ತಿಳಿಸಿದೆ.

ಆಮದು ಮಾಡಿಕೊಂಡ ಇಂಧನದ ಮೇಲೆ ಹೆಚ್ಚು ಅವಲಂಬಿತವಾಗಿರುವ ಬಾಂಗ್ಲಾದೇಶದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಕ್ಷೀಣಿಸುತ್ತಿರುವುದರಿಂದ, ಕತಾರ್‌ನಿಂದ ಐದು ಎಲ್‌ಎನ್‌ಜಿ ಸಾಗಣೆಗಳು ಮತ್ತು ಸೌದಿ ಅರೇಬಿಯಾದಿಂದ ಒಂದು ಕಚ್ಚಾ ತೈಲ ಸರಕು, ಸುಮಾರು 5 ಲಕ್ಷ ಟನ್ ಎಲ್‌ಎನ್‌ಜಿ ಹಾಗೂ ಸುಮಾರು 79,000 ಟನ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿವೆ.

"ಬಾಂಗ್ಲಾದೇಶಿಗಳು ಯಾವುದೇ ತೊಂದರೆ ಎದುರಿಸುವುದನ್ನು ಇರಾನ್ ಬಯಸುವುದಿಲ್ಲ ಮತ್ತು ಹಾರ್ಮುಜ್ ಮೂಲಕ ಇಂಧನವನ್ನು ಸಾಗಿಸಲು ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತದೆ" ಎಂದು ಢಾಕಾದಲ್ಲಿರುವ ಇರಾನ್ ರಾಯಭಾರಿ ಜಲೀಲ್ ರಹೀಮಿ ಜಹಾನಾಬಾದಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Tankers are seen off the Hormuz
ಹಾರ್ಮುಜ್ ಜಲಸಂಧಿಗೆ ಇರಾನ್ ನಿರ್ಬಂಧ: ಜಗತ್ತಿಗೆ ಸುಗಮ ತೈಲ ಸಾಗಣೆಗೆ ಇರುವ ಪರ್ಯಾಯ ಆಯ್ಕೆಗಳ್ಯಾವುವು? ಇಲ್ಲಿದೆ ಮಾಹಿತಿ

ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಿಂದ ಇಸ್ಲಾಮಿಕ್ ರಾಷ್ಟ್ರ, ಪ್ರತೀಕಾರ ತೀರಿಸಿಕೊಳ್ಳಲು ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಹೀಗಾಗಿ ಬಾಂಗ್ಲಾದೇಶ, ಜಲಸಂಧಿಯ ಮೂಲಕ ತನ್ನ ಹಡಗುಗಳು ಹಾದುಹೋಗಲು ಅನುಮತಿಸುವಂತೆ ಇರಾನ್‌ಗೆ ಮನವಿ ಮಾಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com